ತಿರುಚಿಯಿಂದ ತ್ರಿಶಾ ಸ್ಪರ್ಧೆ? ಗೆದ್ಮೇಲೆ ಮಂತ್ರಿ ಸ್ಥಾನ? ವಿಜಯ್ ಮಾಸ್ಟರ್‌ಪ್ಲಾನ್‌ ಸ್ಟ್ಯಾಲಿನ್ ಮಾಸ್ಟರ್ ಸ್ಟ್ರೋಕ್?

ತಮಿಳುನಾಡಿನಲ್ಲಿ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಒಂದ್ಕಡೆ ತಣ್ಣಗಾಗಿದ್ದ ತಮಿಳು ಚಿತ್ರರಂಗಕ್ಕೆ 'ಕರುಪ್ಪು' ಸಿನಿಮಾ ಹೊಸ ಹುರುಪು ಕೊಟ್ಟಿದೆ. ಈ ಸಿನಿಮಾಗೆ ತ್ರಿಶಾ ನಾಯಕಿ ಅನ್ನೋದು ವಿಶೇಷ. ಇನ್ನೊಂದು ಕಡೆ ರಾಜಕೀಯ ಕ್ಷೇತ್ರದಲ್ಲಿ ದಳಪತಿ ವಿಜಯ್ ಮಿಂಚುತ್ತಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ತಮಿಳುನಾಡಿನ ಸಿಎಂ ಆಗಿ ಅಧಿಕಾರ ನಡೆಸುತ್ತಿದ್ದಾರೆ.

ಇದೇನೆ ಇದ್ದರೂ, ರಾಜಕೀಯ ಇರಲಿ, ಸಿನಿಮಾನೇ ಇರಲಿ ಅಲ್ಲಿ ತ್ರಿಶಾ ಹವಾ ಅಂತೂ ನಡೆಯುತ್ತಿದೆ. ಒಂದ್ಕಡೆ ತ್ರಿಶಾ ನಟನೆಯ 'ಕರುಪ್ಪು' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಇತ್ತ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ವಿಜಯ್ ಸಿಎಂ ಆದ ದಿನದಿಂದಲೂ ತ್ರಿಶಾ ರಾಜಕೀಯ ಪ್ರವೇಶದ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇವೆ.

Buzz is that Vijay s plan is Trisha to contest election from Trichy and give her political cabinet

ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಿಗೆ ಭಾರೀ ಹಿನ್ನಡೆಯಾಗಿದೆ. ಡಿಎಂಕೆ ಹಾಗೂ ಎಐಡಿಎಂಕೆ ಎರಡೂ ಪಕ್ಷಗಳೂ ಈ ಬಾರಿ ಸೋತು ಸುಣ್ಣವಾಗಿವೆ. ಈ ಎರಡೂ ಪಕ್ಷಗಳಿಗೂ ವಿಜಯ್ ಚಮಕ್ ಕೊಟ್ಟು ಮೊದಲ ಪ್ರಯತ್ನದಲ್ಲಿಯೇ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಟಿವಿಕೆ ಪಕ್ಷದ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಇದು ತಮಿಳುನಾಡಿನ ಮೊದಲ ಸಮ್ಮಿಶ್ರ ಸರ್ಕಾರ. ಈ ಮಧ್ಯೆ ತ್ರಿಶಾರನ್ನು ರಾಜಕೀಯಕ್ಕೆ ಕರೆದುಕೊಂಡು ಬರುವುದಕ್ಕೆ ವಿಜಯ್ ಮಾಸ್ಟರ್ ಪ್ಲಾನ್ ಮಾಡಿರುವ ಬಗ್ಗೆ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ವಿಜಯ್ ಮಾಸ್ಟರ್ ಪ್ಲಾನ್‌ಗೆ ಮಾಜಿ ಸಿಎಂ ಎಂಕೆ ಸ್ಟಾಲಿನ್ ಮಾಸ್ಟರ್ ಸ್ಟ್ರೋಕ್ ಕೊಡ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ತ್ರಿಶಾಗೆ ಬಂಪರ್ ಆಫರ್?

