'ಸಲಾರ್' ರಿಲೀಸ್ ಪೋಸ್ಟ್‌ಪೋನ್: ಅದೇ ದಿನ ಬಿಡುಗಡೆಗೆ ಸಜ್ಜಾದ ರಾಘವ್ ಲಾರೆನ್ಸ್-ಕಂಗನಾ ಸಿನಿಮಾ 'ಚಂದ್ರಮುಖಿ-2'

ಇಡೀ ದೇಶವೇ ಸೆಪ್ಟೆಂಬರ್ 28ಕ್ಕೆ ಕಾದು ಕೂತಿದ್ದರು. ಯಾಕಂದ್ರೆ, ಈ ದಿನ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ನಿರ್ಮಾಣ ಆಗುತ್ತಿರುವ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿತ್ತು. ಬಹಳ ದಿನಗಳ ಹಿಂದೆನೇ ಹೊಂಬಾಳೆ ಫಿಲ್ಮ್ಸ್ 'ಸಲಾರ್' ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿತ್ತು.

ಅದ್ರೀಗ 'ಸಲಾರ್' ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗುತ್ತಿಲ್ಲ. ಸಿನಿಮಾವನ್ನು ದಿಢೀರನೇ ಪೋಸ್ಟ್‌ಪೋನ್ ಮಾಡಿದ್ದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಈ ಸುದ್ದಿ ಹೊರಬೀಳುತ್ತಿದ್ದಂತೆ ಇದೇ ದಿನ ಸಿನಿಮಾ ರಿಲೀಸ್ ಮಾಡುವುದಕ್ಕೆ ಹಲವು ಸಿನಿಮಾಗಳು ಕ್ಯೂನಲ್ಲಿ ನಿಂತಿದ್ದವು. ಅದರಲ್ಲಿ 'ಚಂದ್ರಮುಖಿ 2' ಸಿನಿಮಾ ಕೂಡ ಒಂದು.

'ಸಲಾರ್' ಪೋಸ್ಟ್‌ಪೋನ್ ಆಗೋದು ಗೊತ್ತಾಗುತ್ತಿದ್ದಂತೆ 'ಚಂದ್ರಮುಖಿ 2' ಸಿನಿಮಾ ಬಿಡಗಡೆ ದಿನ ಕೂಡ ಒಂದು ವಾರ ಮುಂದಕ್ಕೆ ಹೋಗಿದೆ. ಸೆಪ್ಟೆಂಬರ್ 28ಕ್ಕೆ ಸಿನಿಮಾ ಬಿಡುಗಡೆಯಾಗುವುದಾಗಿ ಅನೌನ್ಸ್ ಮಾಡಿದೆ. ಇದರ ಹಿಂದಿನ ಗುಟ್ಟೇನು?

Salaar Chandramukhi Kangana Ranaut

'ಸಲಾರ್' ಡೇಟ್‌ನಲ್ಲಿ 'ಚಂದ್ರಮುಖಿ 2'

ಮೆಗಾ ಹಿಟ್ ಆಗಿದ್ದ 'ಚಂದ್ರಮುಖಿ' ಸಿನಿಮಾದ ಪಾರ್ಟ್ 2 ಸೆಪ್ಟೆಂಬರ್ 19ಕ್ಕೆ ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಈಗಾಗಲೇ ನಿರೀಕ್ಷೆ ಹುಟ್ಟಾಕಿರುವ ರಾಘವ ಲಾರೆನ್ಸ್ ಹಾಗೂ ಬಾಲಿವುಡ್ ನಟಿ ಕಂಗನಾ ರನೌತ್ ನಟನೆಯ ಸಿನಿಮಾ ದಿಢೀರನೇ ಒಂದು ವಾರ ಮುಂದಕ್ಕೆ ಹೋಗಿದೆ. ಸೆಪ್ಟೆಂಬರ್ 28ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗುವುದಾಗಿ ನಿರ್ಮಾಣ ಸಂಸ್ಥೆ ಅನೌನ್ಸ್ ಮಾಡಿದೆ. ವಿಶೇಷ ಅಂದ್ರೆ, ಎಲ್ಲಾ ಸರಿಯಿದ್ದಿದ್ದರೆ 'ಸಲಾರ್' ಇದೇ ದಿನ ರಿಲೀಸ್ ಆಗಬೇಕಿತ್ತು. ಈಗ ಇದ್ದಕ್ಕಿದ್ದ ಹಾಗೇ ರಿಲೀಸ್ ಡೇಟ್ ಮುಂದೂಡಿದ್ದು ಯಾಕೆ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಸಿನಿಮಾ ಮುಂದೂಡಿಕೆಗೆ ಏನು ಕಾರಣ?

'ಚಂದ್ರಮುಖಿ 2' ಸಿನಿಮಾ ಗೌರಿ-ಗಣೇಶ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಹಬ್ಬದ ಸಂಭ್ರಮದಲ್ಲಿ 'ಚಂದ್ರಮುಖಿ 2' ಸಿನಿಮಾ ನೋಡುವುದಕ್ಕೆ ಜನರು ಫ್ಯಾಮಿಲಿ ಸಮೇತ ಬರುತ್ತಾರೆಂಬ ನಂಬಿಕೆ ಇತ್ತು. ಆದ್ರೀಗ 'ಜವಾನ್' ಸಿನಿಮಾಗೆ ಒಳ್ಳೆ ಓಪನಿಂಗ್ ಸಿಕ್ಕಿದೆ. ಹೀಗಾಗಿ ಇನ್ನೂ ಒಂದು ವಾರ ಥಿಯೇಟರ್‌ನಿಂದ ಹೋಗುವ ಸಾಧ್ಯತೆಯಿಲ್ಲ. ಬದಲಾಗಿ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ 'ಚಂದ್ರಮುಖಿ 2' ರಿಲೀಸ್ ಡೇಟ್ ಅನ್ನು ಒಂದು ವಾರದ ಮಟ್ಟಿಗೆ ಪೋಸ್ಟ್‌ಪೋನ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Salaar Chandramukhi Kangana Ranaut

18 ವರ್ಷದ ಬಳಿಕ ಸೀಕ್ವೆಲ್

ದಕ್ಷಿಣ ಭಾರತದ ಹಿರಿಯ ನಿರ್ದೇಶಕ ಪಿ ವಾಸು ನಿರ್ದೇಶಿಸಿದ್ದ ಚಂದ್ರಮುಖಿ ಸಿನಿಮಾ 18 ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ ಸಿನಿಮಾದ ಸೀಕ್ವೆಲ್ ಇಷ್ಟು ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. ಹೀಗಾಗಿ ತಮಿಳಿಗರಲ್ಲಿ ಈ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲವಿದೆ. ಕಂಗನಾ ಕೂಡ ನಟಿಸಿರುವುದರಿಂದ ಹಿಂದಿ ಬೆಲ್ಟ್‌ಗಳಲ್ಲೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡುವ ಸಾಧ್ಯತೆಯಿದೆ.

ಲೈಕಾ ನಿರ್ಮಾಣದ ಸಿನಿಮಾ

'ಚಂದ್ರಮುಖಿ 2' ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸುಭಾಷ್ ಕರಣ್ ಈ ಸಿನಿಮಾವನ್ನು ನಿರ್ಮಿಸಿದ್ದು, ಸೆಪ್ಟೆಂಬರ್ 28ರಂದು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಂಗನಾ ರನೌತ್ ಜೊತೆ ರಾಘವ ಲಾರೆನ್ಸ್, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ವಡಿವೇಲು, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Chandramukhi 2 movie is releasing on September 28th due to Salaar release postpone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X