Shivarajkumar: ಎಲ್ಲಾ 'ಜೈಲರ್' ಎಫೆಕ್ಟ್.. ತಮಿಳುನಾಡಲ್ಲಿ ಶಿವಣ್ಣನ ಕ್ರೇಜ್.. 'ಕ್ಯಾಪ್ಟನ್ ಮಿಲ್ಲರ್‌' ಟ್ರೆಂಡಿಂಗ್!

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಜೈಲರ್'ನಲ್ಲಿ ಇದೇ ಮೊದಲ ಬಾರಿಗೆ ಶಿವರಾಜ್‌ಕುಮಾರ್ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಸಿನಿಮಾ ರಿಲೀಸ್ ಆದ ದಿನದಿಂದ ಶಿವಣ್ಣನ ಅತಿಥಿ ಪಾತ್ರಕ್ಕೆ ತಮಿಳಿಗರೇ ಫ್ಯಾನ್ ಆಗಿದ್ದಾರೆ. ಶಿವಣ್ಣ ಹಳೆ ಸಿನಿಮಾಗಳನ್ನು ಆರಿಸಿ ನೋಡುತ್ತಿದ್ದಾರೆ.

'ಜೈಲರ್' ಸಿನಿಮಾದಲ್ಲಿ ನರಸಿಂಹನ ಪಾತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಕೇವಲ ಕಣ್ಣಿನಲ್ಲೇ ನಟಿಸಿ, ಶಿವಣ್ಣ ತಮಿಳಿಗರ ಮನಗೆದ್ದಿದ್ದಾರೆ. ಈಗ ಎರಡನೇ ತಮಿಳು ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಅದುವೇ 'ಕ್ಯಾಪ್ಟನ್ ಮಿಲ್ಲರ್'.

Captain Miller got craze after Shivarajkumar Jailer role revealed Tamil Critc Cheyyar Balu

ಧನುಷ್ ನಟನೆಯ 49ನೇ ಸಿನಿಮಾವಿದು. 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದಲ್ಲಿ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದರೂ, ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. 'ಜೈಲರ್'ಗಿಂತ ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಈಗ ಶಿವಣ್ಣನಿಂದಲೇ 'ಕ್ಯಾಪ್ಟನ್ ಮಿಲ್ಲರ್‌'ಗೆ ಕ್ರೇಜ್ ಹೆಚ್ಚಾಗಿದೆ ಅನ್ನೋ ಮಾತು ಕಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

'ಕ್ಯಾಪ್ಟನ್ ಮಿಲ್ಲರ್‌'ನಲ್ಲಿ ಶಿವಣ್ಣ

ಮೂರು ವಾರಗಳ ಹಿಂದಷ್ಟೇ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಧನುಷ್ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಟೀಸರ್‌ ಶಿವಣ್ಣನ ಚಿಕ್ಕದೊಂದು ಝಲಕ್ ಅನ್ನು ರಿವೀಲ್ ಮಾಡಲಾಗಿದೆ. ಆಗ ಟೀಸರ್ ನೋಡಿ ತಲೆಕೆಡಿಸಿಕೊಳ್ಳದ ತಮಿಳಿಗರು ಈಗ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದೂ ಶಿವಣ್ಣನನ್ನು ತೆರೆಮೇಲೆ ನೋಡುವುದಕ್ಕೆ. ಹೀಗಂತ ತಮಿಳಿನ ಹಿರಿಯ ವಿಮರ್ಶಕ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

Captain Miller got craze after Shivarajkumar Jailer role revealed Tamil Critc Cheyyar Balu

ಶಿವಣ್ಣನಿಂದಲೇ 'ಕ್ಯಾಪ್ಟನ್ ಮಿಲ್ಲರ್'ಗೆ ಕ್ರೇಜ್

ತಮಿಳಿನ ಹಿರಿಯ ವಿಮರ್ಶಕ ಚೆಯ್ಯರ್ ಬಾಲು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಇದರಲ್ಲಿ ಶಿವರಾಜ್‌ಕುಮಾರ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನಿರೂಪಕ "ಇಲ್ಲಿರುವ ಜನರಿಗೆ ಶಿವರಾಜ್‌ಕುಮಾರ್ ಯಾರು ಅಂತಲೇ ಗೊತ್ತಿರಲಿಲ್ಲ. ಜೈಲರ್ ಸಿನಿಮಾ ಬಳಿಕ ಶಿವರಾಜ್‌ಕುಮಾರ್ ಯಾರು ಎಂದು ಎಲ್ಲರಿಗೂ ತಿಳಿದಿದೆ. ಈಗ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಅವರಿಂದಲೇ ಕ್ಯಾಪ್ಟನ್ ಮಿಲ್ಲರ್‌ಗೆ ಬೂಸ್ಟ್ ಬಂದಿದೆ" ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಚೆಯ್ಯರ್ ಬಾಲು ಕೊಟ್ಟ ಉತ್ತರ ಇಂಟ್ರೆಸ್ಟಿಂಗ್ ಆಗಿದೆ.

