ಅಜಿತ್ ತಾಯಿ ಅಗಲಿಕೆ; ಸೂತಕದ ಛಾಯೆಯಲ್ಲೂ ಸಿಎಂ ವಿಜಯ್-ತ್ರಿಶಾ ಸಿನಿಮ್ಯಾಟಿಕ್ ಎಂಟ್ರಿ.. ಏನಂತಿದ್ದಾರೆ ನೆಟ್ಟಿಗರು?
ತಮಿಳುನಾಡಿನಲ್ಲಿ ಆದ ರಾಜಕೀಯ ಬೆಳವಣಿಗಳ ಬಗ್ಗೆ ಇಂದಿಗೂ ಚರ್ಚೆ ಆಗುತ್ತಿದೆ. ಇದರ ಜೊತೆಗೆ ಇನ್ನೊಂದು ವಿಷಯ ಕೂಡ ಅಷ್ಟೇ ಗಂಭೀರವಾದ ಚರ್ಚೆಯನ್ನು ಹುಟ್ಟಾಕಿದೆ. ಅದು ವಿಜಯ್ ಹಾಗೂ ತ್ರಿಶಾ ಸ್ಟೋರಿ. ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ಅವರ ತಾಯಿ ನಿಧನರಾಗಿದ್ದಾರೆ. ಚಿತ್ರರಂಗದಲ್ಲಿ ಅವರ ತಾಯಿ ಅಗಲಿಕೆಯ ಸೂತಕದ ಛಾಯೆ ಆವರಿಸಿದೆ. ಕಾಲಿವುಡ್‌ನ ಗಣ್ಯರು ಆಗಮಿಸಿ ನಟ ಅಜಿತ್‌ಗೆ ಸಂತಾಪ ಸೂಚಿಸುತ್ತಿದ್ದಾರೆ.
ಅಜಿತ್ ತಾಯಿಗೆ ಅಂತಿಮ ನಮನ ಸಲ್ಲಿಸಲು ತಮಿಳುನಾಡು ಸಿಎಂ ವಿಜಯ್ ಹಾಗೂ ಸೌತ್ ಕ್ವೀನ್ ತ್ರಿಶಾ ಕೃಷ್ಣನ್ ಒಟ್ಟಿಗೆ ಆಗಮಿಸಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಇಬ್ಬರೂ ಒಟ್ಟಿಗೆ ಸಿನಿಮ್ಯಾಟಿಕ್ ಶೈಲಿಯಲ್ಲೇ ಎಂಟ್ರಿ ಕೊಟ್ಟಿರೋದು ಮತ್ತೆ ಗಾಸಿಪ್ ಲೋಕಕ್ಕೆ ಹೊಸ ಕಿಚ್ಚು ಹಚ್ಚಿದೆ. ಈ ಹಿಂದೆ ವಿಜಯ್ ಪತ್ನಿ ವಿಚ್ಛೇದನ ಸಲ್ಲಿಸ ಬಳಿಕ ಮದುವೆ ಸಮಾರಂಭಕ್ಕೂ ಒಟ್ಟಿಗೆ ಆಗಮಿಸಿ ಸಂಚಲನ ಸೃಷ್ಟಿಸಿದ್ದರು.

ಅಜಿತ್ ತಾಯಿಯ ಅಗಲಿಕೆ
ತಮಿಳು ಚಿತ್ರರಂಗದ ಸೆನ್ಸಿಬಲ್ ಸ್ಟಾರ್ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಇವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈ ವೇಳೆ ದುಬೈನಲ್ಲಿದ್ದ ಅಜಿತ್, ಸುದ್ದಿ ತಿಳಿಯುತ್ತಿದ್ದಂತೆ ಚೆನ್ನೈಗೆ ಮರಳಿದ್ದಾರೆ. ಅಮ್ಮನ ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ್ದ ಅಜಿತ್‌ಗೆ ಸಾಂತ್ವಾನ ಹೇಳುವುದಕ್ಕೆ ಚಿತ್ರರಂಗ ಆಗಮಿಸಿತ್ತು. ಈ ವೇಳೆ ಸಿಎಂ ವಿಜಯ್ ಹಾಗೂ ತ್ರಿಶಾ ಹೈ-ವೋಲ್ಟೇಜ್ ಎಂಟ್ರಿ ಇಡೀ ಸನ್ನಿವೇಶದ ದಿಕ್ಕನ್ನೇ ಬದಲಿಸಿತು.
ಅಜಿತ್ ದುಃಖದಲ್ಲಿ ಜೊತೆಯಾದ ವಿಜಯ್-ತ್ರಿಶಾ
ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ವಿಜಯ್ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಕಟ್ಟಿ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ರಾಜಕೀಯದಲ್ಲಿ ಬ್ಯುಸಿಯಾಗಿದ್ದರೂ, ತನ್ನ ಸಹೋದ್ಯೋಗಿಯ ದು:ಖದಲ್ಲ ಅಜಿತ್ ಭಾಗಿಯಾಗಿದ್ದಾರೆ. ನಿನ್ನ (ಮೇ 30) ತಡರಾತ್ರಿ ಸಿಎಂ ವಿಜಯ್ ಜೊತೆ ತ್ರಿಶಾ ಕೃಷ್ಣನ್ ಕೂಡ ಆಗಮಿಸಿ, ಅಜಿತ್‌ಗೆ ಸಾಂತ್ವಾನ ಹೇಳಿದ್ದಾರೆ. ಭಾವುಕರಾಗಿದ್ದ ಅಜಿತ್‌ರನ್ನು ವಿಜಯ್ ಗಟ್ಟಿಯಾಗಿ ಅಪ್ಪಿಕೊಂಡು ಸಮಾಧಾನ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದೇ ವಿಡಿಯೋದಲ್ಲಿ ವಿಜಯ್ ಹಿಂದೆನೇ ಕಪ್ಪು ಸಲ್ವಾರ್ ಧರಿಸಿದ ನಟಿ ತ್ರಿಶಾ ಕೃಷ್ಣನ್ ಕೂಡ ಕಾಣಿಸಿಕೊಂಡಿದ್ದಾರೆ.
