D 50: ತಿರುಪತಿಯಲ್ಲಿ 'ಮುಡಿ' ಕೊಟ್ಟಾಗ ಮೂಡಿದ್ದ ಅನುಮಾನ ನಿಜವಾಯ್ತು.. ಮೊಟ್ಟೆ ಲುಕ್‌ನಲ್ಲಿ ಕಿಕ್ ಕೊಟ್ಟ ಧನುಷ್!

ತಮಿಳು ಚಿತ್ರರಂಗದಲ್ಲಿ ಧನುಷ್ ಡಿಫ್ರೆಂಟ್. ಎಲ್ಲರೂ ಒಂದು ದಾರಿ ಹಿಡಿದರೆ, ಧನುಷ್ ಇನ್ನೊಂದು ದಾರಿ ಹಿಡಿಯುತ್ತಾರೆ. ಇದು ಈಗಾಗಲೇ ಪ್ರೂವ್ ಕೂಡ ಆಗಿದೆ. ಮೊದಲಿನಿಂದಲೂ ಧನುಷ್ ಕಂಟೆಂಟ್ ಇರುವ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸಿದ್ದಾರೆ. ಅದಕ್ಕೆ ಪ್ರೇಕ್ಷಕರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಧನುಷ್ ಕೇವಲ ನಟನಷ್ಟೇ ಅಲ್ಲ. ಸಿಂಗರ್, ಗೀತರಚನೆಗಾರ, ನಿರ್ಮಾಪಕ ಕಡೆಗೆ ನಿರ್ದೇಶಕನೂ ಹೌದು. ಇಷ್ಟೊಂದು ಪ್ರತಿಭೆಯನ್ನು ಹೊಂದಿರೋ ನಟನ ಸಿನಿಮಾಗಳ ಸಕ್ಸಸ್ ರೇಟ್ ಕೂಡ ಉತ್ತಮವಾಗೇ ಇದೆ. ತಮಿಳು ಜೊತೆ ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲೂ ತಮ್ಮ ಪ್ರತಿಭೆ ತೋರಿಸಿದ್ದಾರೆ.

Dhanush-D50

ಈಗ ತನ್ನ ವೃತ್ತಿ ಬದುಕಿನ ಮತ್ತೊಂದು ಮೈಲಿಗಲ್ಲನ್ನು ತಲುಪಿದ್ದಾರೆ. ಸದ್ಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಮುಗಿಸಿರೋ ಧನುಷ್ ತಮ್ಮ 50ನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾ ಬಗ್ಗೆನೇ ಅವರ ಅಭಿಮಾನಿಗಳು ಕಾದು ಕೂತಿದ್ದರು.

ಮುಡಿ ಕೊಟ್ಟ ಅನುಮಾನ ನಿಜವಾಯ್ತು

ಇತ್ತೀಚೆಗೆ ಧನುಷ್ ತಮ್ಮ ಮಕ್ಕಳು ಹಾಗೂ ಕುಟುಂಬದೊಂದಿಗೆ ತಿರುಪತಿಗೆ ತೆರಳಿದ್ದರು. ತಿಮ್ಮಪ್ಪನ ಸನ್ನಿಧಾನದಲ್ಲಿ ಮುಡಿ ಕೊಟ್ಟು ಆಶೀರ್ವಾದ ಪಡೆದು ಬಂದಿದ್ದರು. ಆಗಲೇ ಅವರ ಅಭಿಮಾನಿಗಳಿಗೆ ಇಂತಹದ್ದೊಂದು ಅನುಮಾನ ಮೂಡಿತ್ತು. ಇದು 'D 50' ಸಿನಿಮಾದ ಗೆಟಪ್ ಇರಬಹುದು ಎಂದು ಕಮೆಂಟ್ ಮಾಡಿದ್ದರು.

