'ಕೂಲಿ' ನಿಂತಿರೋದೇ ಕೊನೆಯ 20 ನಿಮಿಷದ ಮೇಲೆ; ರಜನಿಕಾಂತ್ ಸಿನಿಮಾ ವಿಮರ್ಶಕ ಹೇಳಿದ್ದೇನು?
ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿರುವ 'ಕೂಲಿ' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಅಡ್ವಾನ್ಸ್ ಬುಕಿಂಗ್‌ನಿಂದಲೇ ದಾಖಲೆ ಕಲೆಕ್ಷನ್ ಮಾಡಿದೆ. 'ಕಬಾಲಿ' ಬಳಿಕ ಮತ್ತೆ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾಗೆ ಅದಕ್ಕಿಂತಲೂ ದುಪ್ಪಟ್ಟು ಕ್ರೇಜ್ ಸೃಷ್ಟಿಯಾಗಿದೆ. ಈಗಾಗಲೇ ಟಿಕೆಟ್‌ಗಳು ಹಾಟ್ ಕೇಕ್‌ನಂತೆ ಸೇಲ್ ಆಗುತ್ತಿವೆ. ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
'ಕೂಲಿ' ಆರಂಭ ಆದಲ್ಲಿಂದಲೇ ಸೂಪರ್‌ಸ್ಟಾರ್ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿತ್ತು. ಅದಕ್ಕೆ ಕಾರಣ ಲೋಕೇಶ್ ಕನಗರಾಜ್. ತಮಿಳು ಚಿತ್ರರಂಗದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿರುವ ಈ ನಿರ್ದೇಶಕ, ಇದೇ ಮೊದಲ ಬಾರಿಗೆ ರಜನಿಕಾಂತ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ 'ಕೂಲಿ' ವಿಶ್ವದಾದ್ಯಂತ ಸದ್ದು ಮಾಡುತ್ತೆಂದು ನಿರೀಕ್ಷೆ ಮಾಡಲಾಗಿತ್ತು. ಅದಕ್ಕಿಂತಲೂ 'ಕೂಲಿ' ಕ್ರೇಜ್ ದುಪ್ಪಟ್ಟಾಗಿದೆ.

ಈಗಾಗಲೇ 'ಕೂಲಿ' ಟೀಸರ್, ಸಾಂಗ್ಸ್‌ನಿಂದ ಕಿಕ್ ಕೊಟ್ಟಿದೆ. ದೊಡ್ಡ ಸ್ಟಾರ್ ಕಾಸ್ಟ್ ಬೇರೆ ಇರೋದ್ರಿಂದ ನಿರೀಕ್ಷೆಗಳೇನು ಕಮ್ಮಿಯಿಲ್ಲ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ಯಾವಾಗ ನೋಡುತ್ತೇವೋ ಅಂತ ಫ್ಯಾನ್ಸ್ ನಿದ್ದೆ ಮಾಡದೇ ಕಾಯುತ್ತಿದ್ದಾರೆ. ಈ ಗ್ಯಾಪ್‌ನಲ್ಲಿ ದುಬೈನ ವಿವಾದಾತ್ಮಕ ವಿಮರ್ಶಕರೊಬ್ಬರು 'ಕೂಲಿ' ಸಿನಿಮಾ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ತನ್ನ ಎಕ್ಸ್ ಖಾತೆಯಲ್ಲಿ ಚುಟುಕಾಗಿ ವಿಮರ್ಶೆಯನ್ನು ಮಾಡಿ ಪೋಸ್ಟ್ ಮಾಡಿದ್ದಾರೆ.
ಸನ್ ಪಿಕ್ಚರ್ಸ್ ನಿರ್ಮಿಸಿರುವ 'ಕೂಲಿ' ಸಿನಿಮಾ ಆಗಸ್ಟ್ 14ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ತೆಲುಗಿನ ಕಿಂಗ್ ಅಕ್ಕಿನೇನಿ ನಾಗಾರ್ಜುನ, ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಸ್ಯಾಂಡಲ್‌ವುಡ್‌ನ ರಿಯಲ್‌ಸ್ಟಾರ್ ಉಪೇಂದ್ರ, ಮಲಯಾಳಂನ ಸೌಬಿನ್ ಶಾಹಿರ್, ಶ್ರುತಿ ಹಾಸನ್, ಪೂಜಾ ಹೆಗ್ಡೆ ಹಾಗೂ ಸತ್ಯರಾಜ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು 'ಕೂಲಿ' ಚಿತ್ರದ ಅತೀ ದೊಡ್ಡ ಹೈಲೈಟ್.
ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗಿರುವ 'ಕೂಲಿ' ಸಿನಿಮಾ ತಮಿಳು ಸೇರಿದಂತೆ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್‌ನ ಈ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರುವ ಮೊದಲ ತಮಿಳು ಸಿನಿಮಾ ಆಗುತ್ತೆಂಬ ನಿರೀಕ್ಷೆಯಲ್ಲಿ ತಮಿಳಿಗರು ಇದ್ದಾರೆ. ಈ ಗ್ಯಾಪ್‌ನಲ್ಲಿ ದುಬೈನಲ್ಲಿ ನೆಲೆಸಿರುವ ವಿವಾದಾತ್ಮಕ ವಿಮರ್ಶಕ ಉಮೈರ್ ಸಂಧು ಸಿನಿಮಾ ನೋಡಿದ್ದಾಗಿ ಹೇಳಿಕೊಂಡಿದ್ದು, ಎಕ್ಸ್‌ನಲ್ಲಿ ಚಿಕ್ಕದಾಗಿ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ.
ಉಮೈರ್ ಸಂಧು ದುಬೈನಲ್ಲಿ ನಡೆದ ಸೆನ್ಸಾರ್ ಸ್ಕ್ರೀನಿಂಗ್ ವೇಳೆ 'ಕೂಲಿ' ಸಿನಿಮಾವನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಇದೂವರೆಗೂ ಬಿಗ್ ಸಿನಿಮಾಗಳ ಬಗ್ಗೆ ನಿರೀಕ್ಷೆಗೂ ಮುನ್ನ ವಿಮರ್ಶೆ ಮಾಡುತ್ತಾರೆ. ಇದೇ ಕಾರಣಕ್ಕೆ ಕೆಲವೊಮ್ಮೆ ವಿವಾದಕ್ಕೆ ಸಿಲುಕಿದ್ದು ಕೂಡ ಇದೆ. ಅಷ್ಟಕ್ಕೂ ರಜನಿಕಾಂತ್ 'ಕೂಲಿ' ಸಿನಿಮಾವನ್ನು ನೋಡಿ ಉಮೈರ್ ಸಂಧು ಮಾಡಿದ ಪೋಸ್ಟ್‌ನಲ್ಲಿ ಹೀಗಿದೆ.
"ಒನ್ ಮ್ಯಾನ್ ಶೋ ನಿಮ್ಮ ಮುಂದೆ ಬರುತ್ತಿದೆ. ರಜನಿಕಾಂತ್ ಮತ್ತೆ ಕಮ್ ಬ್ಯಾಕ್ ಮಾಡಿದ್ದು, ಪ್ರೇಕ್ಷಕರ ಮನಸ್ಸನ್ನು ಕದಿಯುತ್ತಾರೆ. ಪವರ್‌ಫುಲ್ ಪಾತ್ರಗಳಲ್ಲಿ ರಜನಿಕಾಂತ್ ನಟಿಸಿದ್ದಾರೆ. ಇದರೊಂದಿಗೆ ಬಾರೀ ಪ್ರಮಾಣದಲ್ಲಿ ಪೋಷಕ ಪಾತ್ರಗಳು ಸಪೋರ್ಟ್ ಮಾಡಿವೆ. ಅವರೆಲ್ಲರೂ ಅದ್ಬುತವಾಗಿ ನಟಿಸಿದ್ದಾರೆ. ಆದರೆ, ಕಥೆ ಹಾಗೂ ಚಿತ್ರಕಥೆ ಮಾತ್ರ ಸಾಧಾರಣವಾಗಿದೆ. ಈ ಸಿನಿಮಾ ಕ್ಲೈಮ್ಯಾಕ್ಸ್ ಹಾಗೂ ಕೊನೆಯ 20 ನಿಮಿಷವೇ ಸಿನಿಮಾದ ಹೈಲೈಟ್. ಹೋಗಿ ಸಿನಿಮಾ ನೋಡಿ" ಎಂದು ಉಮೈರ್ ಸಂಧು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ 'ಕೂಲಿ' 5ಕ್ಕೆ 3.5 ಅಂಕಗಳನ್ನು ಕೊಟ್ಟಿದ್ದಾರೆ.


Click it and Unblock the Notifications