ವಿಜಯ್-ತ್ರಿಶಾ ಸ್ಪೆಷಲ್ ಬಾಂಡಿಂಗ್
ತಮಿಳುನಾಡು ಸಿಎಂ ವಿಜಯ್ ಹಾಗೂ ತ್ರಿಶಾ ಇಬ್ಬರೂ ಅಜಿತ್ ದು:ಖಕ್ಕೆ ಸ್ಪಂದಿಸಿದ್ದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ವಿಜಯ್-ತ್ರಿಶಾ ಶೋಕದಲ್ಲಿ ಭಾಗಿಯಾಗಿದ್ದಷ್ಟೇ ಕಂಡಿಲ್ಲ. ಅಭಿಮಾನಿಗಳ ಕಣ್ಣಿಗೆ ಇವರಿಬ್ಬರ ನಡುವಿನ ಆ 'ಸ್ಪೆಷಲ್ ಬಾಂಡಿಂಗ್' ಕೂಡ ಕಂಡಿದ್ದು, ಬರೀ ಜೋರಾಗಿಯೇ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ವಿಜಯ್ ಹಾಗೂ ತ್ರಿಶಾರ ಆತ್ಮೀಯತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇಬ್ಬರ ಆಫ್-ಸ್ಕ್ರೀನ್ ಡೇಟಿಂಗ್ ಗಾಸಿಪ್‌ಗಳ ಮಧ್ಯೆ ದುಃಖದ ಸಮಯದಲ್ಲೂ ಈ ಜೋಡಿ ಒಟ್ಟಿಗೆ ಎಂಟ್ರಿ ಕೊಟ್ಟಿದ್ದು ಗಾಸಿಪ್ ಪ್ರಿಯರಿಗೆ ಹಬ್ಬ ಅಂದಂತಾಗಿದೆ.
ವಿಜಯ್-ತ್ರಿಶಾ ಬಗ್ಗೆ ಪಿಸುಮಾತು
ವಿಜಯ್ ಹಾಗೂ ತ್ರಿಶಾ ತಮಿಳು ಚಿತ್ರರಂಗದ ಎವರ್‌ಗ್ರೀನ್ ಜೋಡಿ. 'ಗಿಲ್ಲಿ', 'ಲಿಯೋ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ತೆರೆಮೇಲೆ ಪ್ರೇಮಿಗಳಾಗಿ ಮೋಡಿ ಮಾಡಿರುವ ಜೋಡಿ, ತೆರೆ ಹಿಂದೆನೂ ಸದ್ದು ಮಾಡುತ್ತಿದೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರೋದು ರಿಯಲ್ ಲೈಫ್‌ನಲ್ಲೂ ಒಂದಾಗುತ್ತಿದ್ದಾರೆಂಬ ಗುಲ್ಲೆದ್ದಿದೆ. ಇವರಿಬ್ಬರು ಅಜಿತ್ ಮನೆಗೆ ಬಂದ ವಿಡಿಯೋಗಳು ಸದ್ಯ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ನೆಟ್ಟಿಗರ ಕಮೆಂಟ್‌ಗಳೇನು?
ನೆಟ್ಟಿಗರು ಅಜಿತ್ ಹಾಗೂ ವಿಜಯ್ ಅವರ ಫ್ರೆಂಡ್‌ಶಿಪ್ ಬಗ್ಗೆ ಮಾತಾಡುತ್ತಿದ್ದಾರೆ. "ಇಬ್ಬರದ್ದೂ ನಿಜವಾದ ಸ್ನೇಹ" ಎನ್ನುತ್ತಿದ್ದಾರೆ. "ವಿಜಯ್ ಅವರ ಸರಳತೆಗೆ ಮೆಚ್ಚಲೇಬೇಕು" ಎಂದು ಹೇಳುತ್ತಿದ್ದಾರೆ. ಆದರೆ, ಮತ್ತೆ ಕೆಲವರು "ವಿಜಯ್ ಜೊತೆ ತ್ರಿಶಾ ಕಾಣಿಸಿಕೊಂಡಿದ್ದಾರೆ. ಈ ಸುದ್ದಿಯನ್ನು ಹಾಕೋಣವೇ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ಆ ಮಹಿಳೆ ವಿಡಿಯೋದಲ್ಲಿ ಇಲ್ಲದೇ ಹೋಗಿದ್ದರೆ, ಇದು ಪರ್ಫೆಕ್ಟ್ ವಿಡಿಯೋ ಆಗುತ್ತಿತ್ತು." ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಈಕೆ ಎಲ್ಲಾ ಕಡೆಗೂ ಯಾಕೆ ಹೋಗುತ್ತಿದ್ದಾಳೆ" ಎಂದು ಬೇಸರ ಹೊರ ಹಾಕಿದ್ದಾರೆ.


Click it and Unblock the Notifications