ದಳಪತಿ ವಿಜಯ್ ಸಿಎಂ ಆದ್ಮೇಲೆ ಒಂದೊಂದೇ ಕೆಲಸಗಳನ್ನು ಕೈಗೆತ್ತಿಕೊಳ್ತಿದ್ದಾರೆ. ತಮಿಳುನಾಡಿನ ಹೊಸ ಸಿಎಂ ಹೇಗೆ ಆಡಳಿತ ನಡೆಸಬಹುದೆಂದು ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಇನ್ನೊಂದು ಕಡೆ ವಿಜಯ್ ಅಷ್ಟೇ ಸ್ಟ್ರಾಂಗ್ ಆಗಿ ಅಲ್ಲಿನ ರಾಜಕೀಯದಲ್ಲಿ ತ್ರಿಶಾ ಹೆಸರು ಕೇಳಿಬರುತ್ತಿದೆ. ಅಧಿಕೃತವಾಗಿ ತ್ರಿಶಾರನ್ನು ಟಿವಿಕೆ ಪಕ್ಷಕ್ಕೆ ಸೇರಿಕೊಂಡು ಚುನಾವಣಾ ಅಖಾಡಕ್ಕೆ ಇಳಿಸುವುದಕ್ಕೆ ವಿಜಯ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

Also Read
ವಿಜಯ್ ಬದಲು ಕಮಲ್ ಹಾಸನ್ ಸಿಎಂ ಆಗಿದ್ರೆ ನನಗೆ ಅಸೂಯೆ ಆಗ್ತಿತ್ತು; ರಜನಿಕಾಂತ್
ವಿಜಯ್ ಬದಲು ಕಮಲ್ ಹಾಸನ್ ಸಿಎಂ ಆಗಿದ್ರೆ ನನಗೆ ಅಸೂಯೆ ಆಗ್ತಿತ್ತು; ರಜನಿಕಾಂತ್

ವಿಜಯ್ ಮಾಸ್ಟರ್ ಪ್ಲಾನ್ ಏನು?

ತ್ರಿಶಾರನ್ನು ಟಿವಿಕೆಗೆ ಸೇರಿಸಿಕೊಳ್ಳುವುದಕ್ಕೆ ವಿಜಯ್ ಮಾಸ್ಟರ್ ಪ್ಲಾನ್ ಮಾಡಿರೋ ಬಗ್ಗೆ ಗುಸು ಗುಸು ಶುರುವಾಗಿದೆ. ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿರುವಂತೆ ಆ ಪ್ಲಾನ್‌ಗಳು ಹೇಗಿವೆ ಅಂದರೆ..

ತಿರುಚಿ ಕ್ಷೇತ್ರದಿಂದ ಸ್ಪರ್ಧೆ: ವಿಜಯ್ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆ ಎರಡು ಸ್ಥಾನಗಳಲ್ಲಿ ತಿರುಚಿ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಅದರಿಂದ ತೆರವಾದ ಕ್ಷೇತ್ರಕ್ಕೆ ತ್ರಿಶಾ ಅವರನ್ನು ಟಿವಿಕೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಕ್ಕೆ ಮುಂದಾಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಸಚಿವ ಸಂಪುಟದಲ್ಲಿ ಸ್ಥಾನ: ಒಂದು ವೇಳೆ ತ್ರಿಶಾ ಏನಾದರೂ ತಿರುಚಿ ಕ್ಷೇತ್ರದಿಂದ ಗೆದ್ದರೆ, ಅವರನ್ನು ತಮ್ಮ ಸಚಿವ ಸಂಪುಟ ಸೇರಿಸಿಕೊಂಡು ಮಂತ್ರಿ ಸ್ಥಾನ ನೀಡುವ ಆಲೋಚನೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

Buzz is that Vijay s plan is Trisha to contest election from Trichy and give her political cabinet

ಎಂ ಕೆ ಸ್ಟಾಲಿನ್ ಮಾಸ್ಟರ್ ಸ್ಟ್ರೋಕ್?

ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ತಂತ್ರಗಾರಿಕೆಯನ್ನು ಆರಂಭಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಖತ್ ಮಾಸ್ಟರ್ ಪ್ಲಾನ್ ಮಾಡಿದ್ದರು. ಈಗ ತ್ರಿಶಾರನ್ನು ರಾಜಕೀಯಕ್ಕೆ ಎಂಟ್ರಿ ಕೊಡಿಸುವುದಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆದರೆ, ವಿಜಯ್ ಮಾಸ್ಟರ್ ಪ್ಲಾನ್‌ಗೆ ಮಾಜಿ ಸಿಎಂ ಎಂಕೆ ಸ್ಟಾಲಿನ್ ಮಾಸ್ಟರ್ ಸ್ಟ್ರೋಕ್ ಕೊಡೋಕೆ ಸಜ್ಜಾಗಿದ್ದಾರಂತೆ.

ತನ್ನ ಸ್ವಂತ ಕ್ಷೇತ್ರದಿಂದಲೇ ಸೊಲು ಕಂಡಿದ್ದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ಗೆ ಅವಮಾನ ಆಗಿದೆ. ಅಲ್ಲದೇ ವಿರೋಧ ಪಕ್ಷ ಸ್ಥಾನದಲ್ಲೂ ಕೂರುವುದಕ್ಕೆ ಆಗುತ್ತಿಲ್ಲ. ಹೀಗಾಗಿ ತಿರುಚಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲ್ಲುವುದಕ್ಕೆ ಯೋಚಿಸುತ್ತಿದ್ದಾರಂತೆ. ಮತ್ತೆ ಗೆದ್ದು ವಿಧಾನ ಸೌಧ ಪ್ರವೇಶ ಮಾಡುವುದಕ್ಕೆ ನಿರ್ಧರಿಸಿದ್ದಾರೆ ಅನ್ನೋದು ಸುದ್ದಿ. ಹಾಗೇನಾದರೂ ಆದರೆ, ಸದನದಲ್ಲಿ ವಿಜಯ್‌ಗೆ ಪ್ರಶ್ನೆಗಳ ಸುರಿಮಳೆ ಬೀಳೋದು ಗ್ಯಾರಂಟಿ.

ಇತ್ತ ತ್ರಿಶಾ ಏನಾದರೂ ಸ್ಪರ್ಧೆ ಮಾಡಿದರೆ ತಮಿಳುನಾಡಿನಲ್ಲಿ ಹೈ-ವೋಲ್ಟೇಜ್ ಕಾಂಪಿಟೇಷನ್‌ ನೋಡುವುದಕ್ಕೆ ಸಿಗುತ್ತೆ. ತಿರುಚಿಯಲ್ಲಿ ತ್ರಿಶಾ ವರ್ಸಸ್ ಎಂ ಕೆ ಸ್ಟಾಲಿನ್ ಆಗೋದು ಗ್ಯಾರಂಟಿ. ಒಂದು ವೇಳೆ ತಿರುಚಿಯಲ್ಲೂ ಸೋತರೆ, ಎಂ.ಕೆ ಸ್ಟಾಲಿನ್‌ಗೆ ಮತ್ತೂ ಅವಮಾನ ಆಗೋದು ಗ್ಯಾರಂಟಿ. ಇದೆಲ್ಲ ತಮಿಳುನಾಡು ರಾಜಕೀಯವಲಯದಲ್ಲಿ ಆಗುತ್ತಿರೋ ಚರ್ಚೆ. ಇದೆಲ್ಲ ನಿಜ ಆಗುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

English summary
Buzz is that Vijay's plan is Trisha to contest election from Trichy and give her political cabinet.
Read more about: vijay trisha politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X