₹2000 ಕೋಟಿಯ ಒಡೆಯ ಎಆರ್ ರೆಹಮಾನ್ ಪತ್ನಿಗೆ ಕೊಟ್ಟ ಜೀವನಾಂಶ ಎಷ್ಟು? ವಕೀಲರ ವಾದವೇನು?

ಎಆರ್ ರೆಹಮಾನ್ ಮತ್ತು ಸೈರಾ ಬಾಬು 29 ವರ್ಷಗಳ ಬಳಿಕ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ನವೆಂಬರ್ 19ರಂದು ಸೈರಾ ಬಾನು ಹಾಗೂ ಎ ಆರ್ ರೆಹಮಾನ್ ಇಬ್ಬರೂ ಡಿವೋರ್ಸ್ ಪಡೆಯುತ್ತಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಜೋಡಿ 30ನೇ ವರ್ಷದ ದಾಂಪತ್ಯ ಜೀವನವನ್ನು ಆಚರಿಸಿಕೊಳ್ಳಬೇಕಿತ್ತು.

29 ವರ್ಷ ಜೊತೆಗಿದ್ದ ಜೋಡಿಗೆ ಏನಾಯ್ತು? ದಿಢೀರನೇ ದಾಂಪತ್ಯವನ್ನು ಮುರಿದುಕೊಳ್ಳುವುದಕ್ಕೆ ಸಂಗೀತ ದಿಗ್ಗಜ ಎ ಆರ್ ರೆಹಮಾನ್ ಮುಂದಾಗಿದ್ದೇಕೆ? ಈ ಪ್ರಶ್ನೆಗಳಿಗೆ ಈಗಾಗಲೇ ಸೈರಾ ಬಾಬು ಪರ ವಕೀಲರಾದ ವಂದನ ಶಾ ರಿವೀಲ್ ಮಾಡಿದ್ದಾರೆ. ಆದರೂ ಆ ವಿಷಯವನ್ನು ಒಪ್ಪಿಕೊಳ್ಳುವುದಕ್ಕೆ ಅವರ ಅಭಿಮಾನಿಗಳು ಸಿದ್ಧರಿಲ್ಲ.

AR Rahman and Saira Banu divorce case lawyer reveals about alimony connection to Mohini Dey

ಈ ಮಧ್ಯೆ 2 ಸಾವಿರ ಕೋಟಿ ರೂಪಾಯಿ ಒಡೆಯನಾಗಿರುವ ಎಆರ್ ರೆಹಮಾನ್ ಪತ್ನಿಗೆ ಕೊಟ್ಟಿರುವ ಜೀವನಾಂಶದ ಬಗ್ಗೆ ಚರ್ಚೆ ಶುರುವಾಗಿದೆ. ದೊಡ್ಡ ಮೊತ್ತದ ಹಣವನ್ನು ಜೀವನಾಂಶವಾಗಿ ನೀಡಿರುವ ಬಗ್ಗೆ ಗುಸು ಗುಸು ಎದ್ದಿತ್ತು. ಇದೆಲ್ಲದಕ್ಕೂ ಸೈರಾ ಬಾಬು ವಕೀಲರಾಗಿರುವ ವಂದನಾ ಶಾ ಅಂತ್ಯ ಹಾಡಿದ್ದಾರೆ. ಹಾಗೇ ರೆಹಮಾನ್ ತಂಡದ ಮಾಜಿ ಸದಸ್ಯೆ ಮೋಹಿನಿ ಡೇ ವಿಚ್ಚೇದನಕ್ಕೆ ಏನಾದರೂ ಸಂಬಂಧವಿದೆಯಾ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಏನಿದೆ ಡಿಟೈಲ್ಸ್ ತಿಳಿಯಲು ಮುಂದೆ ಓದಿ.

ರೆಹಮಾನ್ ಕೊಟ್ಟ ಜೀವನಾಂಶ ಎಷ್ಟು?

