ತಿರುಪತಿಗೆ ಮುಡಿ ಕೊಟ್ಟ ಧನುಷ್.. ಫೋಟೊ ವೈರಲ್: 50ನೇ ಸಿನಿಮಾದ ಗೆಟಪ್ ಇದೇನಾ?

ತಮಿಳಿನ ಸ್ಟಾರ್ ನಟ ಧನುಷ್ ತಿರುಪತಿಗೆ ಭೇಟಿ ಕೊಟ್ಟಿದ್ದಾರೆ. ತಮ್ಮ ಮಕ್ಕಳೊಂದಿಗೆ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇದೇ ವೇಳೆ ಧನುಷ್ ಮುಡಿಕೊಟ್ಟು ಬಂದಿದ್ದಾರೆ. ದೇವರ ದರ್ಶನ ಪಡೆದ ಬಳಿಕ ಧನುಷ್ ಗೆಟಪ್ ನೋಡಿ ಅಭಿಮಾನಿಗಳಲ್ಲಿ ಅನುಮಾನ ಮೂಡುವುದಕ್ಕೆ ಶುರುವಾಗಿದೆ.

ಧನುಷ್ ತಮ್ಮ ಕುಟುಂಬದೊಂದಿಗೆ ತಿರುಪತಿಗೆ ಭೇಟಿ ನೀಡಿದ್ದರು. ತಮ್ಮ ಇಬ್ಬರು ಗಂಡು ಮಕ್ಕಳು ಯಾತ್ರ ಹಾಗೂ ಲಿಂಗ ಹಾಗೇ ತಂದೆ ಕಸ್ತೂರಿ ರಾಜ, ತಾಯಿ ವಿಜಯಲಕ್ಷ್ಮಿ ಕೂಡ ಜೊತೆಯಲ್ಲಿ ಇದ್ದರು. ಈ ವೇಳೆ ಧನುಷ್ ಮುಡಿ ಕೊಟ್ಟಿರೋ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Dhanush- Tirupati Temple-D50

ಕ್ಯಾಪ್ಟನ್ ಮಿಲ್ಲರ್ ನಟನ ಈ ಹೊಸ ಗೆಟಪ್ ನೋಡಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. 50ನೇ ಸಿನಿಮಾದ ತಯಾರಿಯಲ್ಲಿರುವ ಧನುಷ್ ಈಗ ಮುಡಿಕೊಟ್ಟು ಸಿನಿಮಾ ಮಾಡಲು ಸಾಧ್ಯವೇ? ಇದೇ 50ನೇ ಸಿನಿಮಾದ ಗೆಟಪ್ ಇರಬಹುದಾ? ಅಂತಾನೂ ತಲೆ ಕೆಡಿಸಿಕೊಂಡಿದ್ದಾರೆ.

ಧನುಷ್ 50ನೇ ಸಿನಿಮಾ ಗೆಟಪ್ ಇದೇನಾ?

ಧನುಷ್ ಮುಡಿ ಕೊಟ್ಟಿರುವ ಫೋಟೊಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರೋ ಧನುಷ್ ಮುಂದಿನ ಸಿನಿಮಾದಲ್ಲಿ ಇದೇ ಗೆಟಪ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಂದಾಜು ಮಾಡುತ್ತಿದ್ದಾರೆ.

Dhanush- Tirupati Temple-D50

ಇಷ್ಟು ದಿನ ಉದ್ದೂದ ಗಡ್ಡ ಬಿಟ್ಟು ರಗಡ್ ಆಗಿ ಕಾಣಿಸಿಕೊಂಡಿದ್ದ ಧನುಷ್ ದಿಢೀರನೇ ಈ ಲುಕ್ ಕೊಟ್ಟಿದ್ದಾರೆ. ಇದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈಗ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, 50ನೇ ಸಿನಿಮಾಗೂ ಅಣಿಯಾಗುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

'ಕ್ಯಾಪ್ಟನ್ ಮಿಲ್ಲರ್'ನಲ್ಲಿ ಬ್ಯುಸಿ

ಧನುಷ್ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದಲ್ಲಿ ನಟಿಸುತ್ತಿದ್ದೂ, ಕಳೆದ ಕೆಲವು ತಿಂಗಳುಗಳಿಂದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಗಡ್ಡ ಬಿಟ್ಟು ರಗಡ್ ಲುಕ್‌ನಲ್ಲೇ ಓಡಾಡುತ್ತಿದ್ದರು. ಈ ಲುಕ್ ಕೂಡ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಈಗ ಮುಡಿ ಕೊಟ್ಟಿದ್ದರಿಂದ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಶೂಟಿಂಗ್ ಕೂಡ ಮುಗಿದಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಇತ್ತೀಚೆಗಷ್ಟೇ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿತ್ತು. 1930ರ ಬ್ಯಾಕ್ ಡ್ರಾಪ್‌ನಲ್ಲಿ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಧನುಷ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

'ಕ್ಯಾಪ್ಟನ್ ಮಿಲ್ಲರ್' ಸಿನಿಮಾದಲ್ಲಿ ಶಿವಣ್ಣ

ಧನುಷ್ ಉಳಿದ ಸಿನಿಮಾಗಳಂತೆ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಪೋಸ್ಟರ್ ಕುತೂಹಲ ಕೆರಳಿಸಿದೆ. ಸ್ವತಂತ್ರ ಪೂರ್ವದ ಕಥೆಯಾಗಿದ್ದರಿಂದ ಸಿನಿಮಾವನ್ನು ನೋಡಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಸಿನಿಮಾವನ್ನು ಕನ್ನಡಿಗರೂ ಕೂಡ ಕಾದು ಕೂತಿದ್ದಾರೆ. ಅದಕ್ಕೆ ಕಾರಣ ಶಿವರಾಜ್‌ಕುಮಾರ್.

ಈ ಸಿನಿಮಾ ಶಿವಣ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಶಿವಣ್ಣನ ಲುಕ್ ಕೂಡ ಶೀಘ್ರದಲ್ಲಿಯೇ ರಿವೀಲ್ ಆಗುವ ನಿರೀಕ್ಷೆಯಿದೆ. ಅರುಣ್ ಮಥೇಶ್ವರನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Captain Miller actor Dhanush visits Tirupati Temple with his two sons, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X