ನೀಲಿ ಚಂದ್ರನ ಕೆಳಗೆ ಅನುಪಮಾ ಪರಮೇಶ್ವರನ್ ಚುಂಬನದ ಫೋಟೊ ಲೀಕ್; ಮುತ್ತಿಟ್ಟಿದ್ದು ವಿಕ್ರಮ್ ಪುತ್ರನಿಗಾ?

ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಅದೆಷ್ಟು ಹುಡುಗರ ಫೇವರಿಟ್ ನಟಿ. ಮಲಯಾಳಂ ಸಿನಿಮಾ 'ಪ್ರೇಮಂ' ಮೂಲಕ ಗುಂಗುರು ಕೂದಲಿನ ಈ ನಟಿಯ ದಕ್ಷಿಣ ಭಾರತದಲ್ಲಿ ಬಹುಬೇಗನೇ ಫೇಮಸ್ ಆದರು. ಮಲಯಾಳಂ ಅಷ್ಟೇ ಅಲ್ಲ, ತಮಿಳು, ತೆಲುಗು ಹಾಗೂ ಕನ್ನಡ ಭಾಷೆಯ ಸಿನಿಮಾಗಳಲ್ಲೂ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡಿಗರಿಗೂ ಈಕೆ ಮೇಲೆ ಕ್ರಶ್‌ ಇರೋದಂತೂ ಸತ್ಯ.

ಅನುಪಮಾ ಪರಮೇಶ್ವರನ್ ಕನ್ನಡದ ಯುವಕರಿಗೂ ಫೇವರಿಟ್. ಅದಕ್ಕೆ ಕಾರಣ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ 'ನಟಸಾರ್ವಭೌಮ'. ಈ ಸಿನಿಮಾದಲ್ಲಿ ಅಪ್ಪುಗೆ ಜೋಡಿಯಾಗಿ ಅನುಪಮಾ ಪರಮೇಶ್ವರನ್ ನಟಿಸಿದ್ದರು. ಅಲ್ಲಿಂದ ಕನ್ನಡಿಗರಿಗೂ ಈ ನಟಿ ಅಚ್ಚು ಮೆಚ್ಚು. ಇತ್ತೀಚೆಗೆ ತೆಲುಗು, ತಮಿಳೂ ಭಾಷೆಯ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಿದ್ದು, ಈಗ ಈ ನಟಿಯ ಚುಂಬನದ ಫೋಟೊ ಒಂದು ವೈರಲ್ ಆಗುತ್ತಿದೆ.

Anupama Parameswaran and Dhruv Vikram dating rumour sparked after Blue Moon photo leak

ಮಲಯಾಳಂ ನಟಿ ತಮಿಳಿನ ನಟನಿಗೆ ಚುಂಬಿಸಿದ ಫೋಟೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೊಗಳನ್ನು ನೋಡಿ ಆಕೆಯ ಅಪ್ಪಟ ಅಭಿಮಾನಿಗಳ ಮುಖ ಸಣ್ಣಗಾಗಿದೆ. ಹಾಗೇ ತಮಿಳಿನ ಸ್ಟಾರ್ ನಟನ ಪುತ್ರನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಿದಾಡುತ್ತಿದೆ. ಅಷ್ಟಕ್ಕೂ ಅನುಪಮಾ ಪರಮೇಶ್ವರನ್ ಮುತ್ತಿನ ಫೋಟೊ ವೈರಲ್ ಆಗಿದ್ದು ಹೇಗೆ? ಆ ನಟನ ಪುತ್ರನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆಯೇ? ತಿಳಿಯುವುದಕ್ಕೆ ಮುಂದೆ ಓದಿ.

