"ವಿಜಯ್-ತ್ರಿಶಾ ಮಾಡಿದ್ದು ಸರಿ.. ಪ್ರೀತಿಯನ್ನು ಪಾಪದಂತೆ ಮರೆ ಮಾಚಲಿಲ್ಲ"; ಹೊಗಳಿಕೊಂಡಾಡಿದ ನಿರ್ದೇಶಕ
ಕಳೆದ ಕೆಲವು ದಿನಗಳಿಂದ ತಮಿಳಿನ ಇಬ್ಬರು ಸ್ಟಾರ್‌ಗಳ ಹೆಸರು ಚರ್ಚೆಯಲ್ಲಿದೆ. ಅವರಲ್ಲಿ ಒಬ್ಬರು ದಳಪತಿ ವಿಜಯ್ ಹಾಗೂ ತ್ರಿಶಾ. ವಿಜಯ್ ಪತ್ನಿ ಸಂಗೀತಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಂತೆ ತಮಿಳುನಾಡಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಇದು ವಿಜಯ್ ರಾಜಕೀಯ ನಡೆಯ ಮೇಲೆ ಪರಿಣಾಮ ಬೀರಬಹುದೆಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಪತ್ನಿ ಸಂಗೀತಾ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ ಹೊರತಾಗಿಯೂ ವಿಜಯ್ ಹಾಗೂ ತ್ರಿಶಾ ಇಬ್ಬರೂ ಮದುವೆ ಸಮಾರಂಭವೊಂದರಲ್ಲಿ ಒಟ್ಟಿಗೆ ಬಂದಿದ್ದರು. ಇಲ್ಲಿಂದ ಇಬ್ಬರ ಬಗ್ಗೆ ಹಬ್ಬಿದ್ದ ಸುದ್ದಿಗಳ ಬಗ್ಗೆ ಮತ್ತಷ್ಟು ರೆಕ್ಕೆ-ಪುಕ್ಕಗಳು ಬಂದಿವೆ. ಸಂಗೀತಾ ತಮ್ಮ ವಿಚ್ಚೇದನದ ಅರ್ಜಿಯಲ್ಲಿ ಹೇಳಿರುವ ನಟಿ ಇವರೇನಾ ಅನ್ನೋ ಪ್ರಶ್ನೆ ತಮಿಳುನಾಡಿನ ಜನರನ್ನು ಕಾಡುತ್ತಿದೆ.

