"ನನಗ್ಯಾಕೆ ಭಯ? ಸಂಗೀತಾ ನನ್ನ ಅಪ್ಪ ಅಮ್ಮ ನೋಡಿದ ಹುಡುಗಿ"; ನಾಚಿ ನುಡಿದಿದ್ದ ಹಳೇ ವಿಡಿಯೋ ವೈರಲ್

ತಮಿಳಿನ ಜನಪ್ರಿಯ ನಟ ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿರೋದು ಈಗ ಹೊಸ ವಿಷಯವಾಗೇನು ಉಳಿದಿಲ್ಲ. ವಿಜಯ್ ಪತ್ನಿ ಸಂಗೀತಾ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ವಿಜಯ್ ಈ ವಿಷಯದ ಬಗ್ಗೆ ಇನ್ನೂ ಸರಿಯಾದ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ.

ವಿಜಯ್ ಪತ್ನಿ ಸಂಗೀತಾ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಂತೆ ಅವರ ರಾಜಕೀಯ ನಡೆಗೆ ಕೊಂಚ ಮಟ್ಟಿಗೆ ಹಿನ್ನಡೆಯುಂಟಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚುನಾವಣೆ ಸಮೀಪದಲ್ಲಿ ಇಂತಹದ್ದೊಂದು ತಪ್ಪು ಹೆಜ್ಜೆಯನ್ನು ದಳಪತಿ ವಿಜಯ್ ಇಡಬಾರದಿತ್ತು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ, ವಿಚ್ಚೇದನದ ಬಗ್ಗೆ ವಿಜಯ್ ಇಚ್ಛೆ ಏನು ಅನ್ನೋದು ಮಾತ್ರ ಇನ್ನು ಅವರ ಅಭಿಮಾನಿಗಳಿಗೂ ಗೊತ್ತಿಲ್ಲ.

Amid Divorce controversy Vijay throwback video about Sangeetha is trending

ಹೀಗಾಗಿ ದಳಪತಿ ವಿಜಯ್ ಅಭಿಮಾನಿಗಳು ಅವರ ಹಳೆ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ವಿಜಯ್ ಮದುವೆಗೂ ಮುನ್ನ ತಮ್ಮ ಪತ್ನಿ ಸಂಗೀತಾ ಬಗ್ಗೆ ನಾಚುತ್ತಾ ಆಡಿದ ಮಾತಿನ ತುಣುಕನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾರೇ,

ತಮಿಳುನಾಡಿನಲ್ಲಿ ವಿಜಯ್ ಹಾಗೂ ಸಂಗೀತಾ ವಿಚ್ಚೇದನದ ಪ್ರಕರಣ ಚುನಾವಣೆಗಿಂತಲೂ ಹಾಟ್ ಟಾಪಿಕ್ ಆಗುತ್ತಿದೆ. ಚುನಾವಣೆಗೂ ಮುನ್ನವೇ ವಿಜಯ್ ಹಾಗೂ ಸಂಗೀತಾ ವಿಚ್ಚೇದನ ಪ್ರಕರಣಕ್ಕೆ ತಿರುವು ಸಿಗಬಹುದೇ ಎಂದು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಏಪ್ರಿಲ್ 20ರಂದು ಕೋರ್ಟ್ ವಿಚಾರಣೆಯಲ್ಲಿ ಪತ್ನಿ ಸಂಗೀತಾ ಜೊತೆ ಬಾಳುವುದಕ್ಕೆ ಇಷ್ಟವಿದೆಯೋ? ಇಲ್ವೋ? ಅನ್ನೋದನ್ನು ಸ್ಪಷ್ಟಪಡಿಸುವ ಸಾಧ್ಯತೆಯಿದೆ. ಆದರೆ, ಚುನಾವಣೆ ಬ್ಯುಸಿಯಲ್ಲಿ ಇರುವ ವಿಜಯ್ ವಿಚಾರಣೆಗೆ ಹಾಜರಾಗುವುದೇ ಅನುಮಾನ ಎಂದು ಹೇಳಲಾಗುತ್ತಿದೆ.

Also Read
ರಜನಿಕಾಂತ್ ಆಯ್ತು.. ಸೂರ್ಯನ ಕೆರಳಿದ ವಿಜಯ್ ಫ್ಯಾನ್ಸ್.. ಸ್ಮೈಲ್ ಕೊಟ್ಟು ಬಾಯಿ ಮುಚ್ಚಿಸಿದ ಜ್ಯೋತಿಕಾ
ರಜನಿಕಾಂತ್ ಆಯ್ತು.. ಸೂರ್ಯನ ಕೆರಳಿದ ವಿಜಯ್ ಫ್ಯಾನ್ಸ್.. ಸ್ಮೈಲ್ ಕೊಟ್ಟು ಬಾಯಿ ಮುಚ್ಚಿಸಿದ ಜ್ಯೋತಿಕಾ

