ಅಣ್ಣನಂತೆ ಧನುಷ್.. ತಂಗಿಯಂತೆ ಐಶ್ವರ್ಯಾ; ಡಿವೋರ್ಸ್ ಮಂಜೂರು ಬೆನ್ನಲ್ಲೇ 2ನೇ ಮದುವೆ ಸಜ್ಜು?

ಚೆನ್ನೈ; ರಜನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಷ್ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಕಾನೂನುಬದ್ಧವಾಗಿ ವಿಚ್ಛೇದನವನ್ನು ಪಡೆದಿದ್ದಾರೆ. ಫ್ಯಾಮಿಲಿ ಕೋರ್ಟ್ ಈ ಜೋಡಿ ಡಿವೋರ್ಸ್ ಮಂಜೂರು ಮಾಡಿದೆ. ಇಬ್ಬರೂ ಮತ್ತೆ ಒಂದಾಗುತ್ತಾರೆ ಅಂತ ಆಗಾಗ ಸುದ್ದಿಗಳು ಬರುತ್ತಿದ್ದರಿಂದ ಅಭಿಮಾನಿಗಳು ಭರವಸೆಯನ್ನು ಇಟ್ಟಿಕೊಂಡಿದ್ದರು. ಅದೆಲ್ಲವೂ ಈಗ ಹುಸಿಯಾಗಿದೆ.

ಧನುಷ್ ಜಾಗೂ ಐಶ್ವರ್ಯಾ ಧನುಷ್ ಇಬ್ಬರೂ ಮೊದಲ ಎರಡು ವಿಚಾರಣೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಇಬ್ಬರೂ ಮತ್ತೆ ವೈಮನಸ್ಸನ್ನು ಪಕ್ಕಕ್ಕೆ ಇಟ್ಟು ಮತ್ತೆ ಒಂದಾಗಬಹುದು. ಹೊಸದಾಗಿ ಖರೀದಿ ಆಳ್ವಾರಪೇಟೆಯಲ್ಲಿ ಖರೀದಿ ಮಾಡಿದ್ದ ಮನೆಯಲ್ಲಿ ಇಬ್ಬರೂ ನೆಲೆಸುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದರೆ, ಆ ನಿರೀಕ್ಷೆಗಳೆಲ್ಲ ತಲೆಕೆಳಗಾಗಿದ್ದವು.

Buzz is that after officialy got divorce Dhanush Aishwarya will get second marriage

ಅಧಿಕೃತವಾಗಿ ವಿಚ್ಛೇದನ ಪಡೆದ ಮೇಲೆ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಇಬ್ಬರೂ ಎರಡನೇ ಮದುವೆ ಆಗುತ್ತಾರೆ ಅನ್ನೋ ಮಾತುಗಳು ಹರಿದಾಡುವುದಕ್ಕೆ ಶುರು ಮಾಡಿದೆ. ಅಣ್ಣನ ಹಾದಿಯನ್ನೇ ಧನುಷ್ ಹಿಡಿಯಲಿದ್ದಾರೆ ಎಂದೂ, ತಂಗಿಯ ಹಾದಿಯಲ್ಲಿ ಐಶ್ವರ್ಯಾ ಸಾಗುತ್ತಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಓಡಾಡುತ್ತಿದೆ. ಇಷ್ಟೇ ಅಲ್ಲ ಯಾರು ಯಾರನ್ನು ಮದುವೆ ಆಗುತ್ತಾರೆ ಅಂತನೂ ಸುದ್ದಿ ಹಬ್ಬಿದೆ. ಅಷ್ಟಕ್ಕೂ ಇವರಿಬ್ಬರೂ ಎರಡನೇ ಮದುವೆ ಆಗುತ್ತಾರಾ?

