"ನನಗೀಗ ನಿನ್ನೊಂದಿಗೆ 1+1=3 ಅನ್ನೋದು ಗೊತ್ತಾಯ್ತು" ಅಂತಲೇ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ 'ಹೆಬ್ಬುಲಿ' ನಟಿ!
ಕನ್ನಡದ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ದ ದಕ್ಷಿಣ ಭಾರತದ ಬಹುಭಾಷಾ ನಟಿ ಅಮಲಾ ಪೌಲ್. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಈ ನಟಿ ಎರಡನೇ ಮದುವೆ ಆಗಿದ್ದರು. ಇವರ ಎರಡನೇ ಮದುವೆ ಕೂಡ ಅಷ್ಟೇ ಚರ್ಚೆಯಲ್ಲಿತ್ತು. ಮದುವೆಯಾದ ಎರಡು ತಿಂಗಳಲ್ಲಿಯೇ ತಾನು ಗರ್ಭಿಣಿ ಅಂತ ಅನೌನ್ಸ್ ಮಾಡಿದ್ದಾರೆ.
ನಟಿ ಅಮಲಾ ಪೌಲ್ 2023, ನವೆಂಬರ್ 5 ರಂದು ಜಗತ್ ದೇಸಾಯಿ ಅವರೊಂದಿಗೆ ಕೊಚ್ಚಿಯಲ್ಲಿ ಮದುವೆ ಆಗಿದ್ದರು. ಆ ಬಳಿಕ ಒಂದಿಷ್ಟು ಮದುವೆ ಸಂಭ್ರಮದ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲಿಂದ ಮತ್ತೆ ಸೈಲೆಂಟ್ ಆಗಿದ್ದ ನಟಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಮದುವೆ ಆದ ಎರಡು ತಿಂಗಳಲ್ಲಿಯೇ ಗರ್ಭಿಣಿ ಅಂತ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಅನೌನ್ಸ್ ಮಾಡುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಪ್ರೆಗ್ನೆನ್ಸಿಯ ಫೋಟೊಶೂಟ್‌ನ ಕೆಲವು ಫೋಟೊಗಳನ್ನು ಹಂಚಿಕೊಂಡಿರೋ ಅಮಲಾ ಪೌಲ್ "ನನಗೀಗ ನಿನ್ನೊಂದಿಗೆ 1+1=3 ಅನ್ನೋದು ಗೊತ್ತಾಯ್ತು" ಎಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಮಲಾ ಪೌಲ್ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ನೆಟ್ಟಿಗರು ಇಬ್ಬರಿಗೂ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಅಮಲಾ ಪೌಲ್ 2011ರಲ್ಲಿ ತಮಿಳಿನ ನಿರ್ದೇಶಕ ಎ ಎಲ್ ವಿಜಯ್ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ವಿಜಯ್ ಹಾಗೂ ಅಮಲಾ ಪೌಲ್ ಬಗ್ಗೆ ಗುಸುಗುಸ ಓಡಾಡಿತ್ತು. ಮೂರು ವರ್ಷಗಳ ಬಳಿಕ ಅಂದರೆ, 2014ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಆದರೆ, ವಿಜಯ್ ಪೋಷಕರೊಂದಿಗೆ ಅಮಲಾ ಪೌಲ್ ಭಿನ್ನಾಭಿಪ್ರಾಯದಿಂದಾಗಿ 2017ರಲ್ಲಿ ವಿಚ್ಚೇದನ ಪಡೆದು ಬೇರೆಯಾಗಿದ್ದರು.
ವಿಚ್ಚೇದನದ ಬಳಿಕ ಅಮಲಾ ಪೌಲ್ ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಮುಂದಾದರು. ಕೆಲವು ವಿವಾದಾತ್ಮಕ ಸಿನಿಮಾಗಳಲ್ಲಿಯೂ ಅಮಲಾ ಪೌಲ್ ನಟಿಸಿದರು. ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಂಡರು. ಈ ಮಧ್ಯೆ ಹಲವು ದಿನಗಳಿಂದ ಜಗತ್ ದೇಸಾಯಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಅಮಲಾಪೌಲ್, 2023, ನವೆಂಬರ್‌ನಲ್ಲಿ ಮದುವೆ ಆಗಿದ್ದರು. 2009ರಿಂದ ಅಮಲಾ ಪೌಲ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











