ಕೆಂಪು ಟೀ ಶರ್ಟ್.. ಕಪ್ಪು ಚಡ್ಡಿ.. ಮಾಲ್ಡೀವ್ಸ್ ಮರಳ ಮೇಲೆ ಬರೀಗಾಲಲ್ಲಿ ಓಡಾಟ: ರಜನಿ ಫುಲ್ ರಿಲ್ಯಾಕ್ಸ್!
72 ವರ್ಷದ ಸೂಪರ್‌ಸ್ಟಾರ್ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಂದಿನ ಸ್ಟಾರ್ ನಟರನ್ನೂ ಮೀರಿಸಿ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೂ, ಅಪರೂಪಕ್ಕೆ ಎಂಬಂತೆ ರಜನಿ ರಜೆ ತೆಗೆದುಕೊಂಡು ಗಾಯಬ್ ಆಗಿತ್ತಿದ್ದರು. ಹಿಮಾಲಯಾದ ಕಡೆ ಪಯಣ ಬೆಳೆಸುತ್ತಿದ್ದರು. ಆದ್ರೀಗ ದಿಕ್ಕು ಬದಲಿಸಿದ್ದಾರೆ.
ಇಂದಿನ ಸ್ಟಾರ್ ನಟರು ಒಂದು ಸಿನಿಮಾ ಮುಗಿದ ಬಳಿಕ ರಿಲ್ಯಾಕ್ಸ್ ಮಾಡೋಕೆ ಮಾಲ್ಡೀವ್ಸ್ ಹಾರುತ್ತಾರೆ. ಆದರೆ, ರಜನಿಕಾಂತ್ ಮಾತ್ರ ಬಿಡುವಿಲ್ಲದೆ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕೊನೆಗೆ ರಿಲ್ಯಾಕ್ಸ್ ಮೂಡಿಗೆ ಜಾರಿದ್ದು, ಮಾಲ್ಟೀವ್ಸ್‌ನಲ್ಲಿ ಮಸ್ತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ಮಾಲ್ಡೀವ್ಸ್‌ಗೆ ತೆರಳಿದ್ದು ತೀರಾ ವಿರಳ. ಬ್ರೇಕ್ ತೆಗೆದುಕೊಂಡಿದ್ದೂ ಕೂಡ ಅಷ್ಟೇ. ಆದ್ರೀಗ ಎರಡು ಸಿನಿಮಾಗಳನ್ನು ಮುಗಿಸಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಸೂಪರ್‌ಸ್ಟಾರ್ ಅವತಾರ ನೋಡಿ ಫ್ಯಾನ್ಸ್ ಥಿಲ್ ಆಗಿದ್ದಾರೆ.
ಸೂಪರ್‌ಸ್ಟಾರ್ ಅವತಾರಕ್ಕೆ ಬೋಲ್ಡ್
ಸಿನಿಮಾ ಬಿಟ್ಟರೆ ಸೂಪರ್‌ಸ್ಟಾರ್ ರಜನಿಕಾಂತ್ ಸಿಕ್ಕಾಪಟ್ಟೆ ಸಿಂಪಲ್. ಬಿಳಿ ಶರ್ಟ್ ಹಾಗೂ ಪಂಚೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಈ ಅವತಾರವನ್ನು ಬಿಟ್ಟು ಮತ್ತೆ ಬೇರೆ ಅವತಾರದಲ್ಲಿ ನೋಡಿದ್ದೇ ಇಲ್ಲ. ಆದ್ರೀಗ ರಜನಿಯ ಮಾಲ್ಡೀವ್ಸ್ ಲುಕ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತಿದೆ.
ಕೆಂಪು ಟೀ ಶರ್ಟ್ ಹಾಕೊಂಡು, ಕಪ್ಪು ಬಣ್ಣದ ಶಾರ್ಟ್ ಹಾಕೊಂಡು ರಜನಿಕಾಂತ್ ಮಾಲ್ಡೀವ್ಸ್‌ನ ಮರಳಿನ ಮೇಲೆ ಹೆಜ್ಜೆ ಹಾಕುತ್ತಿರೋ ಫೋಟೊ ವೈರಲ್ ಆಗುತ್ತೆ. ರಜನಿಯನ್ನು ಇಂತಹದ್ದೊಂದು ಲುಕ್‌ನಲ್ಲಿ ಅಭಿಮಾನಿಗಳೇ ನೋಡಿರಲಿಲ್ಲ. ಈಗ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ವೈರಲ್ ಆಗುತ್ತಿದೆ.
