"ತಮಿಳು ಸಿನಿಮಾದಲ್ಲಿ ಮಾಯಾ ಒಬ್ಬಳೇ ಅಲ್ಲ.. ಬಹಳಷ್ಟು ಲೆಸ್ಬಿಯನ್ ಇದ್ದಾರೆ": ವಿವಾದಾತ್ಮಕ ಹೇಳಿಕೆ ಕೊಟ್ಟ ಬೈಲ್ವಾನ್

ಕನ್ನಡದಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವಂತೆ ತಮಿಳಿನಲ್ಲಿಯೂ ನಡೆಯುತ್ತಿದೆ. ಕಮಲ್ ಹಾಸನ್ ನಿರೂಪಣೆ ಮಾಡುತ್ತಿದ್ದು, 7ನೇ ಸೀಸನ್ ನಡೆಯುತ್ತಿದೆ. ತಮಿಳಿನಲ್ಲೂ ಬಿಗ್ ಬಾಸ್ ಹಲವು ವಿವಾದಗಳನ್ನು ಸೃಷ್ಟಿಸಿದೆ. ಈ ಶೋನಲ್ಲಿ ನಡೆಯುತ್ತಿರುವ ಕೆಲವು ಸಂಗತಿಗಳಿಗೆ ಹೊರಗಿಂದ ಕೆಲವರು ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ತಮಿಳಿನಲ್ಲಿ ಬಿಗ್ ಬಾಸ್ ಸೀಸನ್ 7 ಆರಂಭ ಆದ ದಿನದಿಂದಲೂ ಜಗಳ ನಡೆಯುತ್ತಲೇ ಇದೆ. ಮಾಯಾ ಅನ್ನೋ ಸ್ಪರ್ಧಿ ಬಗ್ಗೆ ಬಿಗ್ ಬಾಸ್ ಮನೆಯಲ್ಲೀಗ ಸದ್ಯಕ್ಕೀಗ ಚರ್ಚೆಯಾಗುತ್ತಿದೆ. ಮಾಯಾ ಮಾತ್ರ ಅಲ್ಲ, ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಲೆಸ್ಬಿಯನ್ಸ್ ಇದ್ದಾರೆ ಎಂದು ತಮಿಳಿನ ವಿವಾದಾತ್ಮಕ ನಟ ಬೈಲ್ವಾನ್ ರಂಗನಾಥನ್ ಶಾಕಿಂಗ್ ಮಾಹಿತಿ ಕೊಟ್ಟಿದಾರೆ.

Critic and actor Bayilvan Ranganathan says there are many lesbians in Tamil cinema

ತಮಿಳಿನ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿ ಮಾಯಾ ತನ್ನದೇ ಒಂದು ತಂಡವನ್ನು ಕಟ್ಟಿಕೊಂಡು ತನಗೆ ಬೇಕಾದಂತೆ ಉಳಿದವರನ್ನು ಆಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ಸಂದರ್ಭದಲ್ಲಿ ವಿವಾದಾತ್ಮಕ ತಮಿಳು ನಟ ಕಮ್ ವಿಮರ್ಶಕ ಬೈಲ್ವಾನ್ ರಂಗನಾಥನ್ ತಮಿಳು ಚಿತ್ರರಂಗದಲ್ಲಿ ಹಲವು ಮಂದಿ ಲೆಸ್ಬಿಯನ್ಸ್ ಇದ್ದಾರೆಂದು ಹೇಳಿದ್ದಾರೆ.

ತಮಿಳು ಬಿಗ್‌ ಬಾಸ್ 7ನಲ್ಲಿ ಏನಿದು ಗಲಾಟೆ?

ತಮಿಳು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸಿರೋ ಮಾಯಾ ಬಗ್ಗೆ ಹಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾಯಾ ಹಾಗೂ ಪೂರ್ಣಿಮಾ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಈ ಹಂತದಲ್ಲಿ ನಾನು ಲೆಸ್ಬಿಯನ್ ಅಂತ ಹೇಳಿಕೊಳ್ಳುವಷ್ಟು ಬೋಲ್ಡ್ ಆಗ್ಬೇಕಿತ್ತು ಅಂತ ಟ್ರಾನ್ಸ್‌ಜೆಂಡರ್ ವೈಶು ಅನ್ನೋರು ಇತ್ತೀಚೆಗೆ ಸಂದರ್ಶನದೊಂದರಲ್ಲಿ ಹೇಳಿಕೊಂಡಿದ್ದರು. ಇಲ್ಲಿಂದ ಮಾಯಾ ಬಗ್ಗೆ ಕಮೆಂಟ್ ಮಾಡೋರ ಸಂಖ್ಯೆ ಹೆಚ್ಚಾಗಿದೆ.

