Arjun Sarja: ರೋಲೆಕ್ಸ್ ಸಹೋದರನಾ ಹೆರಾಲ್ಡ್ ದಾಸ್..? ವಿಜಯ್ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಫುಲ್ ವೈಲೆಂಟ್!

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇಂದು (ಆಗಸ್ಟ್ 15) ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ಸ್ವಾತಂತ್ರ್ಯ ದಿನದಂದೇ ಅರ್ಜುನ್ ಸರ್ಜಾ ಬರ್ತ್‌ಡೇ ಮೂಡ್‌ನಲ್ಲಿದ್ದಾರೆ. ಈ ಖುಷಿಯಲ್ಲೇ ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರುವ 'ಲಿಯೋ' ಸಿನಿಮಾದ ಝಲಕ್ ರಿಲೀಸ್ ಆಗಿದೆ.

ದಳಪತಿ ವಿಜಯ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಮತ್ತೊಂದು ಸಿನಿಮಾ 'ಲಿಯೋ'. ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಪಾತ್ರದ ಗ್ಲಿಂಪ್ಸ್ ಅನ್ನೇ ಚಿತ್ರತಂಡ ರಿವೀಲ್ ಮಾಡಿದೆ.

Arjun Sarja-Herold Das-Leo-Thalapathy Vijay

ಅರ್ಜುನ್ ಸರ್ಜಾ ಲುಕ್ ನೋಡಿ ತಮಿಳು ಸಿನಿ ಪ್ರಿಯರ ತಲೆ ಕೆಡಿಸಿಕೊಂಡಿದ್ದಾರೆ. ಇದೂವರೆಗೂ ಹೀರೊ ಆಗಿ ನೋಡಿದ್ದ ತಮಿಳಿಗರಿಗೆ ಆಕ್ಷನ್ ಕಿಂಗ್ ನೆಗೆಟಿವ್ ಶೇಡ್‌ನಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಸರ್ಜಾ ಪಾತ್ರ ರಿವೀಲ್ ಆಗುತ್ತಿದ್ದಂತೆ ಫ್ಯಾನ್ಸ್ ರೋಲೆಕ್ಸ್ ಪಾತ್ರದ ಜೊತೆ ಹೋಲಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ಅರ್ಜುನ್ ಸರ್ಜಾ

ಅರ್ಜುನ್ ಸರ್ಜಾ ಇಂದು (ಆಗಸ್ಟ್ 15) 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅರ್ಜುನ್ ಸರ್ಜಾಗೂ ಹಾಗೂ ಅವರ ಫ್ಯಾನ್ಸ್‌ಗೂ 'ಲಿಯೋ' ತಂಡ ಅದ್ಭುತ ಗಿಫ್ಟ್ ಕೊಟ್ಟಿದೆ. ಈ ಹಿಂದೆ ಆಕ್ಷನ್ ಕಿಂಗ್ ಹಲವು ಪಾತ್ರಗಳಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದಾರೆ. 62ನೇ ವಯಸ್ಸಿನಲ್ಲಿ ಅದೇ ಉತ್ಸಾಹದೊಂದಿಗೆ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಕಿಂಗ್ ಅನ್ನು ನೆಗೆಟಿವ್ ಶೇಡ್‌ನಲ್ಲಿ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

ಆಕ್ಷನ್ ಕಿಂಗ್ ಈಗ ಹೆರಾಲ್ಡ್ ದಾಸ್

ದಳಪತಿ ವಿಜಯ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಬಹು ನಿರೀಕ್ಷಿತ ಸಿನಿಮಾವಿದು. ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಪಾತ್ರದ ಹೆಸರು ಹೆರಾಲ್ಡ್ ದಾಸ್. ಮೊದಲು ಪಾತ್ರದ ಹೆಸರು ಕಿಕ್ ಕೊಟ್ಟಿದ್ದೆ. ಬಳಿಕ ವೈಲೆಂಟ್ ಲುಕ್ ಕೊಟ್ಟಿರೋ ಆಕ್ಷನ್ ಕಿಂಗ್ ನೋಡಿ ಶಾಕ್ ಆಗಿದ್ದಾರೆ. ಖಡಕ್ ವಿಲನ್ ಲುಕ್ ಕೊಟ್ಟಿರೋ ಅರ್ಜುನ್ ಸರ್ಜಾ ಫ್ಯಾನ್ಸ್‌ಗೆ ಇಷ್ಟ ಆಗುತ್ತಿದ್ದಾರೆ.

ರೋಲೆಕ್ಸ್ ಸಹೋದರ ಹೆರಾಲ್ಡ್ ದಾಸ್?

'ಲಿಯೋ' ಸಿನಿಮಾದಲ್ಲಿರೋ ಮತ್ತೊಬ್ಬ ದೈತ್ಯ ನಟ ಸಂಜಯ್ ದತ್. ಈ ಸಿನಿಮಾದಲ್ಲಿ ಆಂಟೋನಿ ದಾಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಆಂಟೋನಿ ದಾಸ್ ಸಹೋದರ ಹೆರಾಲ್ಡ್ ದಾಸ್. ಆದರೆ, ಅರ್ಜುನ್ ಸರ್ಜಾ ಲುಕ್ ಹಾಗೂ ಖದರ್ ನೋಡಿ ಹೆರಾಲ್ಡ್ ದಾಸ್ 'ವಿಕ್ರಂ' ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ರೋಲೆಕ್ಸ್ ಪಾತ್ರದ ಸಹೋದರ ಇರಬೇಕು ಅಂತ ಅನುಮಾನ ವ್ಯಕ್ತಪಡಿಸುತ್ತಾ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

'ಲಿಯೋ' ಬಗ್ಗೆ ಹೆಚ್ಚಿದ ನಿರೀಕ್ಷೆ

ಲೋಕೇಶ್ ಕನಕರಾಜ್ ಕಾಲಿವುಡ್‌ನ ಟಾಪ್ ಡೈರೆಕ್ಟರ್. ಕಮಲ್ ಹಾಸನ್‌ ಅಂತಹ ಮೇರು ನಟನಿಗೆ 'ವಿಕ್ರಂ' ಅಂತಹ ಬಿಗ್ ಹಿಟ್ ಕೊಟ್ಟ ನಿರ್ದೇಶಕ. ಈಗ ದಳಪತಿ ವಿಜಯ್ ಜೊತೆ 'ಲಿಯೋ' ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ವಿಜಯ್ ಅನ್ನು ಪವರ್‌ಫುಲ್ ವ್ಯಕ್ತಿಯಾಗಿ ತೋರಿಸಲಿದ್ದಾರೆ. ಅದಕ್ಕೆ ಅರ್ಜುನ್ ಸರ್ಜಾ, ಸಂಜಯ್ ದತ್ ಅಂತಹ ಪವರ್‌ಫುಲ್ ನಟರನ್ನೇ ಬಳಸಿಕೊಂಡಿದ್ದಾರೆ. 'ಲಿಯೋ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತೆ ಅನ್ನೋ ನಂಬಿಕೆಯಲ್ಲಿ ಇಡೀ ತಂಡವಿದೆ.

More from Filmibeat

English summary
Arjun Sarja's Leo movie glimps out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X