ವಿಚ್ಚೇದನದ ಸುದ್ದಿ ತಮಿಳುನಾಡಿನಲ್ಲಿ ಹಲ್‌ಚಲ್ ಎಬ್ಬಿಸಿದ ಹೊರತಾಗಿಯೂ ವಿಜಯ್ ಹಾಗೂ ತ್ರಿಶಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ಹಲವು ವಿರೋಧಿಸಿದ್ದಾರೆ. ಕೆಲವರಂತೂ ಬಹಿರಂಗವಾಗಿಯೇ ಟೀಕೆಗಳನ್ನು ಮಾಡಿದ್ದೂ ಇದೆ. ಆದರೆ, ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ವಿಕ್ರಮ್ ಭಟ್ ಇಬ್ಬರನ್ನೂ ಬೆಂಬಲಿಸಿ ನೀಡಿರುವ ಹೇಳಿಕೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅವರು ಏನು ಹೇಳಿದ್ದಾರೆಂದು ನೋಡುವುದಾರೇ,
ಇವರಿಬ್ಬರೂ ತಮಿಳು ಚಿತ್ರರಂಗದ ದಿಗ್ಗಜರ ಕೆಂಗಣ್ಣಿಗೆ ಗುರಿಯಾಗಿದ್ದರೂ, ವಿಜಯ್ ಜೊತೆ ತ್ರಿಶಾ ಕ್ಯಾರೇ ಅಂದಿರಲಿಲ್ಲ. ಮದುವೆ ಸಮಾರಂಭಕ್ಕೆ ಇಬ್ಬರೂ ಒಟ್ಟಿಗೆ ಬಂದಿಷ್ಟೇ ಅಲ್ಲ. ಒಂದೇ ಬಣ್ಣದ ಉಡುಗೆಯಲ್ಲಿ ಖುಷಿ ಖುಷಿಯಾಗಿ ಎಂಟ್ರಿ ಕೊಟ್ಟಿದ್ದು ಕೆಲವರ ಕೆಂಪಗಾಗಲು ಕಾರಣ. ಇದು ಮೊದಲೇ ಬುಗಿಲೆದ್ದಿದ್ದ ವಿವಾದಕ್ಕೆ ತುಪ್ಪ ಸುರಿದಂತೆ ಆಗಿದೆ. ಇಂತಹ ಸಂದರ್ಭದಲ್ಲಿ ವಿಜಯ್ ಹಾಗೂ ತ್ರಿಶಾ ಇಬ್ಬರ ಬೆಂಬಲಕ್ಕೆ ಬಾಲಿವುಡ್ ನಟ ವಿಕ್ರಮ್ ಭಟ್ ನಿಂತಿದ್ದಾರೆ.
"ವಿಜಯ್ ಹಾಗೂ ತ್ರಿಶಾ ಇಬ್ಬರನ್ನೂ ನಾನು ಪ್ರಶಂಸೆ ಮಾಡುವುದಕ್ಕೂ ಒಂದು ಕಾರಣವಿದೆ. ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದು ನಟಿಸದೆ ಇರುವುದು ಒಂದು ರೀತಿಯ ಘನತೆ. ಪ್ರೀತಿಯನ್ನು ಪಾಪದಂತೆ ಮರೆ ಮಾಚಲಿಲ್ಲ. ಈ ನಡೆಯೂ ಕೂಡ ಒಂದು ಘನತೆಯೇ ಸರಿ. ವಿಜಯ್-ತ್ರಿಶಾ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿಗಳೇ.. ಇಲ್ಲ ಸತ್ಯವೇ? ಸುಳ್ಳೆ? ಎಂಬುದು ನನಗೆ ಗೊತ್ತಿಲ್ಲ" ಎಂದು ಬಾಲಿವುಡ್ ನಿರ್ದೇಶಕ ವಿಕ್ರಮ್ ಭಟ್ ಅಭಿಪ್ರಾಯ ಪಟ್ಟಿದ್ದಾರೆ.

ಹಾಗೇ "ಇಬ್ಬರು ಸಂಬಂಧದಲ್ಲಿದ್ದಾಗ ಆ ಸಂಬಂಧ ಮುಂದುವರಿಯಬೇಕು ಎಂದು ಸಮಾಜವು ಒತ್ತಾಯಿಸುತ್ತೆ. ಅದೂ ಕೂಡ ಒಂದು ರೀತಿಯ ಬಂಧನವೇ. ನಾವೆಲ್ಲರೂ ಯಾವಾಗಲೂ ಮಾನವ ಸ್ವಾತಂತ್ರ್ಯವನ್ನು ಬೆಂಬಲಿಸಬೇಕು. ಪ್ರೀತಿಸಲು ಮತ್ತು ಜೀವಿಸಲು ಅವರಿಗೆ ಎಲ್ಲಾ ಹಕ್ಕುಗಳೂ ಇವೆ" ಎಂದು ವಿಕ್ರಮ್ ಭಟ್ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
ತಮ್ಮ ಇತ್ತೀಚೆಗೆ ಜೈಲಿಗೆ ಹೋಗಿ ಬಂದಿದ್ದರ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. "ಬಾರದೇ ಇರದ ಚಹಾಗಾಗಿ ಕಾಯೋದು, ಟೂತ್‌ಪೇಸ್ಟ್‌ಗಾಗಿ ಹೋರಾಡೋದು, ಸಂಜೆ ಏಳು ಗಂಟೆಯೊಳಗೆ ಜಾಮೀನು ಅರ್ಜಿಗಾಗಿ ಕಾಯುತ್ತಿದ್ದ ಕ್ಷಣಗಳು ಸ್ವಾತಂತ್ರ್ಯದ ಮೌಲ್ಯವನ್ನು ಮನವರಿಕೆ ಮಾಡಿಕೊಟ್ಟಿವೆ. ನಾನೊಬ್ಬ ಮೂರ್ಖನಾಗಿದ್ದೆ. ಅಲ್ಲದೆ ನನ್ನನ್ನು ಮೂರ್ಖರನ್ನಾಗಿ ಮಾಡಿದ್ದರು." ಎಂದು ವಿಕ್ರಮ್ ಭಟ್ ಹೇಳಿದ್ದಾರೆ.


Click it and Unblock the Notifications