ಮುಡಿಕೊಟ್ಟ ಬಳಿಕ ಧನುಷ್ ಗೆಟಪ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲವೇ ದಿನಗಳ ಹಿಂದಷ್ಟೇ ರಿಲೀಸ್ ಮಾಡಿದ್ದ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಫಸ್ಟ್ ಲುಕ್ ಕೂಡ ಇಷ್ಟೊಂದು ಸದ್ದು ಮಾಡಿರಲಿಲ್ಲ. ಆದ್ರೀಗ ಅಭಿಮಾನಿಗಳು ಅಂದುಕೊಂಡಂತೆ ತಲೆ ಬೋಳಿಸಿಕೊಂಡ ಲುಕ್‌ನಲ್ಲಿ 50ನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.

ಮೊಟ್ಟೆ ಲುಕ್‌ನಲ್ಲಿ ಶಾಕ್.. ಟೈಟಲ್ ಏನು?

ಧನುಷ್ 50ನೇ ಸಿನಿಮಾವನ್ನು ಯಾರು ನಿರ್ಮಾಣ ಮಾಡುತ್ತಾರೆ ಅನ್ನೋ ಗೊಂದಲಕ್ಕೆ ತೆರೆಬಿದ್ದಿದೆ. ಸನ್ ಪಿಕ್ಚರ್ಸ್ ಈ ಸಿನಿಮಾಗೆ ಹಣ ಹೂಡುತ್ತಿದ್ದಾರೆ. ವಿಶೇಷ ಅಂದ್ರೆ, ತಮ್ಮ 50ನೇ ಸಿನಿಮಾಗೆ ಸ್ವತ: ಧನುಷ್ ಅವರೇ ಆಕ್ಷನ್ ಕಟ್ ಹೇಳಲಿದ್ದಾರೆ. ಇದೊಂದು ಚೆನ್ನೈನಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಡ್ರಾಮ ಹಿನ್ನೆಲೆಯುಳ್ಳ ಸಿನಿಮಾ ಎನ್ನಲಾಗುತ್ತಿದೆ.

ಕಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಧನುಷ್ 50ನೇ ಸಿನಿಮಾ 'ರಾಯನ್' ಅನ್ನೋ ಟೈಟಲ್ ಫಿಕ್ಸ್ ಆಗಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಧನುಷ್ ಅಣ್ಣನಾಗಿ ಎಸ್.ಜೆ.ಸೂರ್ಯ ಹಾಗೂ ಕಿರಿಯನಾಗಿ ಸಂದೀಪ್ ಕಿಶನ್ ನಟಿಸಲಿದ್ದಾರೆಂಬ ಸುದ್ದಿಯಿದೆ.

ಧನುಷ್ ಬ್ಯಾಕ್ ಟು ಬ್ಯಾಕ್ ಸಿನಿಮಾ

'ಡಿ 50' ಸಿನಿಮಾ ಅನೌನ್ಸ್ ಆಗಿದೆ. ಆದರೆ, ಈ ಸಿನಿಮಾಗೂ ಮುನ್ನ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್ ಆಗುತ್ತಿದೆ. 2023ರಲ್ಲಿ ಡಿಸೆಂಬರ್ ಹೊತ್ತಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಹಾಗೇ ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರೈ ನಿರ್ದೇಶನದ 'ತೇರೆ ಇಷ್ಕ್ ಮೇ' ಸಿನಿಮಾ ಅನೌನ್ಸ್ ಆಗಿದೆ. ಇದು 2024ಕ್ಕೆ ರಿಲೀಸ್ ಆಗುತ್ತಿದೆ.

ಇದರೊಂದಿಗೆ ಶೇಖರ್ ಕಮ್ಮುಲ ನಿರ್ದೇಶನದ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ, ವೆಟ್ರಿಮಾರನ್ ನಿರ್ದೇಶನದಲ್ಲಿ ಧನುಷ್ ಎರಡು ಸಿನಿಮಾ ಮಾಡಬೇಕಿದೆ. ಅಣ್ಣ ಸೆಲ್ವ ರಾಘವನ್ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗೆ ಕೈ ತುಂಬಾ ಸಿನಿಮಾಗಳಿರೋ ನಟ ಧನುಷ್ 50ನೇ ಸಿನಿಮಾಗೆ ಅವರೇ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ.

More from Filmibeat

English summary
Dhanush 50th movie Announced it is his second directorial produced by sun pictures, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X