15ನೇ ವಯಸ್ಸಿನಲ್ಲೇ ಮೀನಾ ಗರ್ಭಿಣಿ.. ಏನಿದು ಸಂದರ್ಭ? ತಮಿಳಿನ ಹಿರಿಯ ನಟ ರಾಜ್ ಕಿರಣ್ ಬಿಚ್ಚಿಟ್ಟ ಗುಟ್ಟೇನು?
ದಕ್ಷಿಣ ಭಾರತದ ನಟಿ ಮೀನಾ ಬಗ್ಗೆ ಯಾರಿಗೆ ಗೊತ್ತಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿಯೀಕೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಈ ನಟಿ ಬಗ್ಗೆ ತನ್ನದೇ ಆದ ಸ್ಥಾನವಿದೆ. ದಕ್ಷಿಣದ ಎಲ್ಲಾ ಸೂಪರ್‌ಸ್ಟಾರ್‌ಗಳಿಗೂ ಮೀನಾ ಬಗ್ಗೆ ವಿಶೇಷವಾದ ಅಭಿಮಾನವಿದೆ. ಅದಕ್ಕೆ ಕಾರಣ ಮೀನಾ ಅವರ ಅಚ್ಚು ಕಟ್ಟಾದ ಕೆಲಸ.
1994ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಈ ನಟಿಯನ್ನು ಕನ್ನಡಕ್ಕೆ ಕರೆದುಕೊಂಡು ಬಂದಿದ್ರು. ಅಲ್ಲಿವರೆಗೂ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಹೆಚ್ಚಿ ನಟಿಸಿ ಜನಪ್ರಿಯರಾಗಿದ್ದರು. ರವಿಚಂದ್ರನ್ 'ಪುಟ್ನಂಜ' ಸಿನಿಮಾಗಾಗಿ ಅವರನ್ನು ಕನ್ನಡಕ್ಕೆ ಕರೆತಂದಿದ್ದರು. ಅಲ್ಲಿಂದ ಕ್ರೇಜಿಸ್ಟಾರ್ ಜೊತೆ 'ಚೆಲುವ', 'ಮೊಮ್ಮಗ' ಸಿನಿಮಾಗಳಲ್ಲಿ ಕ್ರೇಜಿಸ್ಟಾರ್‌ಗೆ ಜೋಡಿಯಾಗಿದ್ದರು.

ಕನ್ನಡದಲ್ಲಿ ಮೀನಾ ಜರ್ನಿ ಇಲ್ಲಿಗೆ ನಿಂತಿಲ್ಲ. ಕಿಚ್ಚ ಸುದೀಪ್ ನಟಿಸಿದ 'ಸ್ವಾತಿ ಮುತ್ತು','ಮೈ ಆಟೋಗ್ರಾಫ್' ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲೂ ನಟಿಸಿದ್ದರು. ಹಾಗೇ ಭಕ್ತಿ ಪ್ರಧಾನ ಸಿನಿಮಾ 'ಗ್ರಾಮ ದೇವತೆ' ಜೊತೆಗೆ 'ಮಹಾಸಾದ್ವಿ ಮಲ್ಲಮ್ಮ'ದಂತಹ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹೀಗಾಗಿ ಕನ್ನಡಿಗರು ಈ ನಟಿ ಅಪರಿಚಿತರೇನೂ ಅಲ್ಲ. ಈ ನಟಿಯ ಬಗ್ಗೆ ತಮಿಳಿನ ಹಿರಿಯ ನಟ ರಾಜ್ ಕಿರಣ್ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹೊರ ಹಾಕಿದ್ದಾರೆ.
ಇತ್ತೀಚೆಗೆ ಮೀನಾ ನೀಡಿದ ಸಂದರ್ಶನಗಳು ವೈರಲ್ ಆಗುತ್ತಿವೆ. ಅವರು ಕೊಟ್ಟ ಹೇಳಿಕೆಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆ ಪ್ರತಿಕ್ರಿಯಿಸುತ್ತಿದ್ದಾರೆ. ಈ ನಡುವೆ ತಮಿಳು ಚಿತ್ರರಂಗದ ಹಿರಿಯ ನಟ ರಾಜ್ ಕಿರಣ್ ಕೂಡ ಮೀನಾ ಬಗ್ಗೆ ಹೇಳಿದ ಇಂಟ್ರೆಸ್ಟಿಂಗ್ ಸಂಗತಿಯೊಂದು ವೈರಲ್ ಆಗುತ್ತಿದೆ. 1991ರಲ್ಲಿ ರಣ್‌ಕಿರಣ್ ಹಾಗೂ ಮೀನಾ 'ಎನ್ ರಸವಿನ್ ಮನಸಿಲೆ' ಅನ್ನುವ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ ಮಾಡುವಾಗ ಮೀನಾಗೆ ಕೇವಲ 15 ವರ್ಷ ವಯಸ್ಸು.