'ಜೈಲರ್' ಟೈಟಲ್ ವಿವಾದದ ನಡುವೆ ರಿಲ್ಯಾಕ್ಸ್
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾದ ಟೈಟಲ್ ವಿವಾದಕ್ಕೆ ಸಿಲುಕಿದೆ. ಆದರೆ ಇದ್ಯಾವುದಕ್ಕೂ ತಲೈವಾ ತಲೆ ಕೆಡಿಸಿಕೊಂಡಿಲ್ಲ. ಈಗಾಗಲೇ ಇಪ್ಪಿಕೊಂಡಿರೋ ಎರಡು ಸಿನಿಮಾಗಳನ್ನು ಮುಗಿಸಿ ಮಾಲ್ಡೀವ್ಸ್ ಕಡೆ ಪಯಣ ಬೆಳೆಸಿದ್ದಾರೆ. ರಜನಿಕಾಂತ್ (ಜುಲೈ 14)ರಂದೇ ಚೆನ್ನೈನಿಂದ ಮಾಲ್ಡೀವ್ಸ್‌ಗೆ ಪಯಣ ಬೆಳೆಸಿದ್ದರು.
ಮಾಲ್ಡೀವ್ಸ್‌ನಲ್ಲಿ ಎಷ್ಟು ದಿನ ಇರುತ್ತಾರೆ ಅನ್ನೋ ಸುಳಿವು ಇಲ್ಲ. ಆದರೆ, ಪುತ್ರಿ ಐಶ್ವರ್ಯಾ ನಿರ್ದೇಶಿಸುತ್ತಿರುವ 'ಲಾಲ್ ಸಲಾಂ' ಹಾಗೂ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿರುವ 'ಜೈಲರ್' ಸಿನಿಮಾವನ್ನು ಕಂಪ್ಲೀಟ್ ಮಾಡಿದ್ದಾರೆ. ಹೊಸ ಸಿನಿಮಾ ಒಪ್ಪಿಕೊಳ್ಳುವ ಮುನ್ನ ಮಾಲ್ಡೀವ್ಸ್‌ಗೆ ಹಾರಿದ್ದಾರೆ.
171ನೇ ಸಿನಿಮಾಗೂ ಮುನ್ನ ಫುಲ್ ರಿಲ್ಯಾಕ್ಸ್
ಸೂಪರ್‌ಸ್ಟಾರ್ ರಜನಿಕಾಂತ್ 171ನೇ ಸಿನಿಮಾಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಲೋಕೇಶ್ ಕನಗರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ ಇನ್ನು ಕೆಲವೇ ದಿನಗಳಲ್ಲಿ 'ಜೈಲರ್' ಸಿನಿಮಾದ ಪ್ರಚಾರ ಆರಂಭ ಆಗಲಿದೆ. ಹೀಗಾಗಿ ಗ್ಯಾಪ್‌ನಲ್ಲಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ.
'ಜೈಲರ್' ಸಿನಿಮಾ ಆಗಸ್ಟ್ 10ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಎರಡು ಹಾಡುಗಳು ರಿಲೀಸ್ ಆಗಿದ್ದು, ತಲೈವಾ ಫ್ಯಾನ್ಸ್‌ಗೆ ಕಿಕ್ ಕೊಡುತ್ತಿದೆ. ರಜನಿಕಾಂತ್ ಈಗಾಗಲೇ ಮುಗಿಸಿರೋ ಎರಡೂ ಸಿನಿಮಾಗಳೂ ಸದ್ದು ಮಾಡುತ್ತಿವೆ. 'ಲಾಲ್ ಸಲಾಂ' ಸಿನಿಮಾದ ರಜನಿ ಲುಕ್ ಕಿಕ್ ಕೊಟ್ಟಿದೆ.


Click it and Unblock the Notifications











