"ಜಯಂ ರವಿಗೆ ನನ್ನ ಬೆಂಬಲ, ಆರತಿಯನ್ನು ಖುಷಿ ಪಡಿಸಲು ಆತ ಹಗಲು-ರಾತ್ರಿ ದುಡಿಬೇಕು": ಸುಚಿತ್ರಾ ಶಾಕಿಂಗ್ ಕಾಮೆಂಟ್
ಸಿನಿಮಾರಂಗದಲ್ಲಿ ವಿಚ್ಛೇದನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಧನುಷ್ ಹಾಗೂ ರಜನಿ ಪುತ್ರಿ ಐಶ್ವರ್ಯಾ, ನಾಗಚೈತನ್ಯ ಹಾಗೂ ಸಮಂತಾದಂತಹ ವಿಚ್ಛೇದನ ಪ್ರಕರಣಗಳು ಇನ್ನೂ ಚರ್ಚೆಯಾಗುತ್ತಿವೆ. ವಿಚ್ಛೇದನದ ಸುದ್ದಿ ಕೇಳಿದಾಗ ಅಭಿಮಾನಿಗಳು ಬೇಸರ ಹೊರಹಾಕುತ್ತಾರೆ. ಈಗ ತಮಿಳಿನ ಮತ್ತೊಬ್ಬ ಸ್ಟಾರ್ ನಟ ಜಯಂ ರವಿ ಹಾಗೂ ಅವರ ಪತ್ನಿ ಆರತಿ ಬೇರೆಯಾಗಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಜಯಂ ರವಿ ಹಾಗೂ ಆರತಿ ವಿಚ್ಛೇದನದ ಸುದ್ದಿ ಓಡಾಡುತ್ತಲೇ ಇತ್ತು. ಜಯಂ ರವಿ ಹಾಗೂ ಆರತಿ ಸಂಬಂಧದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ವದಂತಿ ಹರಿದಾಡುತ್ತಲೇ ಇತ್ತು. ಈಗ ಸ್ವತ: ಜಯಂ ರವಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ವಿಚ್ಛೇನದ ನೀಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದು ವಿಷಯ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

'ಜಯಂ' ಸಿನಿಮಾದ ಮೂಲಕ ರವಿ ಕಾಲಿವುಡ್‌ನಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು. ಆ ಬಳಿಕ ಕಾಲಿವುಡ್‌ನಲ್ಲಿ ಸ್ಟಾರ್ ನಟನಾಗಿ ಬೆಳೆದಿದ್ದಾರೆ. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಮನಗೆದ್ದಿದ್ದರು. ಇತ್ತೀಚೆಗೆ ಮಣಿರತ್ನಂ ನಿರ್ದೇಶಿಸಿದ 'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಮತ್ತೆ ಕಮ್ ಬ್ಯಾಕ್ ಮಾಡಿದ್ದರು.
ಸದ್ಯಕ್ಕೀಗ ಜಯಂ ರವಿ ಮತ್ತೆ ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿದ್ದಾರೆ. ವೈಯಕ್ತಿಕ ಜೀವನ ಮತ್ತೆ ಹಾದಿಗೆ ಬರುತ್ತಿದ್ದಂತೆ, ಇನ್ನೊಂದು ಕಡೆ ವೈಯಕ್ತಿಕ ಜೀವನ ಹಳಿ ತಪ್ಪಿದೆ. ಜಯಂ ರವಿ ಹಾಗೂ ಆರತಿ ಇಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇದು ಜಯಂ ರವಿ ಅಭಿಮಾನಿಗಳಿಗ್ಯಾಕೋ ಸರಿ ಕಾಣುತ್ತಿಲ್ಲ. ಆದರೆ, ತಮಿಳು ಚಿತ್ರರಂಗದ ವಿವಾದಾತ್ಮಕ ಗಾಯಕಿ ಸುಚಿತ್ರಾ ತಮಿಳು ನಟನ ಪರವಾಗಿ ನಿಂತು ಆರತಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಜಯಂ ರವಿ ಹಾಗೂ ಆರತಿ ಇಬ್ಬರೂ 2009 ರಲ್ಲಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಈ ಜೋಡಿ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ಈಗಾಗಲೇ ಜಯಂ ರವಿ ಜೊತೆ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. 15 ವರ್ಷ ಸಂಸಾರ ಮಾಡಿದ್ದ ಈ ಜೋಡಿ ಈಗ ಬೇರೆಯಾಗಿದೆ. ಅದಕ್ಕೆ ಕಾರಣವೇನು? ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಇತ್ತೀಚೆಗೆ ಆರತಿ ತಮ್ಮ ಇನ್‌ಸ್ಟಾ ಬಯೋದಲ್ಲಿ ಜಯಂ ರವಿ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಅದೇ ಇನ್ನೊಂದು ಕಡೆ ಜಯಂ ರವಿ ಕೂಡ ಹಾಗೇ ಮಾಡಿದ್ದಾರೆ.

ಜಯಂ ರವಿ ಹಾಗೂ ಆರತಿ ವಿಶ್ಛೇದನದ ಸುದ್ದಿ ಹೊರಬೀಳುತ್ತಿದ್ದಂತೆ ವಿವಾದಾತ್ಮಕ ಗಾಯಕಿ ಸುಚಿತ್ರಾ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅದರಲ್ಲಿ ಜಯಂ ರವಿ ಪರ ವಹಿಸಿ ಮಾತಾಡಿದ್ದಾರೆ. "ಜಯಂ ರವಿಗೆ ನನ್ನ ಬೆಂಬಲ. ಆರತಿ ಕೂಡ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಆರತಿ ತುಂಬಾ ಫ್ಯಾನ್ಸಿ ಹುಡುಗಿ. ಆಕೆಯನ್ನು ಖುಷಿಯಾಗಿ ಇಡುವುದಕ್ಕೆ ಜಯಂ ರವಿ ಹಗಲು-ರಾತ್ರಿ ಎನ್ನದೆ ದುಡಿಯಬೇಕು. ಮನೆಗೆ ಹೋದಾಗ ಆರತಿ ಯಾವ ಮನಸ್ಥಿತಿಯಲ್ಲಿರುತ್ತಾರೋ ಹೇಳುವುದಕ್ಕೆ ಅಸಾಧ್ಯ" ಎಂದು ಯೂಟ್ಯೂಬ್ ಚಾನೆಲ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಆರತಿ ಹಾಗೂ ಜಯಂ ರವಿ ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಅವರ ಮುಖವನ್ನು ನೋಡಿಕೊಂಡು ಇಬ್ಬರೂ ಇಷ್ಟು ಬದುಕಿದ್ದಾರೆ ಎಂದು ಸುಚಿ ಲೀಕ್ಸ್ ಖ್ಯಾತಿಯ ಗಾಯಕಿ ಸುಚಿತ್ರಾ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇತ್ತ ಸುಚಿತ್ರಾ ಪ್ರತಿಕ್ರಿಯೆ ನೀಡುತ್ತಿದ್ದಂತೆ, ಅವರು ಹೇಳಿದಂತೆಯೇ ನಡೆದಿದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











