ನಿಶ್ಚಿತಾರ್ಥದಲ್ಲಿ ತಂದೆ ರೋಬೊ ಶಂಕರ್‌ಗೆ ಮುತ್ತಿಟ್ಟಿದ್ದ ಮಗಳು ಇಂದ್ರಜಾ; ವಿವಾದಕ್ಕೀಡಾದರೂ ಜಗ್ಗಲಿಲ್ಲ ಅಪ್ಪ-ಮಗಳು

ತಮಿಳು ಚಿತ್ರರಂಗದ ಜನಪ್ರಿಯ ನಟ ರೋಬೋ ಶಂಕರ್ ಅನಾರೋಗ್ಯದಿಂದ ಇಂದು (ಸೆಪ್ಟೆಂಬರ್ 18) ನಿಧನರಾಗಿದ್ದಾರೆ. 46 ವರ್ಷದ ನಟ ತಮಿಳಿನ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದರು. ಇವರ ಹಾಸ್ಯ ಪ್ರಜ್ಞೆಗೆ ತಮಿಳು ಚಿತ್ರರಂಗವೇ ಮೆಚ್ಚಿಕೊಂಡಿತ್ತು. ಎಲ್ಲಾ ತಾರೆಯರ ಅಚ್ಚು ಮೆಚ್ಚಿನ ಹಾಸ್ಯ ನಟನಾಗಿದ್ದ ರೋಬೋ ಶಂಕರ್ ದಿಢೀರನೇ ಇಹಲೋಕ ತ್ಯಜಿಸಿದ್ದು, ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

ರೋಬೋ ಶಂಕರ್ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಅನಾರೋಗ್ಯಕ್ಕೀಡಾಗಿದ್ದರು. ಜಾಂಡೀಸ್‌ನಿಂದ ಬಳಲುತ್ತಿದ್ದ ರೋಬೋ ಶಂಕರ್ ಚೇತರಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡಿದ್ದರು. ಈ ವೇಳೆ ಯಾವುದೇ ಸಿನಿಮಾದಲ್ಲಿ ನಟಿಸುವುದಕ್ಕೆ ಹೋಗಿರಲಿಲ್ಲ. ರೋಬೋ ಶಂಕರ್ ಇನ್ನೇನು ಮರೆತೇ ಹೋದರು ಅನ್ನುವಾಗಲೇ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿ ತಮಿಳು ಚಿತ್ರರಂಗದಲ್ಲಿ ಸುದ್ದಿಯಾಗಿದ್ದರು.

Comedy Actor Robo Shankar Daughter Indraja relationship and controversy in marriage

ಮಗಳು ಇಂದ್ರಜಾ ಮದುವೆಗೆ ತಮಿಳಿನ ಬಹುತೇಕ ಎಲ್ಲಾ ಜನಪ್ರಿಯ ತಾರೆಯರೂ ಆಗಮಿಸಿದ್ದರು. ಈ ಮದುವೆ ಎಲ್ಲರ ಕಣ್ಣು ಕುಕ್ಕುವಂತೆ ಇತ್ತು. ಆದರೆ, ಮಗಳ ಮದುವೆಗೂ ಮುನ್ನ ನಿಶ್ಚಿತಾರ್ಥ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅದ್ಯಾಕೆ ಅಂದರೆ, ನಿಶ್ಚಿತಾರ್ಧ ವೇಳೆ ಮಗಳು ಇಂದ್ರಜಾ ತಂದೆ ರೋಬೋ ಶಂಕರ್ ತುಟಿಗಳಿಗೆ ಚುಂಬಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರುವುದಕ್ಕೆ ಶುರು ಮಾಡಿದ್ದರು.

ಮಗಳು ಇಂದ್ರಜಾ ಅಪ್ಪನಿಗೆ ಮುತ್ತಿಟ್ಟ ಸಂಗತಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ತಮಿಳುನಾಡಿನಲ್ಲಿ ಅಪ್ಪ-ಮಗಳ ವಿರುದ್ಧ ಟೀಕೆಗಳನ್ನು ಮಾಡಲಾಗಿತ್ತು. ಆದರೆ, ಇಂತಹ ಟೀಕೆಗಳಿಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ತಾನೇಕೆ ತಂದೆಯ ತುಟಿಗಳನ್ನು ಚುಂಬಿಸಿದೆ ಎನ್ನುವುದನ್ನು ಮಗಳು ಇಂದ್ರಜಾ ಸಮಜಾಯಿಷಿ ಕೊಟ್ಟಿದ್ದರು. ಇದನ್ನು ಕೆಲವರು ಒಪ್ಪಿ ಶುಭ ಹಾರೈಸಿದ್ದರು.

