Vidamuyarchi Box office Day 1:ಅಜಿತ್-ತ್ರಿಶಾ ಜೋಡಿ ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ದೋಚಿದ್ದೆಷ್ಟು?

ಪದ್ಮಭೂಷಣ ಅಜಿತ್ ಕುಮಾರ್ ಹಾಗೂ ತ್ರಿಶಾ ಬಹುತೇಕ ದಶಕಗಳ ಬಳಿಕ ಒಟ್ಟಿಗೆ ನಟಿಸಿದ್ದಾರೆ. ಈ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಇಬ್ಬರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಅಜಿತ್ ಕುಮಾರ್ ಸ್ಟೈಲಿಶ್ ಲುಕ್‌ಗೆ ಫಿದಾ ಆಗಿದ್ದ ಪ್ರೇಕ್ಷಕರು 'ವಿಡಾಮುಯಾರ್ಚಿ' ನೋಡುವುದಕ್ಕೆ ಥಿಯೇಟರ್‌ಗೆ ಇಂದು (ಫೆಬ್ರವರಿ 6) ಲಗ್ಗೆ ಇಟ್ಟಿದ್ದರು.

'ವಿಡಾಮುಯಾರ್ಚಿ' ಸಿನಿಮಾದಲ್ಲಿ ದೊಡ್ಡ ಸ್ಟಾರ್‌ಕಾಸ್ಟ್ ಇದೆ. ಅಜಿತ್ ಕುಮಾರ್ ಜೊತೆ ತ್ರಿಶಾ ನಾಯಕಿಯಾಗಿ ನಟಿಸಿದ್ದರೆ, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ರೆಜಿನಾ ಕ್ಯಾಸೆಂಡ್ರಾ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ತಮಿಳಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿತ್ತು. ಈ ವರ್ಷದ ಬಿಗ್‌ ಸಿನಿಮಾ ಆಗಬಹುದು ಅನ್ನೋ ನಿರೀಕ್ಷೆಯಿತ್ತು.

Ajith Kumar Trisha film Vidamuyarchi Karnataka Box office day 1 report

ಅಜಿತ್ ಕುಮಾರ್ ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೂ, ಮೊದಲ ದಿನ ಬಹುತೇಕ ಶೋ ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಹಾಗೇ ಕರ್ನಾಟಕದಲ್ಲಿಯೂ ಈ ಸಿನಿಮಾವನ್ನು ಸುಮಾರು 285ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮಾಡಲಾಗಿದೆ. ಹಾಗಿದ್ದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ಸಿಕ್ಕಿರುವ ಬಾಕ್ಸಾಫೀಸ್‌ ಲೆಕ್ಕಾಚಾರವೇನು? ಎಲ್ಲೆಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ವಿಡಾಮುಯಾರ್ಚಿ' ಫಸ್ಟ್‌ಡೇ ಕಲೆಕ್ಷನ್ ಏನು?

ಮಗಿಳ್ ತಿರುಮೆನಿ ನಿರ್ದೇಶನ ಮಾಡಿರುವ 'ವಿಡಾಮುಯಾರ್ಚಿ'ಗೆ ಅಮೆರಿಕನ್ ಸಿನಿಮಾ 'ಬ್ರೇಕ್‌ಡೌನ್‌' ಸ್ಪೂರ್ತಿ. ಸಿನಿಮಾ ನೋಡಿದ ವಿಮರ್ಶಕರ ಅಭಿಪ್ರಾಯ. ಹೀಗಿದ್ದರೂ ಅಜಿತ್ ಹಾಗೂ ತ್ರಿಶಾ ಕಾಂಬಿನೇಷನ್ ನೋಡುವುದಕ್ಕೆ ಪ್ರೇಕ್ಷಕರು ಥಿಯೇಟರ್‌ ಎಂಟ್ರಿ ಕೊಟ್ಟಿದ್ದಾರೆ. ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್.ಕಾಮ್ ಪ್ರಕಾರ ಮೊದಲ ದಿನದ 'ವಿಡಾಮುಯಾರ್ಚಿ' ದೇಶಾದ್ಯಂತ ಸುಮಾರು 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ.

