ಗಂಡಿನ ಕಡೆಯವ್ರು ಎಂದು ಕಮಲ್‌ಗೆ ಸುಣ್ಣ ಬಳಿದುಬಿಟ್ರಾ ಶಿಷ್ಯರು?
ತಮಿಳಿನಲ್ಲಿ ಬಿಗ್‌ಬಾಸ್ ಸೀಸನ್ 6 ಮುಕ್ತಾಯವಾಗಿದೆ. ಅಜೀಮ್ ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿದ್ದಿದ್ದಾರೆ. ಕಳೆದ ವೀಕೆಂಡ್ ಗ್ರ್ಯಾಂಡ್ ಫಿನಾಲೆ ನಡೆದಿತ್ತು. ಶೋನಲ್ಲಿ ಕಮಲ್ ಹಾಸನ್ ಜೀನ್ಸ್ ಪ್ಯಾಂಟ್, ಜೀನ್ಸ್ ಜಾಕೆಟ್ ತೊಟ್ಟು ದರ್ಶನ ಕೊಟ್ಟಿದ್ದರು. ಕಮಲ್ ಹಾಸನ್ ಲುಕ್ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದರು. ಇದೇ ಲುಕ್ ಈಗ ಒಂದಷ್ಟು ಫನ್ನಿ ಮೀಮ್ಸ್‌ಗೆ ಆಹಾರವಾಗಿದೆ. ಕನ್ನಡಿಗರು ಯಾರೋ ಒಬ್ಬರು ಮಾಡಿರು ಮೀಮ್ ಸಖತ್ ವೈರಲ್ ಆಗಿದೆ.
ಕಮಲ್ ತೊಟ್ಟಿರುವ ನೀಲಿ ಬಣ್ಣದ ಜೀನ್ಸ್ ಜಾಕೆಟ್ ಹಾಗೂ ಪ್ಯಾಂಟ್ ಮೇಲೆ ಬಿಳಿ ಬಣ್ಣ ಎರಚಿದಂತೆ ಕಾಣುತ್ತಿದೆ. ಇದನ್ನು ನೋಡಿದ ನೆಟ್ಟಿಗನೊಬ್ಬನಿಗೆ ಕನ್ನಡದ ಎವರ್‌ಗ್ರೀನ್ 'ಗುರುಶಿಷ್ಯರು' ಚಿತ್ರದ ದೃಶ್ಯ ನೆನಪಾಗಿದೆ. ಆ ಚಿತ್ರದಲ್ಲಿ ರಾಜಗುರು ಪೂರ್ಣಾನಂದಯ್ಯ ಏನೋ ಹೇಳಿದರೆ ಮತ್ತೇನೋ ಮಾಡುವ ಶಿಷ್ಯರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ಅದರಲ್ಲೂ "ಗಂಡಿನ ಕಡೆಯವರು ಬರುತ್ತಾರೆ ಬೇಗ ಬೇಗ ಸುಣ್ಣ ಬಳಿಯಿರಿ" ಎಂದು ಗುರುಗಳು ಹೇಳಿದ್ದನ್ನು ಕೇಳಿ ಬಂದವರಿಗೆಲ್ಲಾ ಶಿಷ್ಯರು ಸುಣ್ಣ ಬಳಿಯುವ ದೃಶ್ಯ ಪ್ರೇಕ್ಷಕರನ್ನು ರಂಜಿಸಿತ್ತು.

ಬಂದವರನ್ನೆಲ್ಲಾ ಗಂಡಿನ ಕಡೆಯವರಾ? ಎಂದು ಕೇಳಿ ಕರೆದುಕೊಂಡು ಹೋಗಿ ಸುಣ್ಣ ಬಳಿದು ಬಿಡುತ್ತಾರೆ. ಕಮಲ್ ಹಾಸನ್ ಹೊಸ ಲುಕ್ ನೋಡಿದ ನೆಟ್ಟಿಗ ಆ ಸಾಲಿನಲ್ಲಿ ಕಮಲ್ ಹಾಸನ್‌ನ ಕೂಡ ನಿಲ್ಲಿಸಿಬಿಟ್ಟಿದ್ದಾನೆ. ಸದ್ಯ ಈ ಫೋಟೊ ಸಖತ್ ವೈರಲ್ ಆಗಿದೆ. ಫೋಟೊ ನೋಡಿವರು ನೆಟ್ಟಿಗನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಜೊತೆಗೆ ಈ ಫನ್ನಿ ಮೀಮ್ ನೋಡಿ ನೆಟ್ಟಿಗರು ಸಖತ್ ಎಂಜಾಯ್ ಮಾಡ್ತಿದ್ದಾರೆ. ಇನ್ನು ನೂರು ದಿನಗಳ ಕಾಲ ನಡೆ ಬಿಗ್‌ಬಾಸ್ ಶೋನಲ್ಲಿ 20 ಜನ ಸ್ಪರ್ಧಿಗಳನ್ನು ಹಿಂದಿಕ್ಕಿ ಅಜೀಮ್ ಗೆದ್ದಿದ್ದಾರೆ.

ವಿಕ್ರಮನ್, ಶಿವಿನ್, ಅಜೀಮ್ ಫೈನಲಿಸ್ಟ್‌ಗಳಾಗಿದ್ದು. ಆದರೆ ಟ್ರೋಫಿ ಮಾತ್ರ ಅಜೀಮ್ ಪಾಲಾಗಿದೆ. ಅಜೀಮ್‌ಗೆ ಬಹುಮಾನವಾಗಿ 34 ಲಕ್ಷ ನಗದು ಹಾಗೂ ಒಂದು ಮಾರುತಿ ಸ್ವಿಫ್ಟ್ ಕಾರು ಸಿಕ್ಕಿದೆ. ಅಂದಹಾಗೆ ಇತ್ತೀಚೆಗೆ ಮುಗಿದ ಕನ್ನಡ ಬಿಗ್‌ಬಾಸ್ ಶೋ ವಿಜೇತ ರೂಪೇಶ್ ಶೆಟ್ಟಿಗೆ 60 ಲಕ್ಷ ಬಹುಮಾನವಾಗಿ ಸಿಕ್ಕಿತ್ತು.


Click it and Unblock the Notifications