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಏನಾದರೂ ಬದಲಾವಣೆ ತರಬಹುದು ಎಂದು ಜನರು ನಂಬಿಕೆ ಇಟ್ಟಿದ್ದರು. ಇಲ್ಲಿವರೆಗೂ ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೆ ಕ್ಲೀನ್ ಆಗಿ ರಾಜಕೀಯಕ್ಕೆ ಧುಮುಕಿದ್ದ ವಿಜಯ್ ಫ್ಯಾಮಿಲಿ ಮ್ಯಾಟರ್‌ನಲ್ಲಿ ಕೊನೆಯ ಹಂತದಲ್ಲಿ ಎಡವಿದ್ದಾರೆ. ಅವರ ಟಿವಿಕೆ ಪಕ್ಷದ ಮುಖಂಡ ಆದವ್ ಅರ್ಜುನ್ "ಗಾಂಧೀಜಿಯಂತೆ ವಿಜಯ್ ಗ್ರಾಮ ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದಾರೆ" ಎಂದು ಹೇಳಿಕೆ ಕೊಟ್ಟಿದ್ದರು. ಆದರೆ, ವಿಜಯ್ ಪ್ರಚಾರಕ್ಕೆ ಇಳಿಯದೆ ಸೀಮಂತಾ ಕಾರ್ಯಕ್ರಮಕ್ಕೆ ಹೋಗಿದ್ದು ಅವರ ಕಾರ್ಯಕರ್ತರಲ್ಲೇ ನಿರಾಸೆ ಮೂಡಿಸಿತ್ತು.

Amid Divorce controversy Vijay throwback video about Sangeetha is trending

ದಳಪತಿ ವಿಜಯ್ ಹಾಗೂ ಸಂಗೀತಾ ವಿಚ್ಚೇದನದ ಬಗ್ಗೆ ಈಗಾಗಲೇ ಅವರ ರಾಜಕೀಯ ವಿರೋಧಿಗಳು ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಅಲ್ಲದೇ ಇವರಿಬ್ಬರ ಹಳೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇವರಿಬ್ಬರ ಹಳೇ ವಿಡಿಯೋ ಟ್ರೆಂಡಿಂಗ್‌‌ನಲ್ಲಿದೆ. ಅದು ವಿಜಯ್ ವಿವಾಹ ಪೂರ್ವದಲ್ಲಿ ತನ್ನ ಪತ್ನಿ ಬಗೆ ನಾಚಿಕೊಂಡು ಮಾತಾಡಿದ್ದಾರೆ. "ನನ್ನ ಭಾವಿ ಪತ್ನಿ ಸಂಗೀತಾ ಬಗ್ಗೆ ಹೇಳಬೇಕೆಂದರೆ..." ಎಂದು ಹೇಳುವಾಗ ಅತಿಯಾಗಿ ನಾಚಿಕೊಂಡಿದ್ದಾರೆ.

ಆ ವೇಳೆ ಅಲ್ಲಿಯೇ ಇದ್ದವರು "ವಿಜಯ್ ಸಂಕೋಚ ಪಟ್ಟುಕೊಳ್ಳದೆ ಹೇಳಿ" ಎಂದು ಅವರ ಉತ್ತೇಜನ ನೀಡಿದ್ದರು. ಆಗ ವಿಜಯ್ "ನಾನು ಯಾಕೆ ಹೆದರಬೇಕು? ಸಂಗೀತಾ ಅಪ್ಪ ಅಮ್ಮ ನೋಡಿದ ಹುಡುಗಿಯಲ್ಲವೇ? ಅವರು ಅಲ್ಲಿ ಇದ್ದಾರಲ್ಲ" ಎಂದು ವಿಜಯ್ ಹೇಳಿದ್ದರು. ಹಾಗೇ "ಅವರು ತಮಿಳು ಹುಡುಗಿ, ಲಂಡನ್‌ನಲ್ಲಿ ನೆಲೆಸಿದ್ದಾರೆ. ಮೆಡಿಕಲ್ ಸೈನ್ಸ್‌ನಲ್ಲಿ ಫೈನಲ್ ಇಯರ್ ಓದುತ್ತಿದ್ದಾರೆ" ಎಂದು ವಿಜಯ್ ಅಂದು ನಾಚಿಕೊಳ್ಳುತ್ತಲೇ ಮಾಹಿತಿ ನೀಡಿದ್ದರು. ಅದೇ ವಿಡಿಯೋ ಈಗ ಅತಿ ಹೆಚ್ಚು ವೈರಲ್ ಆಗಿದೆ.

More from Filmibeat

English summary
Amid Divorce controversy Vijay throwback video about Sangeetha is trending.
Read more about: vijay sangeetha divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X