'ಚಂದ್ರಮುಖಿ 2' ಸೆಟ್ಟಿನಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ಪ್ರತ್ಯಕ್ಷ: ಫೋಟೊ ವೈರಲ್
ಬಾಲಿವುಡ್ ನಟಿ ಕಂಗನಾ ರನೌತ್ ತಾವೇ ನಿರ್ದೇಶಿಸಿರುವ ಸಿನಿಮಾ 'ಎಮರ್ಜೆನ್ಸಿ'ಯ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ನಟನೆಯನ್ನೂ ಮುಂದುವರೆಸಿದ್ದಾರೆ. ಒಂದ್ಕಡೆ ನಿರ್ದೇಶನ. ಇನ್ನೊಂದ್ಕಡೆ ನಟನೆ ಅಂತ ಎರಡೂ ಕಡೆನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಸದ್ಯಕ್ಕೀಗ ಬಾಲಿವುಡ್ 'ಕ್ವೀನ್' ಕಂಗನಾ ತಮ್ಮ ಇನ್ನೊಂದು ಸಿನಿಮಾ 'ಚಂದ್ರಮುಖಿ 2' ಸೆಟ್ಟಿನಲ್ಲಿ ಪ್ರತ್ಯಕ್ಷ ಆಗಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಈ ಫೋಟೊಗಳನ್ನು ಹಂಚಿಕೊಂಡಿದ್ದು,ಅವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಹಿಂದೆ ಕಂಗನಾ ರನೌತ್ 'ಚಂದ್ರಮುಖಿ 2' ಸಿನಿಮಾದ ಕ್ಲೈಮ್ಯಾಕ್ಸ್ ಸಾಂಗ್ ಅನ್ನು ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವೇಳೆ ಎಂ ಎಂ ಕೀರವಾಣಿ ಈ ಹಾಡನ್ನು ಕಂಪೋಸ್ ಮಾಡುತ್ತಿದ್ದು, ಕಲಾ ಮಾಸ್ಟರ್ ಕೊರಿಯೋಗ್ರಫಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದ ಸಂಗೀತ ನಿರ್ದೇಶಕ ಟ್ಯೂನ್ ಹಾಕಿರುವಾಗ ಆ ಹಾಡನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾದು ಕೂತಿದ್ದಾರೆ.

'ಚಂದ್ರಮುಖಿ' ಸಿನಿಮಾದಲ್ಲಿ ವರಾಹಿ ಅನ್ನೋ ಹಾಡು ಸೂಪರ್ ಹಿಟ್ ಆಗಿತ್ತು. ಈಗ ಕಂಗನಾ ರನೌತ್ ಕೂಡ ಅಷ್ಟೇ ದೊಡ್ಡ ಹಿಟ್ ಕೊಡಲಿ ಎಂದು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಸದ್ಯ 'ಚಂದ್ರಮುಖಿ 2' ಸೆಟ್ಟಿಗೆ ಎಂಟ್ರಿ ಕೊಟ್ಟಿರುವ ಕಂಗನಾ ಫೋಟೊಗಳನ್ನು ಶೇರ್ ಮಾಡಿದ ಕೂಡಲೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮತ್ತೆ 'ಚಂದ್ರಮುಖಿ'ಯನ್ನು ತೆರೆಮೇಲೆ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
'ಚಂದ್ರಮುಖಿ 2' ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಚಂದ್ರಮುಖಿ' ಸಿನಿಮಾದ ಸೀಕ್ವೆಲ್. ಈ ಸಿನಿಮಾ ತಮಿಳಿನ ನಟ ಕಮ್ ನಿರ್ದೇಶಕ ರಾಘವ ಲಾರೆನ್ಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಚಂದ್ರಮುಖಿ' ಸಿನಿಮಾವನ್ನು ನಿರ್ದೇಶಿಸಿದ್ದ ಪಿ ವಾಸು ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, 'ಇಂಡಿಯನ್ 2', 'ಎಂದಿರನ್', 2.0' ಅಂತಹ ಸಿನಿಮಾಗಳನ್ನು ನಿರ್ಮಿಸಿರೋ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡಿದೆ.

ಕಂಗನಾ ರನೌತ್ ವಿವಾದಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದರೂ, ಕೈ ತುಂಬಾ ಸಿನಿಮಾಗಳಿವೆ. ಈ ಹಿಂದೆ ತೆರೆಕಂಡ ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದವು. ಆದರೆ, ಈ ವರ್ಷ ಕಂಗನಾ ಕೈಯಲ್ಲಿ 'ಚಂದ್ರಮುಖಿ 2' ಇದೆ. ಹಾಗೇ ಅವರೇ ಇಂದಿರಾ ಗಾಂಧಿ ರೂಪವೆತ್ತಿ ನಿರ್ದೇಶಿಸಿ, ನಟಿಸಿರುವ ಸಿನಿಮಾ 'ಎಮರ್ಜೆನ್ಸಿ' ರಿಲೀಸ್‌ಗೆ ರೆಡಿಯಾಗುತ್ತಿದೆ. ಹಾಗೇ ಏರ್‌ಫೋರ್ಸ್ ಪೈಲೆಟ್ ಆಗಿ ನಟಿಸುತ್ತಿರುವ 'ತೇಜಸ್' ಇದೇ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications











