'ಅಮರನ್' ದೃಶ್ಯದಿಂದ ವಿದ್ಯಾರ್ಥಿಗೆ ಸಂಕಷ್ಟ; ಸಾಯಿ ಪಲ್ಲವಿ ಎಂದು ಪೋನ್ ಮೇಲೆ ಫೋನ್
2014ರಲ್ಲಿ ಭಯೋತ್ಪಾಕರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ತಮಿಳುನಾಡಿನ ಯೋಧ ಮೇಜರ್ ಮುಕುಂದ್ ವರದರಾಜನ್ ಕಥೆಯನ್ನು ತೆರೆಮೇಲೆ ತರಲಾಗಿದೆ. ಈ ಸಿನಿಮಾದಲ್ಲಿ ಸ್ಟಾರ್ ನಟರಾದ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದುವೇ ತಮಿಳು ಸಿನಿಮಾ 'ಅಮರನ್'.
ಈ ಸಿನಿಮಾ ತಮಿಳುನಾಡಿನ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಪ್ರೇಕ್ಷಕರು ಥಿಯೇಟರ್‌ನಿಂದ ಹೊರಬರುವಾಗ ಕಣ್ಣಲ್ಲಿ ನೀರು ಹಾಕಿಕೊಂಡು ಬರುತ್ತಿದ್ದಾರೆ. ಆ ಮಟ್ಟಿಗೆ ತಮಿಳರನ್ನು ಈ ಸಿನಿಮಾ ಸೆಳೆದಿದೆ. ಕೇವಲ ತಮಿಳು ಅಷ್ಟೇ ಅಲ್ಲ. ತೆಲುಗಿನಲ್ಲೂ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ಚಿತ್ರತಂಡ ಖುಷಿಯಾಗಿದೆ. ಆದರೆ ಚೆನ್ನೈನ ಒಬ್ಬ ಯುವಕನನ್ನು ಬಿಟ್ಟು.

'ಅಮರನ್' ಬಿಡುಗಡೆಯಾದ ದಿನದಿಂದ ಚೆನ್ನೈನ ಒಬ್ಬ ಯುವಕನಿಗೆ ಸಿಕ್ಕಾಪಟ್ಟೆ ಸಮಸ್ಯೆಯಾಗಿದೆ. ಆತನ ಮೊಬೈಲ್‌ಗೆ ನಿರಂತರವಾಗಿ ಕರೆಗಳು ಬರುತ್ತಲೇ ಇವೆ. ದಿನಕ್ಕೆ ನೂರಾರು ಫೋನ್ ಕರೆಗಳನ್ನು ಸ್ವೀಕರಿಸಿ ಆ ಯುವಕ ಸುಸ್ತಾಗಿ ಹೋಗಿದ್ದಾನೆ. ಅಷ್ಟಕ್ಕೂ ಈತನ ಫೋನ್ ಕಾಲ್‌ಗಳು ಬರುತ್ತಿರುವುದೇಕೆ? 'ಅಮರನ್' ಸಿನಿಮಾಗೂ ಈ ಯುವಕನಿಗೂ ಏನು ಸಂಬಂಧ? ತಿಳಿಯಲು ಮುಂದೆ ಓದಿ.
ಸಾಯಿ ಪಲ್ಲವಿ ನಟಿಸದ ತಮಿಳು ಸಿನಿಮಾ 'ಅಮರನ್' ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿತ್ತು. ಇಲ್ಲಿಂದ ಚೆನ್ನೈನಲ್ಲಿರುವ ವಿದ್ಯಾರ್ಥಿ ವಾಕೀಶನ್ ವಿವಿ ಎಂಬುವವರಿಗೆ ನಿರಂತರವಾಗಿ ಫೋನ್ ಕರೆಗಳ ಸುರಿಮಳೆಯಾಗುತ್ತಿದೆ. ದಿಢೀರನೇ ಇಷ್ಟೊಂದು ಫೋನ್ ಕಾಲ್‌ಗಳು ಬರುತ್ತಿರುವುದನ್ನು ನೋಡಿ ಆ ವಿದ್ಯಾರ್ಥಿ ಕಂಗಾಲಾಗಿ ಹೋಗಿದ್ದಾನೆ ಎಂದು 'ದಿ ಹಿಂದೂ' ವರದಿ ಮಾಡಿದೆ. ಅಸಲಿಗೆ 'ಅಮರನ್' ಸಿನಿಮಾ ರಿಲೀಸ್ ಬಳಿಕ ಯುವಕನಿಗೆ ಇಷ್ಟೊಂದು ಫೋನ್ ಕಾಲ್ ಬರುವುದಕ್ಕೆ ಕಾರಣ ಸಾಯಿ ಪಲ್ಲವಿ.