ಎ ಆರ್ ರೆಹಮಾನ್ ಒಂದು ಹಾಡು ಕಂಪೋಸ್ ಮಾಡುವುದಕ್ಕೆ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಅನ್ನೋ ಸುದ್ದಿಯಿದೆ. ಹಾಗೇ ವಿಚ್ಚೇದನದ ಬಳಿಕ ರೆಹಮಾನ್ ಒಟ್ಟು ಆಸ್ತಿ ಎರಡು ಸಾವಿರ ಕೋಟಿ ಎಂದು ಹೇಳಲಾಗುತ್ತಿದೆ. ಹೀಗಾಗಿ ಸೈರಾ ಬಾನುಗೆ ಎಷ್ಟು ಮೊತ್ತದ ಜೀವನಾಂಶ ಸಿಗುತ್ತೆ ಅನ್ನೋ ಪ್ರಶ್ನೆ ಎದ್ದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರಾದ ವಂದನಾ ಶಾ ರಿಪಬ್ಲಿಕ್ ಟಿವಿಗೆ ನೀಡಿದ ಮಾಹಿತಿಯಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವಂದನ ನೀಡಿರುವ ಮಾಹಿತಿ ಪ್ರಕಾರ, ಇನ್ನೂ ಈ ಜೋಡಿ ಜೀವನಾಂಶ ಕೇಳುವ ಹಂತದವರೆಗೂ ಬಂದಿಲ್ಲ. ಆದರೆ, ಇಬ್ಬರೂ ಒಟ್ಟಿಗೆ ಕೂತು ಪರಸ್ಪರ ಒಪ್ಪಿಗೆ ಮೇರೆಗೆ ಈ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಹೀಗಾಗಿ ಸದ್ಯಕ್ಕಿನ್ನು ಎಆರ್‌ ರೆಹಮಾನ್ ಜೀವನಾಂಶ ಕೊಟ್ಟಿಲ್ಲ ಅನ್ನೋದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಇದರೊಂದಿಗೆ ರೆಹಮಾನ್ ತಂಡ ಮಾಜಿ ಸದಸ್ಯೆ ಮೋಹಿನಿ ಡೇ ವಿಚ್ಛೇದನದ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ.

AR Rahman and Saira Banu divorce case lawyer reveals about alimony connection to Mohini Dey

ಮೋಹಿನಿ ಡೇ ಡಿವೋರ್ಸ್‌ಗೆ ಲಿಂಕ್ ಇದೆಯಾ?

ಎ ಆರ್ ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನ ನೀಡಿದ ಕೆಲವೇ ಗಂಟೆಗಳಲ್ಲೇ ಮೋಹಿನಿ ಡೇ ಕೂಡ ಪತಿಯಿಂದ ಬೇರೆಯಾಗಿದ್ದಾಗಿ ಅನೌನ್ಸ್ ಮಾಡಿದ್ದರು. ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿತ್ತು. ಎಆರ್ ರೆಹಮಾನ್ ವಿಚ್ಛೇದನಕ್ಕೂ ಮೋಹಿನಿ ಡೇ ಡಿವೋರ್ಸ್‌ಗೂ ಸಂಬಂಧವಿದೆಯಾ ಅನ್ನೋ ಗುಮಾನಿ ಮೂಡಿತ್ತು. ಅದಕ್ಕೂ ವಕೀಲರಾದ ವಂದನಾ ಶಾ ಸ್ಪಷ್ಟನೆ ಕೊಟ್ಟಿದ್ದಾರೆ.

ಸೈರಾ ಬಾನು ಹಾಗೂ ಎ ಆರ್‌ ರೆಹಮಾನ್ ವಿಚ್ಚೇದನಕ್ಕೂ ಮ್ಯೂಸಿಷಿಯನ್ ಮೋಹಿನಿ ಡೇ ಡಿವೋರ್ಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದು ಕೇವಲ ವದಂತಿಗಳು ಅಷ್ಟೇ. ಸೈರಾ ಬಾನು ಹಾಗೂ ಎಆರ್ ರೆಹಮಾನ್ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆಂದು ಹೇಳಿದ್ದಾರೆ. ಇದೇ ವೇಳೆ ಇಬ್ಬರ ವಿಚ್ಚೇದನಕ್ಕೆ ಅಸಲಿ ಕಾರಣವೇನು ಅನ್ನೋದು ನನಗೆ ಗೊತ್ತಿದೆ. ಆದರೆ, ನಾನು ಅದನ್ನು ಹೇಳುವುದಕ್ಕೆ ಇಚ್ಛಿಸುವುದಿಲ್ಲ ಎಂದೂ ಹೇಳಿದ್ದಾರೆ.

More from Filmibeat

English summary
AR Rahman and Saira Banu divorce case lawyer reveals about alimony connection to Mohini Dey;
Read more about: ar rahman divorce filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X