ಮಗಳು ಅಪ್ಪನಿಗೆ.. ಅಳಿಯ ಅತ್ತೆಗೆ ಮುತ್ತಿಟ್ಟ ಹಾಸ್ಯ ನಟನ ಪುತ್ರಿಯ ವಿಚ್ಛೇದನದ ಬಗ್ಗೆ ಏನಿದು ಸುದ್ದಿ?
ತಮಿಳಿನ ಹಾಸ್ಯ ನಟ ರೋಬೊ ಶಂಕರ್ ತಮ್ಮ ಮಗಳ ಮದುವೆಯನ್ನು ಇತ್ತೀಚೆಗೆ ಅದ್ಧೂರಿಯಾಗಿ ಮಾಡಿದ್ದರು. ಈ ಮದುವೆಗೆ ತಮಿಳು ಚಿತ್ರರಂಗದ ಗಣ್ಯರು ಆಗಮಿಸಿ ನವ ಜೋಡಿ ಶುಭ ಹಾರೈಸಿದ್ದರು. ರೋಬೊ ಶಂಕರ್ ಇಷ್ಟು ಗ್ರ್ಯಾಂಡ್ ಆಗಿ ಮದುವೆ ಮಾಡಿದ್ದನ್ನು ನೋಡಿ ಇಡೀ ಚಿತ್ರರಂಗವೇ ಕಣ್ಬಿಟ್ಟು ನೋಡಿತ್ತು.
ಆದರೆ, ಈ ಮದುವೆ ಸಮಾರಂಭದ ವೇಳೆ ನವ ಜೋಡಿ ನಡೆದುಕೊಂಡ ರೀತಿ ನೆಟ್ಟಿಗರು ಕಣ್ಣು ಕೆಂಪಗಾಗಿಸಿತ್ತು. ಎರಡು ವಿಭಿನ್ನ ಸಂದರ್ಭಗಳಲ್ಲಿ ರೋಬೊ ಶಂಕರ್ ಮಗಳು ಹಾಗೂ ಅಳಿಯ ಕಾರ್ತಿಕ್ ನಡುದುಕೊಂಡ ರೀತಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟಕ್ಕೂ ಈ ಜೋಡಿಯ ಅಂತಹದ್ದೇನು ಮಾಡಿತ್ತು? ಅನ್ನೋ ಪ್ರಶ್ನೆ ಮೂಡುವುದು ಸಹಜ.

ರೋಬೋ ಶಂಕರ್ ಪುತ್ರಿ ಮದುವೆ ವೇಳೆ ತಂದೆಯ ತುಟಿಯನ್ನು ಚುಂಬಿಸಿದ್ದರು. ಇನ್ನೊಂದು ಸಂದರ್ಭದಲ್ಲಿ ಅಳಿಯ ಕಾರ್ತಿಕ್ ಅತ್ತೆಯ ತುಟಿಯನ್ನು ಚುಂಬಿಸಿದ್ದರು. ಈ ಪ್ರತ್ಯೇಕ ಘಟನೆಗಳು ಫೋಟೊ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಇವರಿಬ್ಬರನ್ನು ಲೆಫ್ಟ್ ರೈಟ್ ತೆಗೆದುಕೊಂಡಿದ್ದರು. ಇದು ಒಂದು ತಿಂಗಳ ಹಿಂದಷ್ಟೇ ನಡೆದ ಮದುವೆ. ಮತ್ಯಾಕೆ ಇವರಿಬ್ಬರ ಸುದ್ದಿ ಅನ್ನೋದಕ್ಕೆ ಒಂದು ಕಾರಣವಿದೆ.
ಅಂದ್ಹಾಗೆ ರೋಬೋ ಶಂಕರ್ ತಮಿಳು ಚಿತ್ರರಂಗ ಜನಪ್ರಿಯ ಹಾಸ್ಯ ನಟ. ಇವರ ಪುತ್ರಿಯೇ ಇಂದ್ರಜಾ ಶಂಕರ್. ಈಕೆ ಕೂಡ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಳಪತಿ ವಿಜಯ್ ನಟಿಸಿದ್ದ 'ಬಿಗಿಲ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಒಂದು ತಿಂಗಳ ಹಿಂದಷ್ಟೇ ಕಾರ್ತಿಕ್ ಎಂಬುವವರ ಜೊತೆ ಮದುವೆ ಆಗಿದ್ದರು.