ಚಿಕ್ಕಂದಿನಿಂದಲೂ ನನ್ನ ತಂದೆಗೆ ಹೀಗೆ ಮುತ್ತುಕೊಡುತ್ತಿದ್ದೇನೆ. ಅವರು ನನ್ನ ತಂದೆ. ಅವರನ್ನು ಹೀಗೆ ಚುಂಬಿಸುವುದರಲ್ಲಿ ತಪ್ಪೇನಿದೆ. ನಮ್ಮಿಬ್ಬರ ಸಂಬಂಧದ ಏನು ಅನ್ನೋದು ನಮಗೆ ಗೊತ್ತಿದೆ ಎನ್ನುವ ಅರ್ಥದಲ್ಲಿ ತಿರುಗೇಟು ಕೊಟ್ಟಿದ್ದರು. ಈ ಹೇಳಿಕೆಯ ಬಳಿಕ ಟೀಕೆ ಮಾಡುವವರು ಸೈಲೆಂಟ್ ಆಗಿದ್ದರು.

Comedy Actor Robo Shankar Daughter Indraja relationship and controversy in marriage

ಸಂದರ್ಶನವೊಂದರಲ್ಲಿ ಇಂದ್ರಜಾ ಪ್ರತಿಕ್ರಿಯೆ ಹೀಗಿತ್ತು. "ಅವರು ನನ್ನ ತಂದೆ, ನಾನು ಹುಟ್ಟಿದಾಗಿನಿಂದ ಅವರೊಂದಿಗೆ ನಾನು ಹೀಗೆ ಚುಂಬಿಸುತ್ತೇನೆ. ಅದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನೆ ಮಾಡಿದ್ದರು. ಹಾಗೇ "ನಾನು ಮುತ್ತು ಕೊಟ್ಟಿದ್ದು ಖಂಡಿತಾ ತಪ್ಪಲ್ಲ. ಆದರೆ, ತಪ್ಪು ನೋಡುವವರ ದೃಷ್ಟಿಯಲ್ಲಿದೆ. ನಿಮ್ಮ ತಾಯಿ ನಿಮ್ಮನ್ನು ತಪ್ಪಾಗಿ ಬೆಳೆಸಿದ್ದಾರೆ ಎಂದರ್ಥ. ನಮ್ಮಪ್ಪ ನಮ್ಮನ್ನು ಸರಿಯಾಗಿಯೇ ಬೆಳೆಸಿದ್ದಾರೆ" ಎಂದು ಇಂದ್ರಜಾ ತಿರುಗೇಟು ಕೊಟ್ಟಿದ್ದರು.

ನಿಶ್ಚಿತಾರ್ಥದಲ್ಲಿ ಮಗಳು ಇಂದ್ರಜಾ ತಂದೆ ರೋಬೋ ಶಂಕರ್‌ಗೆ ಮುತ್ತಿಟ್ಟು ವಿವಾದಕ್ಕೀಡಾಗಿದ್ದರೆ, ಆರತಕ್ಷತೆಯಲ್ಲಿ ಅಳಿಯ ಅತ್ತೆಗೆ ಚುಂಬಿಸಿ ಸುದ್ದಿಯಾಗಿದ್ದರು. ತನ್ನ ಮದುವೆ ಆರತಕ್ಷತೆಯಲ್ಲಿ ರೋಬೋ ಶಂಕರ್ ಅಳಿಯ ಕಾರ್ತಿಕ್ ಖುಷಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಜೋಷನ್‌ಲ್ಲಿ ಅತ್ತೆ ಅಂದರೆ, ರೋಬೋ ಶಂಕರ್ ಪತ್ನಿ ಪ್ರಿಯಾಂಕಾ ಅವರ ತುಟಿಗಳಿಗೆ ಚುಂಬಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೆ ನೆಟ್ಟಿಗರು ಕಿಡಿಕಾರಿದ್ದರು.

ವಿವಾದಗಳು ಏನೇ ಇದ್ದರೂ, ಈ ಹಾಸ್ಯ ನಟನ ತಂದೆ ಹಾಗೂ ಮಗಳ ಬಗ್ಗೆ ಇಂತಹ ಅನ್ಯೋನ್ಯತೆ ಇತ್ತು. ಮಗಳ ಮದುವೆಯಲ್ಲಿ ರೋಬೋ ಶಂಕರ್ ಕುಣಿದು ಕುಪ್ಪಳಿಸಿದ್ದರು. ಅನಾರೋಗ್ಯದ ನಡುವೆಯೂ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಸಂಭ್ರಮಿಸಿದ್ದರು. ಇಡೀ ತಮಿಳು ಚಿತ್ರರಂಗವೇ ಬೆರಗಾಗಿ ನೋಡುವಂತೆ ಮಾಡಿದ್ದರು. ಅದರೆ, ಈಗ ದಿಢೀರನೇ ತನ್ನ ಪ್ರೀತಿಯ ಮಗಳನ್ನು ಬಿಟ್ಟು ಅಗಲಿದ್ದಾರೆ. ಅಪ್ಪನನ್ನು ಕಳೆದುಕೊಂಡು ಮಗಳು ಕಂಬನಿ ಇಡುತ್ತಿದ್ದರೆ, ಇತ್ತ ಸಿನಿಮಾ ತಾರೆಯರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

More from Filmibeat

English summary
Comedy Actor Robo Shankar Daughter Indraja relationship and controversy in marriage.
Read more about: comedian controversy tamil actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X