Bigg Boss; ತಮಿಳು ಬಿಗ್‌ಬಾಸ್ ಶೋ ನಿರೂಪಣೆಗೆ ವಿಜಯ್ ಸೇತುಪತಿ ಸಂಭಾವನೆ ಎಷ್ಟು?

ಹಿಂದಿ ಕಿರುತೆರೆಯಲ್ಲಿ ಸಕ್ಸಸ್ ಕಂಡಿದ್ದ ಬಿಗ್‌ಬಾಸ್ ಶೋ ಬಳಿಕ ದಕ್ಷಿಣದ ಭಾಷೆಗಳಲ್ಲಿ ಶುರುವಾಗಿತ್ತು. ಕನ್ನಡದಲ್ಲಿ ಕಿಚ್ಚ ಸುದೀಪ್ 10 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. 11ನೇ ಸೀಸನ್ ಹೋಸ್ಟ್ ಯಾರು? ಎನ್ನುವ ಚರ್ಚೆ ನಡೀತಿದೆ. ಅತ್ತ ತಮಿಳಿನಲ್ಲಿ 7 ಸೀಸನ್ ನಿರೂಪಣೆ ಮಾಡಿದ್ದ ಕಮಲ್ ಹಾಸನ್ ಹೊರ ನಡೆದಿದ್ದಾರೆ.

ಉಳಗನಾಯಗನ್ ಬದಲು ಈ ಬಾರಿ ವಿಜಯ್ ಸೇತುಪತಿ ಬಿಗ್‌ಬಾಸ್ ಶೋ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಸಣ್ಣ ಟೀಸರ್ ಸಹ ರಿಲೀಸ್ ಆಗಿದೆ. ಅಕ್ಟೋಬರ್ 6ರಂದು ಬಿಗ್‌ಬಾಸ್ ತಮಿಳು ಸೀಸನ್ 8 ಆರಂಭವಾಗಲಿದೆ. ಎಂದಿನಂತೆ ವಿವಿಧ ಕ್ಷೇತ್ರಗಳ 16 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ. ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ಇನ್ನು ಮುಂದೆ ಬಿಗ್‌ಬಾಸ್ ಶೋ ನಿರೂಪಣೆ ಮಾಡಲ್ಲ ಎಂದು ಕಮಲ್ ಹಾಸನ್ ಹೇಳಿದ್ದರು.

Bigg Boss tamil season 8 Host Vijay sethupathi s remuneration

ಕಮಲ್ ಬಳಿಕ ಯಾರು ತಮಳು ಬಿಗ್‌ಬಾಸ್ ಶೋ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಎದ್ದಿತ್ತು. ಈ ಹಿಂದೆ ನಟ ಸಿಂಬು ಕೆಲ ದಿನ ಬಿಗ್‌ಬಾಸ್ ಓಟಿಟಿ ಸೀಸನ್ ನಡೆಸಿಕೊಟ್ಟಿದ್ದರು. ಹಾಗಾಗಿ ಅವರೇ ಸೀಸನ್ 8ರ ಸಾರಥ್ಯ ವಹಿಸುತ್ತಾರೆ ಎನ್ನಲಾಗಿತ್ತು. ಆದರೆ ಅಚ್ಚರಿ ಎನ್ನುವಂತೆ ವಿಜಯ್ ಸೇತುಪತಿ ಆಯ್ಕೆ ಆಗಿದೆ. ಮಕ್ಕಳ್ ಸೆಲ್ವನ್ ಎಂಟ್ರಿಯಿಂದ ಈ ಬಾರಿ ಶೋ ಮತ್ತಷ್ಟು ಕುತೂಹಲ ಮೂಡಿಸಿದೆ.

ಸೀಸನ್-8 ಗ್ರ್ಯಾಂಗ್ ಓಪನಿಂಗ್‌ಗೆ ತಿಂಗಳು ಬಾಕಿ ಇರುವಂತೆ ಟೀಸರ್ ಬಂದಿದೆ. ಇದೆಲ್ಲದರ ನಡುವೆ ಶೋ ನಿರೂಪಣೆಗೆ ಸೇತುಪತಿ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಚರ್ಚೆ ಆರಂಭವಾಗಿದೆ. ಚಿತ್ರವೊಂದರಲ್ಲಿ ನಟಿಸಲು ವಿಜಯ್ ಸೇತುಪತಿ 15ರಿಂದ 20 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಅಂದಾಜಿದೆ. ಇನ್ನು ಜಾಹೀರಾತುಗಳಲ್ಲಿ ಮಿಂಚಲು 1 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎನ್ನಲಾಗುತ್ತದೆ.

