"ತ್ರಿಶಾಗೆ ವಿಜಯ್ ಮೇಲೆ ಲವ್ ಇಲ್ಲ.. ರಾಜಕೀಯ ಮುಖಂಡನ ಮನೆಯ ಸೊಸೆ ಆಗ್ಬೇಕಿತ್ತು"; ಬಾಂಬ್ ಸಿಡಿಸಿದ ಗಾಯಕಿ ಸುಚಿತ್ರಾ

ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಈಗಂತೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವರ ಕೈ ತುಂಬಾ ಸಿನಿಮಾಗಳಿವೆ. ಕಳೆದ ವರ್ಷವಂತೂ ಮೂರು ಸಿನಿಮಾಗಳು ಬಿಡುಗಡೆಯಾಗಿದ್ದವು. 'ತಗ್ ಲೈಫ್', 'ಗುಡ್ ಬ್ಯಾಡ್ ಅಗ್ಲಿ', 'ವಿದಾಮುಯರ್ಚಿ' ಈ ಮೂರು ಸಿನಿಮಾಗಳು ಸೂಪರ್‌ಗಳ ಸಿನಿಮಾಗಳಾಗಿತ್ತು. ಅದರಲ್ಲಿ 'ಗುಡ್ ಬ್ಯಾಡ್ ಅಗ್ಲಿ'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ತ್ರಿಶಾ ಸದ್ಯಕ್ಕೀಗ ಸೂರ್ಯ ಜೊತೆ 'ಕರುಪ್ಪು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ತ್ರಿಶಾ ಸಿನಿಮಾಗಳಲ್ಲಿ ನಟಿಸಿ ಎಷ್ಟು ಹೆಸರು ಮಾಡುತ್ತಿದ್ದಾರೋ ಅಷ್ಟೇ ವಿವಾದಗಳಿಗೂ ಸಿಕ್ಕಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಯಲ್ಲಿ ಪರೋಕ್ಷವಾಗಿ ಇವರ ಹೆಸರನ್ನು ಉಲ್ಲೇಖ ಮಾಡಲಾಗುತ್ತಿದೆ. ಈ ಗ್ಯಾಪ್‌ನಲ್ಲಿ ತಮಿಳಿನ ವಿವಾದಾತ್ಮಕ ಹಿನ್ನೆಲೆ ಗಾಯಕಿ ಸುಚಿತ್ರಾ ನೀಡಿದ ಹೇಳಿಕೆ ಭಾರಿ ಸಂಚಲವನ್ನು ಹುಟ್ಟಾಕಿದೆ.

Controversy singer Suchitra claimed Udhayanidhi Stalin stoped Trisha Marriage here is details

ತ್ರಿಶಾ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಜನಿಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್, ವಿಕ್ರಮ್, ಸಿಂಬು, ಸೂರ್ಯ, ಧನುಷ್, ಜಯಂ ರವಿ ಸೇರಿದಂತೆ ಹಲವು ನಟರೊಂದಿಗೆ ನಟಿಸಿದ್ದಾರೆ. ಕನ್ನಡದಲ್ಲೂ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಹೆಚ್ಚಾಗಿ ನಟಿಸಿರೋ ತ್ರಿಶಾ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

42 ವರ್ಷದ ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಇನ್ನೂ ಇನ್ನೂ ಮದುವೆಯಾಗಿಲ್ಲ. ಆರಂಭದ ದಿನಗಳಲ್ಲಿ ತ್ರಿಶಾ ಹಾಗೂ ರಾಣಾ ದಗ್ಗುಬಾಟಿ ಡೇಟಿಂಗ್ ಮಾಡುತ್ತಿರುವ ಸುದ್ದಿ ಹಬ್ಬಿತ್ತು. ಆದರೆ, ರಾಣಾ ಕುಟುಂಬ ಒಪ್ಪದ ಹಿನ್ನೆಲೆಯಲ್ಲಿ ಆ ಸಂಬಂಧ ಮುರಿದುಬಿದ್ದಿತ್ತು ಅನ್ನೋ ಸುದ್ದಿಯಿದೆ. ಆ ಬಳಿಕ ಉದ್ಯಮಿ ವರುಣ್ ಮಣಿಯನ್ ಜೊತೆ ತ್ರಿಶಾ ನಿಶ್ಚಿತಾರ್ಥ ನಡೆದಿತ್ತು. ಆದರೆ, ಅದು ವಿವಾಹದವರೆಗೆ ತಲುಪಲಿಲ್ಲ. ಅಲ್ಲಿಂದ ಮತ್ತೆ ತ್ರಿಶಾ ಮದುವೆ ಬಗ್ಗೆ ಮಾತಾಡಿಲ್ಲ.

