ಶೂಟಿಂಗ್ ಮಾಡುವ ವೇಳೆ ಅಜಿತ್ ಸಿನಿಮಾದ ಕಲಾ ನಿರ್ದೇಶಕನಿಗೆ ಹೃದಯಾಘಾತ: ಅಜೆರ್ಬೈಜಾನ್ ದೇಶದಲ್ಲಿ ನಿಧನ

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ 'ವಿಡಮುಯಾರ್ಚಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಅಜೆರ್ಬೈಜಾನ್ ದೇಶದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಎಂದಿನಂತೆ ಇಂದು (ಅಕ್ಟೋಬರ್ 15) ಕೂಡ ಚಿತ್ರೀಕರಣಕ್ಕೆ ಬಂದಿದ್ದ ಕಲಾ ನಿರ್ದೇಶಕ ಮಿಲನ್ ಹಠಾತ್ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಉತ್ಸಾಹದಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಚಿತ್ರತಂಡ ಅಘಾತದಲ್ಲಿದೆ. ದಕ್ಷಿಣ ಭಾರತದ ಜನಪ್ರಿಯ ಕಲಾ ನಿರ್ದೇಶಕರಲ್ಲಿ ಮಿಲನ್ ಕೂಡ ಒಬ್ಬರು. ಅಜಿತ್ ಕುಮಾರ್ ನಟಿಸಿದ ಬಿಗ್ ಬಜೆಟ್ ಸಿನಿಮಾಗಳಿಗೆ ಮಿಲನ್ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

Ajith Kumar Movie Vidaamuyarchi art director Milan passed away in Azerbaijan

ಇಂದು (ಅಕ್ಟೋಬರ್ 15) ಬೆಳಗ್ಗೆ ಶೂಟಿಂಗ್ ಸ್ಪಾಟ್‌ಗೆ ಬಂದಿದ್ದ ಮಿಲನ್‌ಗೆ ಆಯಾಸ ಕಾಣಿಸಿಕೊಂಡಿತ್ತು. ಬಳಿಕ ಸಿಕ್ಕಾಪಟ್ಟೆ ಬೆವರುತ್ತಿದ್ದರು. ತಕ್ಷಣವೇ ಪ್ರೊಡಕ್ಷನ್ ಟೀಮ್ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿತ್ತು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಮಿಲನ್ ನಿಧನರಾಗಿದ್ದರು" ಎಂದು ಇ ಟೈಮ್ಸ್‌ಗೆ ಚಿತ್ರತಂಡ ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.

ಮಿಲನ್ ಸುಮಾರು 30ಕ್ಕೂ ಅಧಿಕ ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 'ಬಿಲ್ಲ', 'ವೀರಂ', 'ವೇದಾಲಂ' ಸೇರಿದಂತೆ ಹಲವು ಸಿನಿಮಾಗಳಿಗೆ ಕಲಾ ನಿರ್ದೇಶನ ಮಾಡಿದ್ದಾರೆ. 54 ವರ್ಷ ಮಿಲನ್ ಇತ್ತೀಚೆಗೆ ಸೂರ್ಯ ನಟಿಸುತ್ತಿರುವ ಬಿಗ್ ಬಜೆಟ್ ಸಿನಿಮಾ 'ಕಂಗುವ' ಸಿನಿಮಾಗೂ ಕಲಾ ನಿರ್ದೇಶಕರಾಗಿದ್ದರು.

ಅಜಿತ್ ಕುಮಾರ್ ನಟಿಸುತ್ತಿರುವ 'ವಿಡಮುಯಾರ್ಚಿ' ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಮಾಗಿಳ್ ತಿರುಮೇನಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರವ್ ಶಾ ಈ ಸಿನಿಮಾ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವಿಷಯ ತಿಳಿದ ಕೂಡಲೇ ಅಜಿತ್ ಕುಮಾರ್ ಹಾಗೂ ನಿರ್ದೇಶಕ ಮಾಗಿಳ್ ತಿರುಮೇನಿ ಆಸ್ಪತ್ರೆಗೆ ದೌಡಾಯಿಸಿದ್ದರು ಎಂದು ವರದಿಯಾಗಿದೆ.

54 ವರ್ಷದ ಮಿಲನ್‌ಗೆ ಪತ್ನಿ ಹಾಗೂ ಮಗನನ್ನು ಬಿಟ್ಟು ಅಗಲಿದ್ದಾರೆ. ಪತ್ನಿ ಚೆನ್ನೈನಲ್ಲಿದ್ದರೆ, ಮಗ ತಂದೆಗೆ ಸಹಾಯಕನಾಗಿ ಅಜೆರ್ಬೈಜಾನ್‌ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಅಜೆರ್ಬೈಜಾನ್‌ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಶೀಘ್ರವೇ ಮಿಲನ್ ಮೃತದೇಹವನ್ನು ಭಾರತಕ್ಕೆ ತೆಗೆದುಕೊಂಡು ಬರಲು ಯತ್ನಿಸಲಾಗುತ್ತಿದೆ ಎಂದು ವರದಿಯಾಗಿದೆ.

More from Filmibeat

English summary
Ajith Kumar Movie Vidamuyarchi art director Milan passed away in Azerbaijan due to cardiac arrest:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X