ಬ್ಯಾಂಗಲ್‌ ಬಂಗಾರಿ ಗಾಯಕ ಆಂಥೋನಿ ದಾಸನ್ ಜೊತೆ ಕಂಡ ವಿಜಯ್ ಪುತ್ರ; ಅಪ್ಪನ ವಿಚ್ಚೇದನದ ಬಳಿಕ ಫುಲ್ ಆಕ್ಟಿವ್

ತಮಿಳುನಾಡಿನಲ್ಲಿ ದಳಪತಿ ವಿಜಯ್ ವಿಚ್ಚೇದನ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಸಂಗೀತಾ ಫ್ಯಾಮಿಲಿ ಕೋರ್ಟ್‌ನಲ್ಲಿ ಡಿವೋರ್ಸ್‌ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಂತೆ ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ದಳಪತಿ ವಿಜಯ್ ಆಗಲಿ, ಪತ್ನಿ ಸಂಗೀತಾ ಆಗಲಿ ಇನ್ನೂ ಅಧಿಕೃತವಾಗಿ ಹೇಳಿಕೆಗಳನ್ನು ಕೊಟ್ಟಿಲ್ಲ. ಅಷ್ಟರಲ್ಲೂ ಸಾಕಷ್ಟು ಬೆಳವಣಿಗೆಗಳು ನಡೆದು ಹೋಗಿವೆ.

ಸಂಗೀತಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದಂತೆ ಇತ್ತ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರ ಈ ನಡೆಯನ್ನು ತಮಿಳುನಾಡು ಚಿತ್ರರಂಗದ ಕೆಲ ಗಣ್ಯರು ವಿರೋಧವನ್ನು ವ್ಯಕ್ತಪಡಿಸಿದ್ದರು. ಇದು ರಾಜಕೀಯವಾಗಿಯೂ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.

Bangle Bangari singer Anthony Dasan with Thalapthy Vijay Son Jason Sanjay pics goes viral

ಈ ಮಧ್ಯೆ ವಿಜಯ್ ಪುತ್ರ ಜಾಸನ್ ಸಂಜಯ್ ತಮ್ಮ ಹೆಸರಿನಲ್ಲಿದ್ದ ತಂದೆಯ ಹೆಸರು ತೆಗೆದ ತಾಯಿ ಹೆಸರನ್ನು ಸೇರಿಸಿಕೊಂಡಿದ್ದಾರೆ. ಇದು ಕೂಡ ಕಳೆದೆರಡು ದಿನಗಳಿಂದ ಚರ್ಚೆಯಾಗುತ್ತಿದೆ. ಈ ಮಧ್ಯೆ 'ಎಕ್ಕ' ಸಿನಿಮಾದ ಗಾಯಕ ಆಂಥೋನಿ ದಾಸನ್ ಅವರೊಂದು ವಿಜಯ್ ಪುತ್ರ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊ ಈಗ ಸೋಶಿಯ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ನಟನೆಗಿಂತ ನಿರ್ದೇಶನಕ್ಕೆ ಕೈ ಹಾಕಿದ್ದು ಗೊತ್ತೇ ಇದೆ. 'ಸಿಗ್ಮಾ' ಅನ್ನೋ ಸಿನಿಮಾದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾದ ಟೀಸರ್ ಕೆಲವು ತಿಂಗಳ ಹಿಂದೆಯೇ ರಿಲೀಸ್ ಆಗಿದೆ. ಆದರೆ, ಸಿನಿಮಾ ಮಾತ್ರ ಇನ್ನೂ ತೆರೆಕಂಡಿಲ್ಲ. ಈ ವೇಳೆ ಅಪ್ಪನ ಹೆಸರನ್ನು ತೆಗೆದು ಹಾಕಿರೋ ಜೇಸನ್ ಸಂಜಯ್ ಸಿನಿಮಾ ಭವಿಷ್ಯದ ಬಗ್ಗೆ ಅವರ ಫ್ಯಾನ್ಸ್ ಚಿಂತಿತರಾಗಿದ್ದರು. ಈ ಬೆನ್ನಲ್ಲೇ ಗಾಯಕ ಆಂಟೋನಿ ದಾಸನ್ ಜೊತೆಗಿನ ಫೋಟೋ ವೈರಲ್ ಆಗುತ್ತಿದೆ.

