ಅರ್ಜುನ್ ಸರ್ಜಾ ಮಗಳ ನಿಶ್ಚಿತಾರ್ಥಕ್ಕೆ ಬರ್ಮಾದಿಂದ ಬಂದಿತ್ತು ಉಂಗುರ: 5 ಕ್ಯಾರೆಟ್ ಡೈಮಂಡ್ ರಿಂಗ್ ವಿಶೇಷತೆ ಏನು?
ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾ ಮದುವೆಯನ್ನು ಧೂಮ್ ಧಾಮ್ ಆಗಿ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಇತ್ತೀಚೆಗಷ್ಟೇ ಚೆನ್ನೈನಲ್ಲಿ ತಮ್ಮ ಮಗಳ ನಿಶ್ಚಿತಾರ್ಥವನ್ನು ಮಾಡಿದ್ದರು. ತಾವೇ ಕಟ್ಟಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಎಂಗೇಜ್‌ಮೆಂಟ್ ನಡೆದಿತ್ತು. ಈ ಸಮಾರಂಭದ ಫೋಟೊಗಳು ಹಾಗೂ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇತ್ತೀಚೆಗಷ್ಟೇ ವಿಲನ್ ಲುಕ್‌ನಲ್ಲಿ ಮಿಂಚಿದ್ದಾರೆ. 'ಲಿಯೋ'ದಲ್ಲಿ ದಳಪತಿ ವಿಜಯ್‌ಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಮಿಂಚಿದ್ದರು. ಇದೇ ವೇಳೆ ಮಗಳ ನಿಶ್ಚಿತಾರ್ಥವನ್ನು ಮಾಡಿದ್ದಾರೆ. ಹೀಗಾಗಿ ಆಕ್ಷನ್ ಕಿಂಗ್ ಒಂದೇ ಸಮಯದಲ್ಲಿ ತಮ್ಮ ಫ್ಯಾನ್ಸ್ ಡಬಲ್ ಸರ್ಪ್ರೈಸ್ ಕೊಟ್ಟಿದ್ದಾರೆ.

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ ನಡೆದ ಹಲವು ದಿನಗಳ ಬಳಿಕ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಅದ್ವಿಕ್ ಆರ್ ಸುದರ್ಶನ್ ಎಂಬುವವರು ಸಮಾರಂಭದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ. ಅದರಲ್ಲೂ ಬರ್ಮಾದಿಂದ ಎಂಗೇಜ್‌ಮೆಂಟ್ ರಿಂಗ್ ಬಂದಿತ್ತು ಎಂದು ಹೇಳಿದ್ದಾರೆ.
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ ತಮಿಳು ನಟ ಉಮಾಪತಿ ಜೊತೆ ನೆರವೇರಿದೆ. ಎರಡೂ ಕುಟುಂಬಗಳು ತಮ್ಮ ಆಪ್ತರ ಸಮ್ಮುಖದಲ್ಲಿ ನವ ಜೋಡಿಯ ನಿಶ್ಚಿತಾರ್ಥವನ್ನು ಮಾಡಿದ್ದಾರೆ. 2024, ಫೆಬ್ರವರಿ ತಿಂಗಳಲ್ಲಿ ಐಶ್ವರ್ಯಾ ಹಾಗೂ ಉಮಾಪತಿ ಮದುವೆ ಎಂದು ಈಗಾಗಲೇ ವರದಿಯಾಗಿದೆ. ಈಗ ಈ ಇವೆಂಟ್ ಪ್ಲ್ಯಾನ್ ಮಾಡಿದ್ದ ಅದ್ವಿಕ್ ಸುದರ್ಶನ್ ಎಂಗೇಜ್‌ಮೆಂಟ್ ರಿಂಗ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ಹೊರಹಾಕಿದ್ದಾರೆ.
ಬರ್ಮಾದಿಂದ ಬಂತು ರಿಂಗ್
ಅಕ್ಟೋಬರ್ 28ರಂದು ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ರಾಮಯ್ಯ ನಿಶ್ಚಿತಾರ್ಥ ನೆರವೇರಿದೆ. ಮಗಳ ಎಂಗೇಜ್‌ಮೆಂಟ್‌ಗೆ ಅರ್ಜುನ್ ಸರ್ಜಾ ಸರ್ಪ್ರೈಸ್ ಕೊಟ್ಟಿದ್ದರು. ಬರ್ಮಾದಿಂದ ಡೈಮಂಗ್ ರಿಂಗ್ ಅನ್ನು ಖರೀದಿಸಿದ್ದರು. ಅದನ್ನೇ ಭಾವಿ ಪತಿಗೆ ಐಶ್ವರ್ಯಾ ಅರ್ಜುನ್ ತೊಡಿಸಿದ್ದರು ಎಂದು ಈ ಇವೆಂಟ್ ಅನ್ನು ನೋಡಿಕೊಂಡಿದ್ದ ಅದ್ವಿಕ್ ಆರ್ ಸುದರ್ಶನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಬರ್ಮಾದಿಂದ ಬಂದಿರೋ ಈ ಡೈಮಂಗ್ ರಿಂಗ್ ವಿಶೇಷತೆಯೇನು?