'ಅಮರನ್' ಸಿನಿಮಾದಲ್ಲಿ ಕೆಲವೇ ಸೆಕೆಂಡುಗಳಿರುವ ದೃಶ್ಯವೊಂದಿದೆ. ಇದರಲ್ಲಿ ಸಾಯಿ ಪಲ್ಲವಿ ಹಾಗೂ ಶಿವಕಾರ್ತಿಕೇಯನ್ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಒಂದು ಕಾಗದದ ತುಣುಕಿನಲ್ಲಿ ತನ್ನ ಫೋನ್ ನಂಬರ್ ಅನ್ನು ಬರೆದು ನಾಯಕ ಶಿವಕಾರ್ತಿಕೇಯನ್ ಕಡೆಗೆ ಎಸೆಯುತ್ತಾರೆ. ಇದೇ ದೃಶ್ಯವೀಗ ಯುವಕನನ್ನು ಸಂಕಷ್ಟಕ್ಕೆ ಸಿಲುಕಿದೆ. ಆ ಯುವಕ 'ದಿ ಹಿಂದೂ' ನೀಡಿದ ಕಾರಣಗಳು ಸಖತ್ ಇಂಟ್ರೆಸ್ಟಿಂಗ್.
ಸಾಯಿ ಪಲ್ಲವಿ ಕಾಗದದಲ್ಲಿ ಎರಡು ಫೋನ್ ನಂಬರ್ ಅನ್ನು ಬರೆದಿರುತ್ತಾರೆ. ಅದರಲ್ಲಿ ಒಂದು ಚಾಲ್ತಿಯಲ್ಲಿ ಇಲ್ಲ. ಇನ್ನೊಂದು ತನ್ನದು ಎಂದು ಚೆನ್ನೈನ ವಿದ್ಯಾರ್ಥಿ ವಾಗೀಶನ್ ವಿವಿ ಹೇಳಿಕೊಂಡಿದ್ದಾರೆ. ದೀಪಾವಳಿ ಹಬ್ಬದಂದು 'ಅಮರನ್' ಸಿನಿಮಾ ರಿಲೀಸ್ ಆಗಿತ್ತು. ಅಲ್ಲಿಂದ ವಾಗೀಶನ್‌ಗೆ ನೂರಾರು ಫೋನ್ ಕರೆಗಳು ಬರುತ್ತಲೇ ಇವೆ.
ಸಿನಿಮಾ ನೋಡಿದವರು ಇದು ಸಾಯಿ ಪಲ್ಲವಿ ನಂಬರ್ ಇರಬೇಕು ಎಂದು ಕರೆಗಳನ್ನು ಮಾಡುತ್ತಿದ್ದಾರೆ. ಕೆಲವರು ಇದು ಸಾಯಿ ಪಲ್ಲವಿ ಅವರದ್ದೇ ಫೋನ್ ನಂಬರ್ ಎಂದುಕೊಂಡಿದ್ದಾರೆ. ಹಾಗೇ ಆಕೆಯನ್ನು ನಟನೆಯನ್ನು ಮೆಚ್ಚಿಕೊಂಡಿದ್ದು, ಅದನ್ನು ತಿಳಿಸಲು ಕರೆ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ರಿಯಲ್ ಲೈಫ್ ಹೀರೋ ಮೇಜರ್ ಮುಕುಂದ್ ವರದರಾಜನ್ ಪತ್ನಿ ಇಂದೂ ರಿಬೆಕ್ಕಾ ವರ್ಗಿಸ್ ಅವರೇ ಎಂದು ಪೋನ್ ಮಾಡುತ್ತಿದ್ದಾಂತೆ. ಇದರಿಂದ ಟ್ರೂ ಕಾಲರ್‌ನಲ್ಲೂ ಯಾರೋ ಕಿಡಿಗೇಡುಗಳು ಟ್ರೂ ಕಾಲರ್‌ನಲ್ಲಿ ವಾಗೀಶನ್ ಇಂದೂ ರೆಬಕ್ಕಾ ವರ್ಗೀಕಾ ಅಂತಳು ಸೇರಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಅವರ ಫೋನ್ ಇರುವ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲೂ ಹರಿದಾಡುತ್ತುವೆಯಂತೆ. ಇದೇ ಫೋನ್ ನಂಬರ್ ಬ್ಯಾಂಕ್ ಅಕೌಂಟ್‌ಗಳಿಗೆ ಕೊಡಲಾಗಿದ್ದು, ತಕ್ಷಣಕ್ಕೆ ಬದಲಾಯಿಸಲಾಗದೆ ಪರದಾಡುತ್ತಿದ್ದಾರೆ.


Click it and Unblock the Notifications