ಇದು ಜನಪ್ರಿಯ ನಿರ್ದೇಶಕ ಕಸ್ತೂರಿ ರಾಜ ಆಕ್ಷನ್ ಕಟ್ ಹೇಳಿದ್ದ ಮೊದಲ ಸಿನಿಮಾ. ಇಂಟ್ರೆಸ್ಟಿಂಗ್ ವಿಷಯ ಅಂದರೆ, 'ಎನ್ ರಸವಿನ್ ಮನಸಿಲೆ' ಸಿನಿಮಾಗೆ ನಾಯಕಿಯ ಹುಡುಕಾಟದಲ್ಲಿದ್ದರು. ಆ ವೇಳೆ ಮ್ಯಾಗಜೀನ್‌ನಲ್ಲಿ ಮೀನಾ ಫೋಟೋ ನೋಡಿ ಸಿನಿಮಾಗೆ ನಾಯಕಿಯನ್ನಾಗಿ ಮೀನಾರನ್ನು ಆಯ್ಕೆ ಮಾಡಿದ್ದರು. ಈ ಸಂಗತಿಯನ್ನು ರಾಜ್ ಕಿರಣ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮೀನಾ ಇತ್ತೀಚೆಗೆ 40 ವರ್ಷಗಳ ಸಿನಿ ಜರ್ನಿಯನ್ನು ಸಂಭ್ರಮಿಸಿದ್ದರು. ಇದಕ್ಕಾಗಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ರಜನಿಕಾಂತ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಅದೇ ಕಾರ್ಯಕ್ರಮಕ್ಕೆ ರಾಜ್ ಕಿರಣ್ ಕೂಡ ಬಂದಿದ್ದರು. ಆ ವೇಳೆ ಅವರೊಂದಿಗೆ ಮೀನಾ ನಟಿಸಿದ ಕ್ಷಣಗಳನ್ನು ಮೆಲುಕು ಹಾಕಿದ್ದರು. 'ಎನ್ ರಸವಿನ್ ಮನಸಿಲೆ' ಸಿನಿಮಾಗೆ ಮೀನಾ ಆಯ್ಕೆ ಆದಾಗ, ನಿರ್ದೇಶಕರಿಗೆ ಮೀನಾ ತುಂಬಾ ಚಿಕ್ಕವಳಂತೆ ಕಾಣುತ್ತಾಳೆ. ಅಂತಹ ಪಾತ್ರಕ್ಕೆ ಸರಿಹೊಂದುತ್ತಾಳಾ ಎಂದು ಹೇಳಿದ್ದರಂತೆ. ಅದಕ್ಕೆ ಕಸ್ತೂರಿ ರಾಜಗೆ ಪೂರ್ಣ ವಿಶ್ವಾಸವಿತ್ತು ಎನ್ನುತ್ತಾರೆ.
ಮೀನಾ ಈ ಸಿನಿಮಾದಲ್ಲಿ ನಟಿಸುವಾಗ ಕೇವಲ 15 ವರ್ಷ. ಆದರೆ, ಈ ಸಿನಿಮಾದಲ್ಲಿ ಗರ್ಭಿಣಿಯ ಪಾತ್ರದಲ್ಲಿ ನಟಿಸಬೇಕಿತ್ತು. ಈ ಬಗ್ಗೆ ಇಡೀ ತಂಡಕ್ಕೆ ಅನುಮಾನವಿತ್ತು. ಆದರೆ, ಮೀನಾ ಆ ಪಾತ್ರದಲ್ಲಿ ಅಷ್ಟು ಎಫೆಕ್ಟಿವ್ ಆಗಿ ನಟಿಸಿದ್ದರು. ಅದಕ್ಕೆ ಮೀನಾ 15ನೇ ವರ್ಷಕ್ಕೆ ಸಿನಿಮಾದಲ್ಲಿ ಗರ್ಭಿಣಿಯಾಗಿದ್ದ ಸಂಗತಿ ವೈರಲ್ ಆಗುತ್ತಿದೆ. ಮೀನಾ ಗರ್ಭಿಣಿಯಾಗಿ ನಟಿಸಿದ್ದ ಈ ಸಿನಿಮಾ ಥಿಯೇಟರ್‌ನಲ್ಲಿ ಸಿಲ್ವರ್ ಜ್ಯುಬಿಲಿ ಆಚರಿಸಿಕೊಂಡಿತ್ತು.
ಮೀನಾ ಅಭಿನಯದಿಂದಲೇ 'ಎನ್ ರಸವಿನ್ ಮನಸಿಲೆ' ಸಿನಿಮಾ ಅಷ್ಟೊಂದು ಸೂಪರ್ ಹಿಟ್ ಆಯಿತು. ಮೀನಾ ಸಾಮರ್ಥ್ಯವನ್ನು ಮೆಚ್ಚಲೇಬೇಕು ಎಂದು ಸ್ವತ: ಆ ಸಿನಿಮಾಗೆ ಹೀರೋ ಆಗಿದ್ದ ರಾಜ್ ಕಿರಣ್ ಕಾರ್ಯಕ್ರಮದಲ್ಲಿ ಹೇಳಿದ್ದರು.


Click it and Unblock the Notifications











