32 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ರಜನಿ-ಅಮಿತಾಭ್: ಒಟ್ಟಿಗೆ ನಟಿಸಿದ್ರಲ್ಲಿ ಹಿಟ್ ಎಷ್ಟು? ಫ್ಲಾಪ್ ಎಷ್ಟು?

ಅಮಿತಾಭ್ ಬಚ್ಚನ್ ಹಾಗೂ ರಜನಿಕಾಂತ್ ಇಬ್ಬರೂ ಭಾರತೀಯ ಚಿತ್ರರಂಗದ ದಿಗ್ಗಜರು. ಇಬ್ಬರಿಬ್ಬರೂ ಆಗಾಗಾ ಒಂದೇ ವೇದಿಕೆ ಮೇಲೆ ಕಂಡಿದ್ದು ಇದೆ. ಆದರೆ, ಇತ್ತೀಚೆಗೆ ಒಟ್ಟಿಗೆ ನಟಿಸಿರಲಿಲ್ಲ. ಇಬ್ಬರು ಅಭಿಮಾನಿಗಳು ಒಟ್ಟಿಗೆ ನಟಿಸುವಂತೆ ಆಗಾಗ ಒತ್ತಡ ಹೇರುತ್ತಲೇ ಇದ್ದರು. ಕೊನೆಗೂ ಒಬ್ಬರ ಅಭಿಮಾನಿಗಳ ಆಸೆ ಈಡೇರಿದೆ.

ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಇಬ್ಬರೂ ಆತ್ಮೀಯ ಗೆಳೆಯರು. ಇಬ್ಬರೂ ಸ್ಟಾರ್ ಪಟ್ಟಕ್ಕೇರಿದಾಗ, ಒಟ್ಟಿಗೆ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದೂ ಇದೆ. ಅಲ್ಲದೆ ಅಮಿತಾಭ್ ಬಚ್ಚನ್ ನಟಿಸಿದ ಸಿನಿಮಾಗಳನ್ನು ರಜನಿಕಾಂತ್ ತಮಿಳಿನಲ್ಲಿ ರಿಲೀಸ್ ಮಾಡಿದ್ದೂ ಹೊಸ ವಿಷಯವೇನಲ್ಲ.

 Amitabh Bachchan, Rajinikanth coming together after 32 years

ಆದರೆ, ಮೂರು ದಶಕಗಳಿಂದ ಈ ಗೆಳೆಯರು ಒಂದೇ ಸಿನಿಮಾದಲ್ಲಿ ನಟಿಸಿದ್ದೇ ಇಲ್ಲ. ಇಬ್ಬರ ಫ್ಯಾನ್ಸ್‌ಗೂ ಮತ್ತೆ ಒಂದೇ ಸಿನಿಮಾದಲ್ಲಿ ದಿಗ್ಗಜರನ್ನು ನೋಡಬೇಕು ಅನ್ನೋ ಹಂಬಲವಿತ್ತು. ಅದು ಈಗ ಕೊನೆಗೂ ಈಡೇರಿದೆ. ಸೂಪರ್‌ಸ್ಟಾರ್ 170ನೇ ಸಿನಿಮಾಗಾಗಿ ಈ ಜೊತೆ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳಲಿದೆ.

ರಜನಿ 170ನೇ ಸಿನಿಮಾದಲ್ಲಿ ಅಮಿತಾಭ್

ಹೌದು, ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಒಟ್ಟಿಗೆ ನಟಿಸೋದು ಸಿನಿಮಾ ಕನ್ಫರ್ಮ್ ಆಗಿದೆ. ಲೈಕಾ ಪ್ರೊಡಕ್ಷನ್ ಇಬ್ಬರೂ ದಿಗ್ಗಜರನ್ನು ಒಟ್ಟಿಗೆ ಸೇರಿಸುತ್ತಿದೆ. ಇದು ತಲೈವಾ ಅಭಿನಯದ 170ನೇ ಸಿನಿಮಾ ಅನ್ನೋದು ವಿಶೇಷ.