5 ಕ್ಯಾರೆಟ್ ಡೈಮಂಡ್ ರಿಂಗ್ ಹೈಲೈಟ್ ಏನು?
ಅರ್ಜುನ್ ಸರ್ಜಾ ತಮ್ಮ ಮಗಳ ನಿಶ್ವಿತಾರ್ಥಕ್ಕೆಂದೇ ಬರ್ಮಾದಲ್ಲಿ ಆರ್ಡರ್ ಕೊಟ್ಟು ರಿಂಗ್ ಮಾಡಿಸಿದ್ದರು. ಇದು 5 ಕ್ಯಾರೆಟ್ ಡೈಮಂಡ್ ರಿಂಗ್ ಆಗಿದ್ದು, ಚಿನ್ನದ ಉಂಗುರದಲ್ಲಿ ಈ ಡೈಮಂಡ್ ಜೊತೆಗೆ ಮಧ್ಯೆ ಸ್ಟೋನ್ ಅನ್ನು ಅಳವಡಿಸಲಾಗಿತ್ತು. ಇದೇ ರಿಂಗ್ ಅನ್ನು ಐಶ್ವರ್ಯಾ ಅರ್ಜುನ್ ತಮ್ಮ ಭಾವಿ ಪತಿ ಉಮಾಪತಿ ರಾಮಯ್ಯಗೆ ತೊಡಿಸಿದ್ದಾರೆ ಎಂದು ಇವೆಂಟ್ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.
ಚಿನ್ನದ ಪ್ಲೇಟ್‌ನಲ್ಲಿ ಭೋಜನ
ಇಷ್ಟೇ ಅಲ್ಲದೆ ಎಲ್ಲಾ ರಾಜ್ಯಗಳ ವಿಶಿಷ್ಟ ತಿನಿಸುಗಳನ್ನು ಮಾಡಿಸಲಾಗಿತ್ತು. ಎಂಗೇಜ್‌ಮೆಂಟ್‌ಗೆ ಬರುವ ಅತಿಥಿಗಳಿಗೆ ಬಂಗಾರದ ಪ್ಲೇಟ್‌ಗಳಲ್ಲಿಯೇ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ, ತಮಿಳು ನಟ ವಿಶಾಲ್, ನಿರ್ದೇಶಕ ಎ ಎಲ್ ವಿಜಯ್, ಸ್ಯಾಂಡಿ ಮಾಸ್ಟರ್ ಸೇರಿದಂತೆ ಚಿತ್ರರಂಗದ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ ನವ ಜೋಡಿಗಳಿಗೆ ಶುಭ ಕೋರಿದ್ದಾರೆ. ಸದ್ಯಕ್ಕೀಗ ತಮಿಳು ಚಿತ್ರರಂಗದಲ್ಲಿ ಉಮಾಪತಿ ರಾಮಯ್ಯಗೆ ಐಶ್ವರ್ಯಾ ಅರ್ಜುನ್ ತೊಡಿಸಿದ ರಿಂಗ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.


Click it and Unblock the Notifications