ಕರ್ನಾಟಕ ಕಲೆಕ್ಷನ್ ಎಷ್ಟು?

ಅಜಿತ್ ಕುಮಾರ್ ಸಿನಿಮಾಗೆ ಕರ್ನಾಟಕದಲ್ಲೂ ಅಭಿಮಾನಿಗಳಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚಿದ್ದಾರೆ. ಹೀಗಾಗಿ ಅಜಿತ್ ಸಿನಿಮಾವನ್ನು ಬೆಂಗಳೂರಿನಲ್ಲಿ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಶೋಗಳನ್ನು ಅರೆಂಜ್ ಮಾಡಲಾಗಿತ್ತು. ಕರ್ನಾಟಕದ ವಿತರಕರ ಪ್ರಕಾರ ಶೇ.85ರಷ್ಟು ಶೋಗಳು ಹೌಸ್‌ಫುಲ್ ಆಗಿವೆ. ಆದರೆ, ನಂತರದ ಶೋಗಳು ಡಲ್ ಹೊಡೆದಿದ್ದವು. ಆದರೂ ಕರ್ನಾಟಕದಲ್ಲಿ 2 ರಿಂದ 2.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಲೆಕ್ಕ ಸಿಕ್ಕಿದೆ.

Ajith Kumar Trisha film Vidamuyarchi Karnataka Box office day 1 report

ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?

'ವಿಡಾಮುಯಾರ್ಚಿ' ತಮಿಳುನಾಡಿನ ಹಲವು ಏರಿಯಾಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತ್ರಿಚಿ ಹಾಗೂ ಪಾಂಡಿಚೇರಿಯಲ್ಲಿ ಅತೀ ಹೆಚ್ಚು ಆಕ್ಯೂಪೆನ್ಸಿ ಇತ್ತು. ತ್ರಿಚಿಯಲ್ಲಿ ಶೇ.92ರಷ್ಟು ಆಕ್ಯೂಪೆನ್ಸಿ ಇದ್ದರೆ, ಪಾಂಡಿಚೇರಿಯಲ್ಲಿ ಶೇ.91.67ರಷ್ಟಿತ್ತು. ಇನ್ನು ಚೆನ್ನೈನಲ್ಲಿ ಶೇ.88.33ರಷ್ಟು ಆಕ್ಯೂಪೆನ್ಸಿ ಇದೆ. ಹಾಗೇ ಬೆಂಗಳೂರಿನಲ್ಲಿ ಎಷ್ಟು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

ವೀಕೆಂಡ್‌ ಕಲೆಕ್ಷನ್ ಲೆಕ್ಕಾಚಾರವೇನು?

ಅಜಿತ್ ಕುಮಾರ್ 'ವಿಡಾಮುಯಾರ್ಚಿ' ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಬೇಕು. ಈ ಹಿಂದೆ ತೆರೆಕಂಡಿದ್ದ 'ಥುನಿವು' ಸಿನಿಮಾ ಮೊದಲ ದಿನ 24.4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, ಸದ್ಯಕ್ಕೆ ಸಿಕ್ಕಿರುವ ಲೆಕ್ಕಾಚಾರದ ಪ್ರಕಾರ ಈ ಸಿನಿಮಾ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಾಲದ್ದಕ್ಕೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಏನಾಗುತ್ತೆ ಅನ್ನೋ ಕುತೂಹಲವಿದೆ. ವೀಕೆಂಡ್‌ನಲ್ಲಿ ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಬೇಕಿದೆ.

Disclaimer: ಈ ಸಿನಿಮಾದ ಕಲೆಕ್ಷನ್ ಅನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.

More from Filmibeat

English summary
Ajith Kumar, Trisha film Vidamuyarchi Karnataka Box office day 1 report
Read more about: ajith kumar trisha box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X