ಶರತ್ ಬಾಬು ಅಂತ್ಯ ಸಂಸ್ಕಾರಕ್ಕೆ ಬಂದಾಗ ಕೊಡೆ ಹಿಡಿಯಲು ಬಂದ ಸಹಾಯಕ: ಗದರಿದ ರಜನಿ ವಿಡಿಯೋ ವೈರಲ್

ದಕ್ಷಿಣ ಭಾರತದ ಜನಪ್ರಿಯರ ನಟ ಶರತ್ ಬಾಬು ಮೇ 22ರಂದು ನಿಧರಾಗಿದ್ದರು. ಕೆಲವು ದಿನಗಳಿಂದ ಶರತ್ ಬಾಬು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿತ್ತು.

ಶರತ್ ಬಾಬು ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಆಸ್ಪತ್ರೆಯಲ್ಲಿಯೇ ಕಣ್ಣೀರು ಹಾಕಿದ್ದರು. ತೆಲುಗು ಹಾಗೂ ತಮಿಳು ಚಿತ್ರರಂಗದ ದಿಗ್ಗಜರು ಶರತ್ ಬಾಬು ಜೊತೆಗಿನ ಕ್ಷಣಗಳನ್ನು ಹಂಚಿಕೊಂಡಿದ್ದರು.

At Sarath Babu funeral Superstar Rajinikanth denied umbrella video goes viral

ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಗೆಳೆಯ ಶರತ್ ಬಾಬು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ದು:ಖದಲ್ಲೇ ಅವರೊಂದಿಗಿನ ಆತ್ಮೀಯತೆ ಬಗ್ಗೆ ಮಾತಾಡಿದ್ದರು. ಈ ವೇಳೆ ಕೊಡೆ ಹಿಡಿಯಲು ಬಂದವನಿಗೆ ರಜನಿ ಗದರಿಸಿದ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಬಿಸಿಲ ಬಗೆಯಲ್ಲೇ ಗೆಳೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿ

ಶರತ್ ಬಾಬು ಹಾಗೂ ರಜನಿಕಾಂತ್ ಇಬ್ಬರೂ ಉತ್ತಮ ಗೆಳೆಯರು. ಇಬ್ಬರು ವಯಸ್ಸು ಕೂಡ ಹೆಚ್ಚು ಕಡಿಮೆ ಒಂದೇನೆ. ಅಲ್ಲದೆ ಇವರಿಬ್ಬರೂ ನಟಿಸಿದ ಸಿನಿಮಾಗಳು ಹೊಸ ಹೊಸ ದಾಖಲೆಗಳನ್ನೇ ಬರೆದಿದೆ. 'ಮುತ್ತು', 'ಅಣ್ಣಾಮಲೈ' ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದರು. ಹೀಗಾಗಿ ಇಬ್ಬರೂ ಜೊತೆಯಾಗಿ ನಟಿಸುವ ವೇಳೆ ಸವಿ ನೆನಪುಗಳನ್ನು ಈ ವೇಳೆ ಮೆಲುಕು ಹಾಕಿದ್ದಾರೆ. ಅಲ್ಲದೆ ಅಂತ್ಯಸಂಸ್ಕಾರದಲ್ಲೂ ಭಾಗಿಯಾಗಿದ್ದರು.

At Sarath Babu funeral Superstar Rajinikanth denied umbrella video goes viral

ಮೇ 23 ರಂದು ನಡೆದ ಅಂತ್ಯ ಸಂಸ್ಕಾರದ ವೇಳೆ ಬಿಸಿಲಿತ್ತು. ರಜನಿಕಾಂತ್ ಬಂದು ಮಾಧ್ಯಮಗಳೊಂದಿಗೆ ಮಾತಾಡುತ್ತಿರುವಾಗ ಹಿಂದಿನಿಂದ ಅವರ ಸಹಾಯಕ ಕೊಡೆ ಹಿಡಿಯಲು ಮುಂದಾಗಿದ್ದರು. ಆಗ ರಜನಿಕಾಂತ್ ತನ್ನ ಸಹಾಯಕನಿಗೆ ಗದರಿ, ಕೊಡೆ ಇಳಿಸುವಂತೆ ಹೇಳಿದರು. ಇದೇ ವಿಡಿಯೋ ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಜನಿ ಸರಳತೆ ಮೆಚ್ಚಿದ ಫ್ಯಾನ್ಸ್

ರಜನಿಕಾಂತ್ ಕೊಡೆಯನ್ನು ತಿರಸ್ಕರಿಸಿದ ಚಿಕ್ಕ ವಿಡಿಯೋ ಒಂದು ದಿನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಜನಿಕಾಂತ್ ತನ್ನ ಗೆಳೆಯನಿಗೆ ಕೊಟ್ಟ ಗೌರವ, ಸಮಯ ಪ್ರಜ್ಞೆ ಹಾಗೂ ಸರಳತೆಯನ್ನು ಕಂಡು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಶರತ್ ಬಾಬು ಆತ್ಮೀಯತೆ ಹಾಗಿತ್ತು. ರಜನಿಕಾಂತ್‌ಗೆ ಸಿಗರೇಟ್ ಸೇದುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದರು. ಅಲ್ಲದೆ ರಜನಿ ಕೈಯಿಂದ ಸಿಗರೇಟ್ ಅನ್ನು ಕಿತ್ತು ಬಿಸಾಕಿದ್ದರು ಎಂದು ರಜನಿ ಆ ಘಳಿಗೆಯನ್ನು ನೆನಪಿಸಿಕೊಂಡಿದ್ದರು.

ಗಣ್ಯರಿಂದ ಸಂತಾಪ

ಶರತ್ ಬಾಬು ಅಂತ್ಯಸಂಸ್ಕಾರದಲ್ಲಿ ಕಾಲಿವುಡ್ ದಿಗ್ಗಜರು ಭಾಗವಹಿಸಿದ್ದರು. ಸೂರ್ಯ, ಕೆ ಭಾಗ್ಯರಾಜ್, ಆರ್ ಪಾರ್ಥಿಬನ್, ಆರ್ ಶರತ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ, ಅಂತಿಮ ನಮನ ಸಲ್ಲಿಸಿದ್ದರು.

1971ರಲ್ಲಿ ಶರತ್‌ ಬಾಬು ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕೆ ಬಾಲಚಂದಿರ್ ನಿರ್ದೇಶಿಸಿದ 'ಪಟ್ಟಿನ ಪ್ರವೇಶಂ' ಮೊದಲ ಸಿನಿಮಾ. ಶರತ್ ಬಾಬು 50 ವರ್ಷಗಳ ಸಿನಿ ಜರ್ನಿಯಲ್ಲಿ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.

More from Filmibeat

English summary
At Sarath Babu funeral Superstar Rajinikanth denied umbrella video goes viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X