Also Read
ಶೀಘ್ರದಲ್ಲಿಯೇ ತ್ರಿಶಾ ಜೊತೆ ನಡೆಯಲಿದೆ ವಿಜಯ್ ಮದುವೆ ; ಸುಳಿವು ನೀಡಿದ ತಾಯಿ ಉಮಾ - ದಳಪತಿ ಫ್ಯಾನ್ಸ್ ಕಕ್ಕಾಬಿಕ್ಕಿ
ಶೀಘ್ರದಲ್ಲಿಯೇ ತ್ರಿಶಾ ಜೊತೆ ನಡೆಯಲಿದೆ ವಿಜಯ್ ಮದುವೆ ; ಸುಳಿವು ನೀಡಿದ ತಾಯಿ ಉಮಾ - ದಳಪತಿ ಫ್ಯಾನ್ಸ್ ಕಕ್ಕಾಬಿಕ್ಕಿ

"ಬ್ಯಾಂಗಲ್ ಬಂಗಾರಿ.." ಗಾಯಕಿ ಆಂಥೋನಿ ದಾಸನ್ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದೆ. ಅದರಲ್ಲೂ ತಂದೆಯೊಂದಿಗೆ ಸಂಬಂಧವನ್ನು ಕಡಿದು ಕೊಳ್ಳುವುದಕ್ಕೆ ಮುಂದಾಗಿದ್ದಾರೆಂದು ಸುದ್ದಿ ಹಬ್ಬಿದ ಬೆನ್ನಲ್ಲೇ ಸಿನಿಮಾ ಕ್ಷೇತ್ರದಲ್ಲಿ ಆಕ್ಷಿವ್ ಆಗಿರೋದು ವಿಜಯ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇನ್ನು ಜಾಸನ್ ಸಂಜಯ್‌ಗೆ ಸಿನಿಮಾರಂಗವೇನು ಹೊಸದೇನು ಅಲ್ಲ. ಈ ಹಿಂದೆ ದಳಪತಿ ವಿಜಯ್ ನಟನೆಯ 'ವೆಟ್ಟೆಕ್ಕಾರನ್' ಸಿನಿಮಾದ "ನಾ ಅಡಿಚ್ಚಾ ತಾಂಗಮಾಟ್ಟಾ.." ಸಾಂಗ್‌ನಲ್ಲಿ ಪುತ್ರ ಜೇಸನ್ ಸಂಜಯ್ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಅಲ್ಲದೆ, 'ಪ್ರೇಮಮ್' ನಿರ್ದೇಶಕ ಅಲ್ಫೋನ್ಸ್ ಪುತ್ರನ್ ಸೇರಿದಂತೆ ಹಲವು ಮಂದಿ ವಿಜಯ್ ಪುತ್ರನನ್ನು ನಾಯಕನಾಗಿ ಪರಿಚಯಿಸಲು ಮುಂದಾಗಿದ್ದರು. ಆದರೆ, ಜೇಸನ್ ಸಂಜಯ್ ಹೀರೋ ಆಗುವ ಬದಲು, ನಿರ್ದೇಶಕನಾಗಲು ನಿರ್ಧರಿಸಿದ್ದು ಅಚ್ಚರಿ ಮೂಡಿಸಿತ್ತು.

ಆಂಥೋನಿ ದಾಸನ್ ಹಂಚಿಕೊಂಡಿರುವ ಫೋಟೋ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ. ವಿಚ್ಚೇದನದ ಸುದ್ದಿಯನ್ನು ಸದ್ಯಕ್ಕೆ ಮರೆತು ವಿಜಯ್ ಪುತ್ರನ ಚೊಚ್ಚಲ ಸಿನಿಮಾ 'ಸಿಗ್ಮಾ' ಬಗ್ಗೆ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಆಂಧೋನಿ ದಾಸನ್ ಈ ಸಿನಿಮಾದಲ್ಲಿ ಹಾಡನ್ನು ಹಾಡಿರಬೇಕು ಎಂದು ಊಹೆ ಮಾಡುತ್ತಿದ್ದಾರೆ. ವಿಜಯ್ ಪುತ್ರ ಸಂಜಯ್ ನಿರ್ದೇಶಿಸುತ್ತಿರುವ 'ಸಿಗ್ಮಾ' ಸಿನಿಮಾವನ್ನು ಲೈಕಾ ನಿರ್ಮಾಣ ಮಾಡುತ್ತಿದ್ದು, ಶೀಘ್ರದಲ್ಲೇ ರಿಲೀಸ್ ಬಗ್ಗೆ ಜಾಸನ್ ಸಂಜಯ್ ಅಪ್‌ಡೇಟ್ ನೀಡುವ ಸಾಧ್ಯತೆಯಿದೆ.

More from Filmibeat

English summary
Bangle Bangari singer Anthony Dasan with Thalapthy Vijay Son Jason Sanjay pics goes viral.
Read more about: vijay song viral photo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X