ಇಂದ್ರಜಾ ನಿಶ್ಚಿತಾರ್ಥದ ಸಮಯದಲ್ಲಿ ತಂದೆ ರೋಬೊ ಶಂಕರ್ ತುಟಿಗಳನ್ನು ಚುಂಬಿಸಿದ್ದರು. ಹಾಗೇ ಆರತಕ್ಷತೆ ಸಮಯದಲ್ಲಿ ಡ್ಯಾನ್ಸ್ ಮಾಡುವಾಗ ಅತ್ತೆ ಪ್ರಿಯಾಂಕಾ ಶಂಕರ್ ತುಟಿಗಳಿಗೆ ಅಳಿಯ ಕಾರ್ತಿಕ್ ಮುತ್ತಿಟ್ಟಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಿಂದ ಈ ಜೋಡಿ ನೆಟ್ಟಿಗರ ಕಣ್ಗಾವಲಿನಲ್ಲಿದೆ. ಇವರೇ ಸೋಶಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ ಮಾಡಿದ್ದರೂ, ನೆಟ್ಟಿಗರು ಕಾಮೆಂಟ್ ಮಾಡಿತ್ತಿದ್ದಾರೆ. ಇದರಿಂದ ನೊಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಬೇಸರ ಹೊರ ಹಾಕಿದ್ದಾರೆ.
ಇಂದ್ರಜಾ ಶಂಕರ್ ಇತ್ತೀಚೆಗೆ ಪತಿ ಕಾರ್ತಿಕ್ ಜೊತೆಯಲ್ಲಿ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದರಂತೆ. ಅದಕ್ಕೆ ನೆಟ್ಟಿಗರು ನೆಗೆಟಿವ್ ಕಾಮೆಂಟ್‌ಗಳನ್ನೇ ಹೆಚ್ಚು ಮಾಡಿದ್ದರು. ಇದನ್ನು ನೋಡಿ ಇಂದ್ರಜಾ ಶಂಕರ್ ಬೇಸರ ಮಾಡಿಕೊಂಡಿದ್ದಾರೆ. ಅದರಲ್ಲೂ ಮದುವೆಯಾದ ಒಂದು ತಿಂಗಳ ಒಳಗಾಗಿಯೇ ಇಬ್ಬರು ಬೇರೆಯಾಗುತ್ತಾರೆ ಅಂತೆಲ್ಲ ಕಾಮೆಂಟ್ ಮಾಡಿತ್ತಿದ್ದಾರಂತೆ. ಈ ಬಗ್ಗೆ ನಟಿ ಬೇಸರ ಹೊರ ಹಾಕಿದ್ದಾರೆ.
ಈಗ ಇಬ್ಬರೂ ಒಟ್ಟಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇನ್ನೂ ಸ್ವಲ್ಪ ದಿನ ಕಾಯೀರಿ. ಇಬ್ಬರನ್ನು ಪ್ರತ್ಯೇಕವಾಗಿ ಸಂದರ್ಶನ ಮಾಡುತ್ತೀರ. ಶೀಘ್ರದಲ್ಲೇ ಇಬ್ಬರು ವಿಚ್ಛೇದನ ನೀಡುತ್ತಾರೆ ಅಂತ ವ್ಯಕ್ತಿಯೊಬ್ಬ ಕಾಮೆಂಟ್ ಮಾಡಿದ್ದ. ಆತನ ಹೆಸರು ನೆನಪಿಲ್ಲ. ಆದರೆ, ಇಂತಹ ಕಾಮೆಂಟ್‌ಗಳನ್ನು ನೋಡಿ ನನಗೆ ಸಿಕ್ಕಾಪಟ್ಟೆ ಬೇಸರ ಆಗುತ್ತೆ. ಇನ್ನೊಬ್ಬರ ಬಗ್ಗೆ ನೀವು ಹೇಗೆ ಇಂತಹ ಕಾಮೆಂಟ್ ಮಾಡುವುದಕ್ಕೆ ಸಾಧ್ಯ?" ಎಂದು ಇಂದ್ರಜಾ ಶಂಕರ್ ಬೇಸರ ತೋಡಿಕೊಂಡಿದ್ದಾರೆ.


Click it and Unblock the Notifications