ಸ್ಪರ್ಧಿ ಮಾಯಾ ಲೆಸ್ಬಿಯನ್ ?

ತಮಿಳು ಬಿಗ್ ಬಾಸ್ 7 ಸ್ಪರ್ಧಿಯಾಗಿರೋ ಮಾಯಾ ಬಗ್ಗೆ ಕೆಲ ನಟಿಯರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾಗಿ ವರದಿಯಾಗಿದೆ. ಮೂವರು ನಟಿಯರು ಮಾಯಾ ಲೆಸ್ಬಿಯನ್ ಅಂತ ಹೇಳಿದ್ದಾರೆಂದು ವರದಿಗಳಾಗಿವೆ. ಮಾಯಾ ಟ್ರಾನ್ಸ್‌ಜೆಂಡರ್ ಅಲ್ಲದೆ ಹೋದರೂ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಆಕೆಗೆ ಪುರುಷರು ಇಷ್ಟ ಆಗುವುದಿಲ್ಲ ಎಂದು ಕೆಲವರು ಚರ್ಚೆ ಮಾಡುತ್ತಿರುವ ಬೆನ್ನಲ್ಲೇ ಬೈಲ್ವಾನ್ ರಂಗನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.

"ತಮಿಳು ಚಿತ್ರರಂಗದಲ್ಲಿ ಲೆಸ್ಬಿಯನ್ಸ್ ಇದ್ದಾರೆ"

ಸದಾ ವಿವಾದಾತ್ಮಕ ಸಂಗತಿಗಳಿಂದಲೇ ಚರ್ಚೆಯಲ್ಲಿರೋ ಬೈಲ್ವಾನ್ ರಂಗನಾಥನ್ ಮತ್ತೊಂದು ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆನೂ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಮಿಳು ಚಿತ್ರರಂಗದಲ್ಲಿ ಮಾಯಾ ಅಷ್ಟೇ ಅಲ್ಲ. ಹಲವು ಮಂದಿ ಲೆಸ್ಬಿಯನ್ಸ್ ಇದ್ದಾರೆ. ಅದು ಅವರ ವೈಯಕ್ತಿಕ. ಹಾಗಾಗಿ ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಬೈಲ್ವಾನ್ ರಂಗನಾಥ್ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ಬಿಗ್ ಬಾಸ್ ಜನಪ್ರಿಯತೆ ಕಡಿಮೆ ಆಗಿದೆ

ತಮಿಳು ಬಿಗ್ ಬಾಸ್‌ನಲ್ಲೂ ಜಗಳ, ಕಿತ್ತಾಟ, ವಿವಾದಗಳೇ ಹೆಚ್ಚಾಗಿದೆ. ಹೀಗಾಗಿ ಬೈಲ್ವಾನ್ ರಂಗನಾಥನ್ ಈ ಬಾರಿಯ ತಮಿಳು ಬಿಗ್ ಬಾಸ್ ಗುಣಮಟ್ಟವನ್ನು ಕಳೆದುಕೊಂಡಿದೆ. ಹಿಂದೆಲ್ಲ ಓಪನ್ ಆಗಿ ಸ್ಪರ್ಧಿಗಳಿಗೆ ವೋಟ್ ಹಾಕುತ್ತಿದ್ದರು. ಆದ್ರೀಗ ಅದು ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಕಮಲ್ ಹಾಸನ್ ಚಾರ್ಮ್ ಕೂಡ ನಡೆಯುತ್ತಿಲ್ಲ ಎಂದಿದ್ದಾರೆ.

More from Filmibeat

English summary
Tamil Bigg Boss Maya issue: There are many lesbians in Tamil cinema
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X