"ನಯನತಾರಾ ವೃತ್ತಿ ಬದುಕಿನ ಕೊನೆಯಲ್ಲಿ ಏನಾಗುತ್ತೆ? ಸಮಂತಾಗೆ 2ನೇ ಮದುವೆ ಆಗುತ್ತಾ? ತಮಿಳು ಜ್ಯೋತಿಷಿ ಭವಿಷ್ಯವೇನು?

ಸಮಂತಾ ಹಾಗೂ ನಯನತಾರಾ ಇಬ್ಬರೂ ಚಿತ್ರರಂಗದಲ್ಲಿ ಒಳ್ಳೆಯ ಸ್ನೇಹಿತರು. ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಇಬ್ಬರೂ ಸ್ಟಾರ್ ನಟಿಯರೇ. ಇಬ್ಬರೂ ಸಿನಿಮಾರಂಗದಲ್ಲಿ ಇನ್ನೂ ಆಕ್ಟೀವ್ ಆಗಿದ್ದಾರೆ. ಮದುವೆ ಬಳಿಕವೂ ಇಬ್ಬರು ನಟಿಯರ ವೃತ್ತಿ ಬದುಕಿನಲ್ಲಿ ಹಿನ್ನಡೆಯಾಗಿಲ್ಲ.

ಸಮಂತಾ ಹಾಗೂ ನಯನತಾರಾ ಇಬ್ಬರೂ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಸಮಂತಾ ವಿವಾಹದ ಬಳಿಕ ವಿಚ್ಛೇದನ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೂ ವೃತ್ತಿ ಬದುಕನ್ನು ಬಿಟ್ಟಿಲ್ಲ.

nayanthara-samantha-astrology

ಅದೇ ಇನ್ನೊಂದು ಕಡೆ ನಯನತಾರಾ ಕೂಡ ಪ್ರೇಮ ವೈಫಲ್ಯದಿಂದ ಬಳಲಿದ್ದರು. ಈಗ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಗೇ ವೃತ್ತಿ ಬದುಕು ಕೂಡ ಅಷ್ಟೇ ಸಕ್ಸಸ್‌ಫುಲ್ ಆಗಿದೆ. ಇವರಿಬ್ಬರೂ ದಕ್ಷಿಣ ಭಾರತೀಯ ಚಿತ್ರರಂಗದ ವಿಶಿಷ್ಠ ನಟಿಯರು ಎಂದೇ ಹೇಳಬಹುದು. ಈ ಇಬ್ಬರು ನಟಿಯರ ಬಗ್ಗೆ ತಮಿಳು ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಅದೇನದು ಅಂತ ತಿಳಿಯಲು ಮುಂದೆ ಓದಿ.

ವಿಚ್ಚೇದನದ ಬಳಿಕ ಸಮಂತಾಗೆ ಸಂಕಷ್ಟ

ಸಮಂತಾ ಪ್ರೀತಿಸಿ ನಾಗಚೈತನ್ಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ವಿಚ್ಛೇದನದ ಬಳಿಕ ಸಮಂತಾ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಕೆಲವು ದಿನಗಳು ಖಿನ್ನತೆಗೆ ಜಾರಿದ್ದರು. ಅದರಿಂದ ಹೊರ ಬಂದು ಇನ್ನೇನು ಸಿನಿಮಾಗಳಲ್ಲಿ ಆಕ್ವೀವ್ ಆದರು ಅನ್ನುವಾಗಲೇ ಅನಾರೋಗ್ಯ ಸಮಸ್ಯೆ ಕಾಡುವುದಕ್ಕೆ ಶುರುವಾಗಿತ್ತು. ಮಯೊಸೈಟಿಸ್‌ನಿಂದ ಅಪರೂಪದ ಖಾಯಿಲೆಯಿಂದ ಬಳಸುತ್ತಿರೋ ಸಮಂತಾ ಸದ್ಯ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

ನಯನತಾರಾ ಭವಿಷ್ಯ ಹೇಗಿದೆ?

