ರಜನಿಕಾಂತ್ 171ನೇ ಚಿತ್ರ ಈ ಹಾಲಿವುಡ್ ಸಿನಿಮಾ ರಿಮೇಕ್? ಏನಿದು ಸುದ್ದಿ?

ಸೂಪರ್‌ಸ್ಟಾರ್ ರಜನಿಕಾಂತ್ ಒಂದ್ಕಡೆ. ಲೋಕೇಶ್ ಕನಕರಾಜ್ ಇನ್ನೊಂದು ಕಡೆ. ಒಬ್ಬರು ಲೆಜೆಂಡ್. ಇನ್ನೊಬ್ಬರು ಟ್ಯಾಲೆಂಟೆಡ್. ಹೀಗಿರುವಾಗ ಇಬ್ಬರೂ ಒಟ್ಟಿಗೆ ಸೇರಿದರೆ ಆ ಸಿನಿಮಾ ಹೇಗಿರಬಹುದು ಅನ್ನೋ ನಿರೀಕ್ಷೆ ಸಹಜವಾಗಿ ಇದ್ದೇ ಇರುತ್ತೆ. ಸದ್ಯ ಈ ಕಾಂಬಿನೇಷನ್‌ನಲ್ಲಿ 171ನೇ ಸಿನಿಮಾ ಸೆಟ್ಟೇರುತ್ತಿರುವ ಸಂಗತಿ ಗೊತ್ತೇ ಇದೆ.

ಇದೇ ರಜನಿ ಹಾಗೂ ಲೋಕೇಶ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ 171ನೇ ಸಿನಿಮಾ ಬಗ್ಗೆ ತಮಿಳು ಚಿತ್ರರಂಗದಲ್ಲಿ ಸುದ್ದಿಯೊಂದು ಓಡಾಡುತ್ತಿದೆ. ಲೋಕೇಶ್ ಕನಕರಾಜ್ 2013ರಲ್ಲಿ ತೆರೆಕಂಡ ಹಾಲಿವುಡ್ ಸಿನಿಮಾವೊಂದನ್ನು ಸ್ಪೂರ್ತಿಯಾಗಿಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಇದು ಆ ಹಾಲಿವುಡ್ ಸಿನಿಮಾದ ರಿಮೇಕ್ ಎಂಬ ಸುದ್ದಿ ಹಬ್ಬಿದೆ.

Rajinikanth 171 movie Hollywood remake

ಲೋಕೇಶ್ ಕನಕರಾಜ್ ತಮ್ಮ ಸಿನಿಮಾಗಳಲ್ಲಿ ಆಕ್ಷನ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಹಾಗೇ ಹಿಂಸೆ, ಡ್ರಗ್ಸ್ ಹಿನ್ನೆಲೆಯನ್ನಿಟ್ಟುಕೊಂಡು ಕಥೆಯನ್ನು ಹೆಣೆಯುತ್ತಾರೆ. ಈ ಹಿಂದೆ ಅವರು ನಿರ್ದೇಶಿಸಿದ ಸಿನಿಮಾಗಳಲ್ಲಿ ಈ ಅಂಶಗಳು ಎದ್ದು ಕಾಣುತ್ತವೆ. ರಜನಿಗೆ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಕೂಡ ಹಾಲಿವುಡ್ ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ. ಹಾಗಿದ್ದರೆ, ಆ ಸಿನಿಮಾ ಯಾವುದು?

ಲೋಕೇಶ್ ಕನಕರಾಜ್ ಸದ್ಯಕ್ಕೆ ರಜನಿಯ ಫಸ್ಟ್ ಲುಕ್ ಅನ್ನಷ್ಟೇ ರಿಲೀಸ್ ಮಾಡಿದ್ದಾರೆ. ಸೂಪರ್‌ಸ್ಟಾರ್ ಲುಕ್ ನೋಡಿ ಇದು ಟೈಮ್ ಟ್ರಾವೆಲ್ ಬೇಸ್ ಮಾಡಿದ ಸಿನಿಮಾ ಇರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಲೋಕೇಶ್ ಕನಕರಾಜ್ ಹಾಲಿವುಡ್ ಸಿನಿಮಾದ ರೀಮೆಕ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿದ್ದು, ಅದಕ್ಕೆ ಏಪ್ರಿಲ್ 22ರಂದು ರಿಲೀಸ್ ಆಗುತ್ತಿರುವ ಟ್ರೈಟಲ್ ಪ್ರೋಮೊ ಸುಳಿವು ನೀಡಬಹುದು.

ಸದ್ಯ ಕಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಏನಂದ್ರೆ? ಲೋಕೇಶ್ ಕನಕರಾಜ್ 2013ರಲ್ಲಿ ರಿಲೀಸ್ ಆಗಿದ್ದ 'ದಿ ಪರ್ಜ್' (the purge) ಸಿನಿಮಾ ರಿಮೇಕ್ ಎಂದು ಸುದ್ದಿ ಹಬ್ಬಿಸಿದ್ದಾರೆ. ಇದು ಅಮೆರಿಕನ್ ಕ್ರೈಂ ಹಾರರ್ ಸಿನಿಮಾ. 2013ರಿಂದ ಇಲ್ಲಿವರೆಗೂ ಸುಮಾರು 5 ಪಾರ್ಟ್‌ಗಳು ರಿಲೀಸ್ ಆಗಿವೆ. 2021ರಲ್ಲಿ ಐದನೇ ಪಾರ್ಟ್ ' ದಿ ಫಾರ್‌ಎವರ್ ಪರ್ಜ್' ರಿಲೀಸ್ ಆಗಿತ್ತು. ಆ ಸಿನಿಮಾ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಉತ್ತಮ ಕಲೆಕ್ಷನ್ ಮಾಡಿತ್ತು.

ಈಗ ಲೋಕೇಶ್ ಕನಕರಾಜ್ ಅದೇ ಸಿನಿಮಾವನ್ನು ರೀಮೇಕ್ ಮಾಡುತ್ತಿದ್ದಾರೆ ಅನ್ನೋದು ಸುದ್ದಿ. ಸದ್ಯ ಈ ಬಗ್ಗೆ ನಿರ್ಮಾಣ ಸಂಸ್ಥೆಯಾಗಲಿ, ನಿರ್ದೇಶಕ ಲೋಕೇಶ್ ಕನಕರಾಜ್ ಆಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಹೀಗಾಗಿ ಈ ಸಿನಿಮಾ ಹಾಲಿವುಡ್‌ ಚಿತ್ರದ ರೀಮೇಕ್ ಹೌದಾ ಅಲ್ವಾ? ಅನ್ನೋದನ್ನೂ ಹೇಳುವುದಕ್ಕೆ ಆಗುವುದಿಲ್ಲ.

More from Filmibeat

English summary
Buzz is that Rajinikanth 171st movie is linked with Hollywood film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X