ಪೊನ್ನಿಯನ್ ಸೆಲ್ವನ್ ವಿವಾದ: ಮಣಿರತ್ನಂ, ವಿಕ್ರಮ್‌ಗೆ ನೋಟಿಸ್!

ಮಣಿರತ್ನಂ ನಿರ್ದೇಶನದ ಬಹುಕೋಟಿ ವೆಚ್ಚದ ಸಿನಿಮಾ 'ಪೊನ್ನಿಯನ್ ಸೆಲ್ವನ್'. 2022ರ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಇದೂ ಕೂಡ ಒಂದು. ಬಹುತಾರಾಗಣವಿರುವ ಈ ಸಿನಿಮಾವೀಗ ವಿವಾದದಲ್ಲಿ ಸಿಕ್ಕಿಕೊಂಡಿದೆ.

ಇತ್ತೀಚೆಗಷ್ಟೇ 'ಪೊನ್ನಿಯನ್ ಸೆಲ್ವನ್' ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಸಿನಿಮಾದ ಟೀಸರ್ ನೋಡಿದ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ಟೀಸರ್ ಈಗ ವಿವಾದಕ್ಕೆ ಸಿಲುಕಿದೆ. ಅಷ್ಟೇ ಅಲ್ಲದೆ ಕೋರ್ಟ್‌ನಲ್ಲಿ ದೂರು ದಾಖಲಾಗಿದ್ದು, ನಿರ್ದೇಶಕ ಮಣಿರತ್ನಂ ಹಾಗೂ ಚಿಯಾನ್ ವಿಕ್ರಮ್‌ಗೆ ಕೋರ್ಟ್ ನೋಟಿಸ್ ಕಳುಹಿಸಿದೆ.

ಮಣಿರತ್ನಂ, ವಿಕ್ರಮ್‌ಗೆ ಕೋರ್ಟ್ ನೋಟಿಸ್ ಯಾಕೆ?

ಪೊನ್ನಿಯನ್ ಸೆಲ್ವನ್ ಚೋಳ ಸಾಮ್ರಾಜ್ಯದ ಕುರಿತು ನಿರ್ಮಾಣವಾಗಿರುವ ಸಿನಿಮಾ. ಚೋಳ ಸಾಮ್ರಾಜ್ಯದ ಉಗಮ ಹಾಗೂ ಎದ್ದು ನಿಂತ ಘಟನೆಗಳನ್ನು ತೆರೆಮೇಲೆ ತರಲು ಮಣಿರತ್ನಂ ಮುಂದಾಗಿದ್ದಾರೆ. ಆದರೆ, ಸಿನಿಮಾದಲ್ಲಿ ಚೋಳರನ್ನು ಇತಿಹಾಸಕ್ಕೆ ವಿರುದ್ಧವಾಗಿ ತೋರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Court Notice To Mani Ratnam And Chiyaan Vikram For Ponniyin Selvan

ಈ ಕಾರಣಕ್ಕೆ ನಿರ್ದೇಶಕ ಮಣಿರತ್ನಂ ಹಾಗೂ ತಮಿಳು ನಟ ಚಿಯಾನ್ ವಿಕ್ರಮ್ ಅವರಿಗೆ ಕೋರ್ಟ್ ನೋಟಿಸ್ ನೀಡಿದೆ. ಟೀಸರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಿನಿಮಾ ವಿವಾದಕ್ಕೆ ಸಿಕ್ಕಿಕೊಂಡಿದ್ದು, ಕೋರ್ಟ್ ನೀಡಿದ ನೋಟಿಸ್‌ಗೆ ಉತ್ತರ ನೀಡಬೇಕಿದೆ.

ಆದಿತ್ಯ ಕರಿಕಾಲನ್ ಹಣೆ ಮೇಲೆ ತಿಲಕವಿಲ್ಲ

'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಆದಿತ್ಯ ಕರಿಕಾಲನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪೋಸ್ಟರ್‌ನಲ್ಲಿ ಕರಿಕಾಲನ್‌ಗೆ ತಿಲಕವಿದೆ. ಅದೇ ಟೀಸರ್‌ನಲ್ಲಿ ತಿಲಕವಿಲ್ಲ. ಹೀಗಾಗಿ ಇತಿಹಾಸವನ್ನು ತಿರುಚಲಾಗಿದೆ ಎಂದು ಸೆಲ್ವನ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಕೋರ್ಟ್ ವಕೀಲರಾಗಿರುವ ಸೆಲ್ವನ್ ಕೋರ್ಟ್ ಮೆಟ್ಟಿಲೇರಿದ್ದಷ್ಟೇ ಅಲ್ಲ. ಚಿತ್ರತಂಡಕ್ಕೆ ವಿಶೇಷ ಪ್ರದರ್ಶನ ಏರ್ಪಡಿಸುವಂತೆ ಒತ್ತಡ ಹೇರಿದ್ದಾರೆ. ಆದರೆ, ಈ ವಿವಾದದ ಬಗ್ಗೆ ನಿರ್ದೇಶಕ ಮಣಿರತ್ನಂ ಆಗಲಿ, ನಟ ಚಿಯಾನ್ ವಿಕ್ರಮ್ ಆಗಲಿ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Court Notice To Mani Ratnam And Chiyaan Vikram For Ponniyin Selvan

ಪ್ಯಾನ್ ಇಂಡಿಯಾ ಸಿನಿಮಾ

'ಪೊನ್ನಿಯನ್ ಸೆಲ್ವನ್' ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸೆಪ್ಟೆಂಬರ್ 30ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಚಿಯಾನ್ ವಿಕ್ರಮ್ ಜೊತೆಗೆ ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ ಹಾಗೂ ಜಯಂ ರವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಶರತ್ ಕುಮಾರ್, ಪ್ರಭು, ಪ್ರಕಾಶ್ ರಾಜ್, ಕಿಶೋರ್, ಅಶ್ವಿನಿ ಕಾಕುಮನು, ಶೋಭಿತಾ ಧುಲಿಫಲ ಹಾಗೂ ಐಶ್ವರ್ಯಾ ಲಕ್ಷ್ಮಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದ್ರೆ ಎ ಆರ್ ರೆಹಮಾನ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

More from Filmibeat

English summary
Court Notice To Mani Ratnam And Chiyaan Vikram For Ponniyin Selvan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X