ಇತ್ತೀಚೆಗೆ ಚಿತ್ರರಂಗದಲ್ಲಿ ತ್ರಿಶಾ ಹೆಸರು ಪದೇ ಪದೇ ಚರ್ಚೆಗೆ ಬರುತ್ತಿದೆ. ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ತ್ರಿಶಾ ಪ್ರತಿಕ್ರಿಯೆ ನೀಡಿ, ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದೂ ಇದೆ. ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಯನಾರ್ ನಾಗೇಂದ್ರನ್ ಹೇಳಿಕೆ ಟೀಕೆಗೆ ಗುರಿಯಾಗಿತ್ತು. ಇದೀಗ ಗಾಯಕಿ ಸುಚಿತ್ರಾ ಸಂದರ್ಶನದಲ್ಲಿ ನೀಡಿದ ಹೇಳಿಕೆ ಹೊಸ ಸಂಚಲನ ಮೂಡಿಸಿದೆ.

'ಸಿನಿ ಬಝ್' ಅನ್ನೋ ಯೂಟ್ಯೂಬ್ ಚಾನೆಲ್‌ಗೆ ಸುಚಿತ್ರಾ ಸಂದರ್ಶನ ನೀಡಿದ್ದರು. "ವಿಜಯ್ ತ್ರಿಶಾರನ್ನು ಅತಿಯಾಗಿ ಪ್ರೀತಿಸುತ್ತಿರಬಹುದು. ಆದರೆ, ತ್ರಿಶಾ, ಉದಯನಿಧಿ ಸ್ಟಾಲಿನ್ ಅವರನ್ನೇ ಅನ್ಯೋನ್ಯವಾಗಿ ಪ್ರೀತಿಸುತ್ತಾರೆ. ಅವರು ರಮ್ಯಾ ಕೃಷ್ಣನ್ ಅವರನ್ನೂ ಪ್ರೀತಿಸುತ್ತಾರೆ. ಪುರುಷರಲ್ಲಿ ಉದಯನಿಧಿ, ಮಹಿಳೆಯರಲ್ಲಿ ರಮ್ಯಾ ಕೃಷ್ಣನ್. ಧನುಷ್ ಹೆಸರನ್ನು ತ್ರಿಶಾ ಚೆನ್ನಾಗಿ ಬಳಸಿಕೊಳ್ತಿದ್ದಾರೆ." ಎಂದು ಗಾಯಕಿ ಸುಚಿತ್ರಾ ಹೇಳಿದ್ದಾರೆ.

ಹಾಗೇ "ಅಸಲಿಗೆ ತ್ರಿಶಾ, ಸ್ಟಾಲಿನ್ ಅವರ ಸೊಸೆಯಾಗಬೇಕಿತ್ತು. ಆದರೆ, ನನಗೆ ಗೊತ್ತಿರೊ ಹಾಗೆ ಅವರು ಯಾರನ್ನೂ ಮದುವೆಯಾಗುವುದಿಲ್ಲ. ಅದನ್ನೆಲ್ಲಾ ಮೀರಿದ ಪ್ರೀತಿಯನ್ನು ಅವರು ಮಾಡುತ್ತಾರೆ. ವರುಣ್ ಮಣಿಯನ್ ಅವರೊಂದಿಗೆ ನಡೆಯಬೇಕಿದ್ದ ಮದುವೆ ಉದಯನಿಧಿ ಸ್ಟಾಲಿನ್ ಕಾರಣದಿಂದಲೇ ನಿಂತಿದ್ದು. ಅವರಿಬ್ಬರ ಮದುವೆಯನ್ನು ಉದಯನಿಧಿಗೆ ಸಹಿಸಲಾಗಲಿಲ್ಲ" ಎಂದು ಸುಚಿತ್ರಾ ಹೇಳಿದ್ದಾರೆ.

ತ್ರಿಶಾ ಬಗ್ಗೆ ಸುಚಿತ್ರಾ ಹೇಳಿದ ಮಾತುಗಳು ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಮಿಳು ಚಿತ್ರರಂಗದಲ್ಲಿ ಯಾರೇ ವಿಚ್ಛೇದನ ನೀಡಿದಾಗಲೂ ಸುಚಿತ್ರಾ ಗಂಭೀರ ಆರೋಪಗಳನ್ನು ಮಾಡಿ ಸಂಚಲನ ಸೃಷ್ಟಿಸುತ್ತಾರೆ. ಕೆಲವೊಮ್ಮೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತಾಡುತ್ತಾರೆ. ಇದು ಹಲವರ ನೋವಿಗೆ ಕಾರಣ ಆಗಿದ್ದೂ ಇದೆ. ಈಗ ತ್ರಿಶಾ ಬಗ್ಗೆ ಆಡಿರುವ ಮಾತುಗಳಿಗೆ ತಕ್ಕ ಉತ್ತರ ಸಿಗುತ್ತೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

More from Filmibeat

English summary
Controversy singer Suchitra claimed Udhayanidhi Stalin stoped Trisha Marriage here is details.
Read more about: trisha singer controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X