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಧನುಷ್ ಕುಟುಂಬದಲ್ಲಿ ಸರಣಿ ವಿಚ್ಛೇದನಗಳು ನಡೆಯತ್ತಲೇ ಇವೆ. ರಜನಿ ಕಿರಿಯ ಪುತ್ರಿ ಸೌಂದರ್ಯಾ ಮೊದಲ ಮದುವೆಯಿಂದ ವಿಚ್ಛೇದನ ಪಡೆದು ಎರಡನೇ ಮದುವೆ ಆಗಿದ್ದರು. ಅದೇ ರೀತಿ ಧನುಷ್ ಅಣ್ಣ ಸೆಲ್ವರಾಘವನ್ ಕೂಡ ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟು ಎರಡನೇ ಮದುವೆ ಆಗಿದ್ದಾರೆ. ಇವರು ಕೂಡ ಅವರದ್ದೇ ಹಾದಿ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಧನುಷ್ ಅವರ ತಂದೆ ಕಸ್ತೂರಿ ರಾಜ ಮಗನಿಗೆ ಎರಡನೇ ಮದುವೆ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಡಿವೋರ್ಸ್ ಸಿಗುತ್ತಿದ್ದಂತೆ ಧನುಷ್ ಮೊದಲ ವಿವಾಹ ಬಂಧನದಿಂದ ಹೊರಬಂದಿದ್ದಾರೆ. ಈ ಕಾರಣಕ್ಕೆ ಮೊದಲ ಪುತ್ರ ಸೆಲ್ವರಾಘವನ್ ಅಂತೆಯೇ ಧನುಷ್‌ಗೆ ಎರಡನೇ ಮದುವೆ ಮಾಡಿಸುವುದಕ್ಕೆ ತಂದೆ ಕಸ್ತೂರಿ ರಾಜ ಮುಂದಾಗಿದ್ದು, ಕೆಲವೇ ದಿನಗಳಲ್ಲಿ ತಮ್ಮ ಸಂಬಂಧಿಯೊಬ್ಬರನ್ನು ಧನುಷ್ ವಿವಾಹವಾಗಲಿದ್ದಾರೆ ಅನ್ನೋ ಮಾತುಗಳು ಹೇಳಿ ಬರುತ್ತಿದೆ.

Buzz is that after officialy got divorce Dhanush Aishwarya will get second marriage

ಇತ್ತ ರಜನಿಕಾಂತ್ ಕೂಡ ಹಿರಿಯ ಮಗಳ ಭವಿಷ್ಯದ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಕಿರಿಯ ಪುತ್ರಿ ಸೌಂದರ್ಯ ಡಿವೋರ್ಸ್‌ ಮುಂದಾದಾ ಮಗಳಿಗೆ ಎರಡನೇ ಮದುವೆ ಮಾಡಿಸಿ ನೆಲೆ ಸೇರಿಸಿದ್ದರು. ಈಗ ಕಿರಿಯ ಮಗಳು ನೆಮ್ಮದಿಯಾಗಿ ಸಂಸಾರ ಮಾಡಿಕೊಂಡು ಇದ್ದಾರೆ. ಹಾಗೇ ಹಿರಿಯ ಮಗಳು ಐಶ್ವರ್ಯಾಳಿಗೂ ಎರಡನೇ ಮದುವೆ ಮಾಡಿಸಬೇಕು ಎಂಬ ಆಲೋಚನೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಆದರೆ, ಐಶ್ವರ್ಯಾ ಹಾಗೂ ಧನುಷ್‌ಗೆ ಅವರಷ್ಟೇ ಎತ್ತರಕ್ಕೆ ಬೆಳೆದ ಇಬ್ಬರು ಗಂಡು ಮಕ್ಕಳಿದ್ದಾರೆ. ಹೀಗಾಗಿ ಈ ಬಗ್ಗೆ ಇಬ್ಬರ ಮುಂದಿನ ನಿರ್ಧಾರ ಏನು? ಅನ್ನೋದು ಶೀಘ್ರದಲ್ಲಿಯೇ ಹೊರಬೀಳಬಹುದು. ಆದರೆ, ಇಬ್ಬರೂ ಎರಡನೇ ಮದುವೆಗೆ ಮನಸ್ಸು ಮಾಡಿದ್ದಾರೆಂಬ ಸುದ್ದಿಗಳು ತಮಿಳು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಹರಿದಾಡುತ್ತಿರುವ ಸುದ್ದಿ ಸುಳ್ಳಾ ಅಥವಾ ನಿಜನಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Buzz is that after officially getting divorced, Dhanush and Aishwarya will get a second marriage;
Read more about: dhanush aishwarya filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X