ದಿ ಕೇರಳ ಸ್ಟೋರಿ ವಿವಾದ: ಮಸೀದಿಯಲ್ಲಿ ಹಿಂದೂ ಜೋಡಿಯ ವಿವಾಹದ ವಿಡಿಯೋ ಹಂಚಿಕೊಂಡ ಎಆರ್ ರೆಹಮಾನ್
ದೇಶಾದ್ಯಂತ 'ದಿ ಕೇರಳ ಸ್ಟೋರಿ' ವಿವಾದ ಎಬ್ಬಿಸಿದೆ. ಇಂದು (ಮೇ 5) ವಿಶ್ವದಾದ್ಯಂತ ಈ ಸಿನಿಮಾ ಬಿಡುಗಡೆಗೆಯಾಗಲಿದೆ. ಈ ಬೆನ್ನಲ್ಲೆ ಹಲವೆಡೆ ಪ್ರತಿಭಟನೆಗಳು ಆರಂಭ ಆಗಿವೆ. ಸಿನಿಮಾ ರಿಲೀಸ್ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿವೆ.
ಈ ಮಧ್ಯೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹಿಂದೂ ಜೋಡಿಯೊಂದು ಕೇರಳದ ಮಸೀದಿಯಲ್ಲಿ ಮದುವೆಯಾಗಿದ್ದಾರೆ.

ಹಿಂದೂ ಜೋಡಿಯೊಂದು ಕೇರಳ ಮಸೀದಿಯಲ್ಲಿ ವಿವಾಹವಾಗಿರುವ ವಿಡಿಯೋವನ್ನು ಶೇರ್ ಮಾಡಿದ್ದ, " ಮಾನವೀಯತೆಯ ಮೇಲಿನ ಪ್ರೀತಿ ನಿರಂತರ ಮತ್ತು ಆರೋಗ್ಯಕರವಾಗಿರಬೇಕು" ಎಂದು ರೆಹಮಾನ್ ಬರೆದುಕೊಂಡಿದ್ದಾರೆ.
ಕಾಮ್ರೆಡ್ ಆಫ್ ಕೇರಳ ಅನ್ನೋ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಅಲ್ಲದೆ " ಇಲ್ಲಿದೆ ಇನ್ನೊಂದು ಕೇರಳ ಸ್ಟೋರಿ" ಎಂದು ಬರೆದುಕೊಳ್ಳಲಾಗಿತ್ತು. ಅದನ್ನೇ ಎಆರ್ ರೆಹಮಾನ್ ಶೇರ್ ಮಾಡಿದ್ದು, ಮಾನವೀಯತೆ ಹಾಗೂ ಪ್ರೀತಿ ಬಗ್ಗೆ ಮಾತಾಡಿದ್ದಾರೆ.
ಎರಡು ನಿಮಿಷದ ವಿಡಿಯೋ ಬಗ್ಗೆ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಕೇರಳದ ಅಲಮುಳ ನಗರದಲ್ಲಿ ಹಿಂದೂ ಜೋಡಿ ಮದುವೆ ಆಗಲು ಪ್ರಯತ್ನ ಪಟ್ಟಿತ್ತು. ಈ ವಿಡಿಯೋ ಪ್ರಕಾರ, ವಧುವಿನ ತಾಯಿ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇವರು ಮಸೀದಿಯ ಕಮಿಟಿಯ ಬಳಿ ಮಗಳ ಮದುವೆಗೆ ಸಹಾಯ ಮಾಡುವುದಾಗಿ ಮನವಿ ಮಾಡಿದ್ದರು.
'ದಿ ಕೇರಳ ಸ್ಟೋರಿ' ಬಿಡುಗಡೆಗೂ ಮುನ್ನವೇ ಈ ವಿಡಿಯೋವನ್ನು ಎಆರ್ ರೆಹಮಾನ್ ಶೇರ್ ಮಾಡಿದ್ದಾರೆ. 'ದಿ ಕೇರಳ ಸ್ಟೋರಿ' 32 ಸಾವಿರ ಮಹಿಳೆಯರು ಕೇರಳದಲ್ಲಿ ಕಾಣಿಯಾಗಿದ್ದಾರೆಂದು ಹೇಳಿಕೊಂಡಿದೆ. ಈ ಸಿನಿಮಾ ಈ ಅಂಶಗಳ ಮೇಲೆ ಇದೆ ಎಂದು ಹೇಳಿಕೊಂಡಿದೆ.
'ದಿ ಕೇರಳ ಸ್ಟೋರಿ' ಬಿಡುಗಡೆಗೆ ಕೇರಳದಲ್ಲಿ ವಿರೋಧ ವ್ಯಕ್ತವಾಗಿತ್ತು. ರಾಜಕೀಯ ಮುಖಂಡರು ಅದರಲ್ಲೂ, ಸಿಪಿಎಂ ಹಾಗೂ ಕಾಂಗ್ರೆಸ್ ನಾಯಕರು 'ದಿ ಕೇರಳ ಸ್ಟೋರಿ' ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ 'ದಿ ಕೇರಳ ಸ್ಟೋರಿ' ಅರ್ಜಿ ವಿಚಾರಣೆ ಮಾಡುವುದಿಲ್ಲ ಎಂದು ಹೇಳಿತ್ತು. ಅಲ್ಲದೆ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸುವಂತೆ ಹೇಳಿತ್ತು.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಕೂಡ 'ದಿ ಕೇರಳ ಸ್ಟೋರಿ' ಫಿಲ್ಮ್‌ಮೇಕರ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಫೇಸ್‌ಬುಕ್‌ನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಲವ್ ಜಿಹಾದ್ ವಿಷಯವನ್ನು ತೆಗೆಯುವ ಮೂಲಕ ಕೇರಳ ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಸಂಘ ಪರಿವಾರದ ಪ್ರಚಾರ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ರಣವಿಕ್ರಮ'ದ ನಾಯಕಿ ಅದಾ ಶರ್ಮಾ 'ದಿ ಕೇರಳ ಸ್ಟೋರಿ' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಪುಲ್ ಶಾ ಸಿನಿಮಾ ನಿರ್ಮಾಣ ಮಾಡಿದ್ದರೆ, ಸುದಿಪ್ತೋ ಸೇನ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇಂದು (ಮೇ 5) ದೇಶಾದ್ಯಂತ ರಿಲೀಸ್ ಆಗುತ್ತಿದೆ.


Click it and Unblock the Notifications