'ಕ್ಯಾಪ್ಟನ್ ಮಿಲ್ಲರ್' ಕ್ರೇಜ್ ಬಗ್ಗೆ ಹೇಳಿದ್ದೇನು?

'ಜೈಲರ್' ಸಿನಿಮಾದ ಎಂಟತ್ತು ನಿಮಿಷದ ಅತಿಥಿ ಪಾತ್ರದಲ್ಲಿ ಶಿವರಾಜ್‌ಕುಮಾರ್ ಮಿಂಚಿದ್ದಾರೆ. ಚಿಕ್ಕದೊಂದು ಪಾತ್ರದಲ್ಲಿ ಶಿವಣ್ಣನ ಕಂಡು ಥ್ರಿಲ್ ಆಗಿರೋ ತಮಿಳರು 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ನೋಡುವುಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಕ್ರೇಜ್ ಬಗ್ಗೆ ಚೆಯ್ಯರ್ ಬಾಬು ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. "ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಈ ಸಿನಿಮಾದ ಕನೆಕ್ಷನ್ ಕೂಡ ಕರ್ನಾಟಕಕ್ಕೆ ಸಂಬಂಧಿಸಿದ್ದೇ ಆಗಿದೆ ಎಂದು ಕೇಳಿ ಪಟ್ಟಿದ್ದೇನೆ. ಇದು ಅತಿಥಿ ಪಾತ್ರದಂತೆಯೇ ಇದೆ. ಇವರ ಪಾತ್ರ ಹೇಗಿರುತ್ತೆ ಅಂದರೆ ಬೆಂಗಳೂರಿಗೂ ಚೆನ್ನೈಗೆ ಪ್ರಯಾಣ ಮಾಡಿದಂತೆ ಇರುತ್ತೆ. ತಮಿಳು ಸಿನಿಮಾಗೆ ಒಬ್ಬ ಒಳ್ಳೆ ಕ್ಯಾರೆಕ್ಟರ್ ಆರ್ಟಿಸ್ಟ್ ಸಿಕ್ಕಿದ್ದಾರೆ. ಅದರಂತೆಯೇ ಶಿವರಾಜ್‌ಕುಮಾರ್ ನಟಿಸಿದ್ದಾರೆ." ಎಂದು ಶಿವಣ್ಣನ ಹಾಡಿ ಹೊಗಳಿದ್ದಾರೆ.

ಶಿವಣ್ಣನ ಸರಳ ವ್ಯಕ್ತಿತ್ವಕ್ಕೆ ಫಿದಾ

"ಕ್ಯಾಮರಾಮ್ಯಾನ್ ವಿಜಯ್ ವಿಲ್ಟನ್ ಜೊತೆ ಮಾತಾಡುತ್ತಿದ್ದೆ. ಅವರೊಂದು ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡಿದ್ದರು. ಆದರೆ, ಅದು ಚೆನ್ನಾಗಿ ಓಡಲಿಲ್ಲ. ಚೆನ್ನೈಗೆ ಬಂದಾಗಲೆಲ್ಲಾ ವಿಜಯ್ ಮಿಲ್ಡನ್ ಒಂಥರಾ ಶಿವರಾಜ್‌ಕುಮಾರ್ ಪಿಆರ್‌ಓ ತರ ಆಗಿಬಿಡುತ್ತಾರೆ. ಸರ್, ಅವರದ್ದು ಎಷ್ಟು ಸರಳ ವ್ಯಕ್ತಿತ್ವ. ಅವರಿಗಿರೋ ಮಾಸ್ ಇಮೇಜ್‌ಗೆ ಅಷ್ಟೊಂದು ಸರಳತೆನಾ ಅಂತ ಅಚ್ಚರಿ ಪಟ್ಟಿದ್ದರು." ಎಂದು ಶಿವಣ್ಣನ ಸರಳತೆಯನ್ನು ಹಾಡಿ ಹೊಗಳಿದ್ದಾರೆ.

More from Filmibeat

English summary
Captain Miller got craze after Shivarajkumar Jailer role revealed Tamil Critc Cheyyar Balu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X