Bigg Boss tamil season 8 Host Vijay sethupathi s remuneration

ಬಿಗ್‌ಬಾಸ್ ಶೋ ಒಂದರ್ಥದಲ್ಲಿ ಚಿನ್ನದ ಮೊಟ್ಟೆ ಇಡುವ ಶೋ. ಒಳ್ಳೆ ಟಿಆರ್‌ಪಿ ಮಾತ್ರವಲ್ಲದೇ ಒಳ್ಳೆ ಜಾಹೀರಾತುಗಳು ಸಿಗುತ್ತವೆ. ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಕರೆಯಲಾಗುತ್ತದೆ. ಅದಕ್ಕೆ ತಕ್ಕಂತೆ ನಿರೂಪಕರ ಸಂಭಾವನೆ ಕೂಡ ಇರುತ್ತದೆ. ಈ ಹಿಂದೆ ಕಮಲ್ ಹಾಸನ್ ಭಾರೀ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಿದ್ದರು. ಆದರೆ ಸೇತುಪತಿಗೆ ಅಷ್ಟು ಸಿಗುತ್ತಿಲ್ಲ ಎನ್ನುವ ಚರ್ಚೆ ಶುರುವಾಗಿದೆ.

ಬಿಗ್‌ಬಾಸ್ ತಮಿಳು ಸೀಸನ್-8ರ ನಿರೂಪಣೆಗಾಗಿ ವಿಜಯ್ ಸೇತುಪತಿ 50 ರಿಂದ 60 ಕೋಟಿ ಸಂಬಳ ಪಡೆಯುತ್ತಿದ್ದಾರೆ ಎನ್ನುವ ಗುಸಗುಸು ಶುರುವಾಗಿದೆ. ಇದು ಕಮಲ್ ಪಡೆಯುತ್ತಿದ್ದ ಸಂಭಾವನೆಯ ಅರ್ಧದಷ್ಟು ಮಾತ್ರ ಎನ್ನುವ ಮಾತುಗಳು ಕೇಳಿಬರ್ತಿದೆ. ಹಿಂದಿನ ಸೀಸನ್‌ಗೆ ಕಮಲ್ ಬರೋಬ್ಬರಿ 120 ಕೋಟಿ ರೂ. ಸಂಭಾವನೆ ಪಡೆದಿದ್ದಾಗಿ ಹೇಳಲಾಗಿತ್ತು. ಆ ಅರ್ಥದಲ್ಲಿ ಸೇತುಪತಿಗೆ ಅರ್ಧದಷ್ಟು ಮಾತ್ರ ಸಿಗುತ್ತಿದೆ ಎನ್ನುವ ಚರ್ಚೆ ಜೋರಾಗಿದೆ.

ಸೇತುಪತಿ ಒಳ್ಳೆ ನಟ ಮಾತ್ರವಲ್ಲ ಒಳ್ಳೆ ಮಾತುಗಾರ. ಬಿಗ್‌ಬಾಸ್ ಶೋ ನಡೆಸಿಕೊಡಲು ಅವರ ಆಯ್ಕೆ ಸೂಕ್ತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಮುಂದಿನ ಸೀಸನ್‌ಗಳಿಗೂ ಮಕ್ಕಳ್ ಸೆಲ್ವನ್ ನಿರೂಪಕರಾಗಿ ಮುಂದುವರೆಯಲಿದ್ದು ಮುಂದೆ ಸಂಭಾವನೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ಸೇತುಪತಿ ನಟಿಸಿದ 'ಮಹಾರಾಜ' ಸಿನಿಮಾ ಇತ್ತೀಚೆಗೆ ಸೂಪರ್ ಹಿಟ್ ಆಗಿತ್ತು. ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಅವರ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಓಟಿಟಿಯಲ್ಲಿ ಕೂಡ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.

More from Filmibeat

English summary
Find out how many Crores vijay sethupathi is getting paid for the Bigg Boss tamil 8;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X