ಈಗ ತಾನೇ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ 'ಜೈಲರ್' ಶೂಟಿಂಗ್ ಮುಗಿದಿದೆ. ಇದೇ ಬೆನ್ನಲ್ಲೇ ರಜನಿಕಾಂತ್ ಅಭಿಮಾನಿಗಳಿಗೆ ಲೈಕಾ ಪ್ರೊಡಕ್ಷನ್ ಖುಷಿ ವಿಷಯವನ್ನು ಹಂಚಿದ್ದಾರೆ. 170ನೇ ಸಿನಿಮಾದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಮುಖಾಮುಖ ಆಗಲಿದ್ದಾರೆ. ಮುಂದಿನ ತಿಂಗಳ ಕೊನೆಯಲ್ಲಿ ಸಿನಿಮಾ ಸೆಟ್ಟೇರುತ್ತಿದೆ.

 Amitabh Bachchan, Rajinikanth coming together after 32 years

ದಿಗ್ಗಜರಿಗೆ ಆಕ್ಷನ್ ಕಟ್ ಹೇಳೋದ್ಯಾರು?

ಸೂಪರ್‌ಸ್ಟಾರ್ ಹಾಗೂ ಮೆಗಾಸ್ಟಾರ್ ಒಟ್ಟಿಗೆ ನಟಿಸುತ್ತಿದ್ದಾರೆ ಅಂದ್ರೆ, ಅವರ ಲೆವೆಲ್‌ಗೆ ಆ ಸಿನಿಮಾ ಇರಬೇಕು. ಹೀಗಾಗಿ ಇಬ್ಬರೂ ದಿಗ್ಗಜರಿಗೆ ಆಕ್ಷನ್ ಕಟ್ ಹೇಳೋದು ಯಾರು? ಅನ್ನೋ ಕುತೂಹಲಕ್ಕೂ ತೆರೆಬಿದ್ದಿದೆ.

ರಜನಿಕಾಂತ್- ಅಮಿತಾಭ್ ಬಚ್ಚನ್ ಸಿನಿಮಾವನ್ನು 'ಜೈಭೀಮ್' ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶನ ಮಾಡಲಾಗಿದ್ದಾರೆ. 'ಜೈ ಭೀಮ್' ಮೂಲಕ ಭಾರತೀಯ ಚಿತ್ರರಂಗದಲ್ಲಿಯೇ ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದರು. ಸೂರ್ಯ 'ಜೈ ಭೀಮ್' ಪಾತ್ರದಲ್ಲಿ ನಟಿಸಿದ್ದರು. ಈಗ ಜ್ಞಾನವೇಲ್, ರಜನಿ ಹಾಗೂ ಬಚ್ಚನ್‌ನಂತಹ ಸೂಪರ್ ಸ್ಟಾರ್‌ಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಒಟ್ಟಿಗೆ ನಟಿಸಿದ್ರಲ್ಲಿ ಹಿಟ್ ಎಷ್ಟು? ಫ್ಲಾಪ್ ಎಷ್ಟು?

ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. 'ಹಮ್', 'ಅಂದಾಕಾನೂನ್', 'ಗೆರಾಫ್ತಾರ್' ಅನ್ನೋ ಸಿನಿಮಾಗಳಲ್ಲಿ ನಟಿಸಿದ್ದಾರೆ. 1991ರಲ್ಲಿ ತೆರೆಕಂಡಿದ್ದ 'ಹಮ್' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. 1983 ತೆರೆಕಂಡಿದ್ದ 'ಅಂದಾ ಕಾನೂನ್' ಕೂಡ ಬಾಕ್ಸಾಫೀಸ್‌ನಲ್ಲಿ ಹಿಟ್ ಆಗಿತ್ತು.

ಹಾಗೇ 1985ನಲ್ಲಿ ಅಮಿತಾಭ್ ಹಾಗೂ ಕಮಲ್ ಹಾಸನ್ ನಟಿಸಿದ್ದ 'ಗೆರಾಫ್ತಾರ್' ಸಿನಿಮಾದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಂಡಿದ್ದರು. ಈ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಈಗ ರಜನಿ 170ನೇ ಸಿನಿಮಾಗೆ ಅಮಿತಾಭ್ ಎಂಟ್ರಿ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ, ಈ ಸಿನಿಮಾ ರಜನಿ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Amitabh Bachchan and Rajinikanth coming together after 32 years. Lyca production will be producing Rajinikanth 170th movie. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X