ಪ್ರೇಮಂ ಬ್ಯೂಟಿ ಅನುಪಮಾ ಪರಮೇಶ್ವರನ್ ಸ್ಪಾಟಿಫೈ ಮ್ಯೂಸಿಕ್‌ ಆಪ್‌ನಲ್ಲಿ ತಾನಿಷ್ಟ ಪಟ್ಟ ಹಾಡುಗಳ ಪ್ಲೇಲಿಸ್ಟ್‌ ಅನ್ನು ಶೇರ್ ಮಾಡಿದ್ದರು. ಇದೇ ಅವರ ಮಾಡಿದ ಎಡವಟ್ಟು. ಈ ಪ್ಲೇ ಲಿಸ್ಟ್‌ ಅನ್ನು ಅನುಪಮಾ ಪರಮೇಶ್ವರನ್ ಹಾಗೂ ತಮಿಳಿನ 'ಅನ್ನಿಯನ್' ಖ್ಯಾತಿಯ ಸ್ಟಾರ್ ನಟ ವಿಕ್ರಮ್ ಅವರ ಪುತ್ರ ಧ್ರುವ್ ವಿಕ್ರಮ್ ಜಂಟಿಯಾಗಿ ಶೇರ್ ಮಾಡಿದ್ದರು. ಅಲ್ಲಿ ಇವರಿಬ್ಬರು ಚುಂಬಿಸಿಕೊಂಡಿರುವ ಫೋಟೊ ಇತ್ತು. ಅದನ್ನು ನೋಡಿದ ಕೂಡ ಆ ಪ್ಲೇ ಲಿಸ್ಟ್ ಅನ್ನು ಪ್ರೈವೆಟ್ ಮಾಡಲಾಗಿದೆ.

Anupama Parameswaran and Dhruv Vikram dating rumour sparked after Blue Moon photo leak

ಆದರೆ, ನೆಟ್ಟಿಗರು ಅನುಪಮಾ ಹಾಗೂ ಧುವ್ ವಿಕ್ರಮ್‌ಗಿಂತ ಫಾಸ್ಟ್. ಅಷ್ಟರೊಳಗೆ ಆ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಬಿಟ್ಟಿದ್ದಾರೆ. ಎಷ್ಟು ಬೇಗ ರಿಯಾಕ್ಟ್ ಮಾಡಿದರೂ, ಇಬ್ಬರೂ ನೀಲಿ ಚಂದ್ರನ ನೆರಳಲ್ಲಿ ಚುಂಬಿಸಿಕೊಂಡ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರುವಾಗಿದೆ. ಇಷ್ಟೇ ಅಲ್ಲ, ಅನುಪಮಾ ಹಾಗೂ ಧ್ರುವ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅಂತನೂ ಸುದ್ದಿಯಾಗುತ್ತಿದೆ.

ಆದರೆ, ಈ ಫೋಟೊದ ರಿಯಾಲಿಟಿ ಬಗ್ಗೆ ಕ್ಲಾರಿಟಿ ಇಲ್ಲ. ಒಂದು ವೇಳೆ ಈ ಫೋಟೊ ಅಸಲಿನಾ? ಇಲ್ಲ ಕಿಡಿಗೇಡಿಗಳು ಎಐ ಅಂತಹ ತಂತ್ರಜ್ಞಾನವನ್ನು ಬಳಸಿ ಇಂತಹ ಕೃತ್ಯವನ್ನು ಮಾಡಿದ್ದಾರಾ? ಇದೆಲ್ಲದರ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ. ಆದರೆ, ಇದೂವರೆಗೂ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಈಗಾಗಲೇ ಲೀಕ್ ಆಗಿ ಹಲ್‌ಚಲ್ ಎಬ್ಬಿಸುತ್ತಿರುವ ಫೋಟೊ ಬಗ್ಗೆ ಇನ್ನು ಪ್ರತಿಕ್ರಿಯೆ ನೀಡಿಲ್ಲ.

ಇನ್ನು ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಇಬ್ಬರೂ 'ಬೈಸನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಲೀಕ್ ಆಗಿರುವ ಫೋಟೊ ಇದೇ ಸಿನಿಮಾದ್ದಾ? ಎನ್ನುವ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಯಾಕಂದ್ರೆ ಈ ಹಿಂದೆ ತೆಲುಗಿನ 'ರೌಡಿ ಬಾಯ್ಸ್' ಸಿನಿಮಾದಲ್ಲಿಯೂ ಲಿಪ್‌ಲಾಕ್ ಮಾಡಿದ್ದರು. ಅದೇ ರೀತಿ ಇದು ಕೂಡ ಸಿನಿಮಾದ ಫೋಟೊನೇ ಇರಬಹುದಾ? ಎನ್ನುವ ಪ್ರಶ್ನೆ ಮೂಡಿದೆ. ಆದರೆ, ಈ ಜೋಡಿ ಇನ್ನೂ ಕ್ಲಾರಿಟಿ ಕೊಟ್ಟಿಲ್ಲ.

More from Filmibeat

English summary
Anupama Parameswaran and Dhruv Vikram dating rumour sparked after Blue Moon photo leak;
Read more about: anupama parameswaran leak photo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X