ನಯನತಾರಾ ಕೂಡ ಹೀಗೆ ಹಲವು ಬಾರಿ ಪ್ರೇಮ ವೈಫಲ್ಯವನ್ನು ಕಂಡಿದ್ದರು. ಈ ನೋವಿನಿಂದ ಹೊರಬಂದು ಮತ್ತೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಈಗ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಅವಳಿ ಜವಳಿ ಗಂಡು ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ. ಹಾಗಂತ ಸಿನಿಮಾವನ್ನೇನು ಕಮ್ಮಿ ಮಾಡಿಲ್ಲ. ಈ ಇಬ್ಬರು ನಟಿಯರ ಬಗ್ಗೆ ತಮಿಳಿನ ಜನಪ್ರಿಯ ಜ್ಯೋತಿಷಿ ಕದೀರ್ ಭವಿಷ್ಯ ನುಡಿದಿದ್ದಾರೆ.

nayanthara-samantha-astrology

ಸಮಂತಾ 2ನೇ ಮದುವೆ ಆಗ್ತಾರಾ?

ಸಮಂತಾ ಬಗ್ಗೆ ಜ್ಯೋತಿಷಿ ಕದೀರ್ ಭವಿಷ್ಯ ನುಡಿದಿದ್ದಾರೆ. ಸಮಂತಾ 2ನೇ ಸಂಬಂಧ ಹೊಂದುವ ಸಾಧ್ಯತೆಯಿದೆ. ಆದರೆ, 2ನೇ ಮದುವೆ ಆಗುವುದಕ್ಕೆ ಹೆಚ್ಚು ಸಮಯ ಹಿಡಿಯಬಹುದು. ವೃತ್ತಿ ಬದುಕಿ ಆಶಾದಾಯಕವಾಗಿದೆ. ಹಾಗೇ ಹುಟ್ಟಿದ ದಿನವನ್ನೇ ಆಧಾರವಾಗಿಟ್ಟುಕೊಂಡು ಭವಿಷ್ಯ ನುಡಿಯುವುದು ಕಷ್ಟ ಎಂದೂ ಹೇಳಿದ್ದಾರೆ. ಅಲ್ಲದೆ ಸಮಂತಾಗೆ ಉತ್ತಮ ಚಿಕಿತ್ಸೆ ದೊರೆತರೆ, ಈಗಿನ ಖಾಯಿಲೆ ವಾಸಿಯಾಗುತ್ತೆ ಎಂದು ಹೇಳಿದ್ದಾರೆ.

ನಯನತಾರಾ ಬಗ್ಗೆ ಹೇಳಿದ್ದೇನು?

ಲೇಡಿ ಸೂಪರ್‌ಸ್ಟಾರ್ ನಯನತಾರಾ ವೃತ್ತಿಜೀವನದ ಭವಿಷ್ಯದ ಬಗ್ಗೆಯೂ ಕದೀರ್ ಭವಿಷ್ಯ ನುಡಿದಿದ್ದಾರೆ. "ನಯನತಾರಾ ರಾಶಿ ಪ್ರಕಾರ, ಈಗ ಒಳ್ಳೆಯ ಸಮಯ. ಮುಂದಿನ ದಿನಗಳಲ್ಲಿ ನಟಿ ನಿರ್ಮಾಣದತ್ತ ಗಮನ ಹರಿಸುತ್ತಾರೆ. ಇದು ಮುಂದಿನ ಮೂರರಿಂದ ನಾಲ್ಕು ವರ್ಷದೊಳಗೆ ಯಾವಾಗ ಬೇಕಿದ್ದರೂ ಆಗಬಹುದು" ಎಂದು ಭವಿಷ್ಯ ನುಡಿದಿದ್ದಾರೆ. ಇತ್ತ ಸಮಂತಾ ಹಾಗೂ ನಯನತಾರಾ ಇಬ್ಬರೂ ವೃತ್ತಿ ಬದುಕಿನ ಬಗ್ಗೆ ಗಮನ ಹರಿಸುತ್ತಿದ್ದಾರೆ.

More from Filmibeat

English summary
Astrologer Kadhir Prediction about Samantha second marriage and Nayanthara career
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X