"ನಮ್ಮ ಸೊಸೆಗೆ ಫ್ಯಾಮಿಲಿ ಸೆಟ್ ಆಗಲಿಲ್ಲ"; ಮಾಜಿ ಸೊಸೆ ಬಗ್ಗೆ ಧನುಷ್ ತಂದೆ ಕಸ್ತೂರಿ ರಾಜ ಕಾಮೆಂಟ್

ತಮಿಳಿನ ಟಾಪ್ ನಟರಲ್ಲಿ ಧನುಷ್ ಕೂಡ ಒಬ್ಬರು. ಹಾಗೇ ವಿವಾದದಲ್ಲೂ ಅವರೇ ಟಾಪ್. ತಿಂಗಳಿಗೆ ಒಮ್ಮೆಯಾದರೂ ಧನುಷ್ ಏನಾದರೂ ಒಂದು ಮ್ಯಾಟರ್ ಹೊರ ಬರುತ್ತಲೇ ಇರುತ್ತೆ. ಇಲ್ಲವೇ, ಚಿತ್ರರಂಗದಿಂದ ಯಾರಾದರೂ ಒಬ್ಬರು ಧನುಷ್ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಸ್ಟಾರ್ ನಟನ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ.

ಧನುಷ್ ಪತ್ನಿ ಐಶ್ವರ್ಯಾ ರಜನಿಕಾಂತ್‌ರಿಂದ ವಿಚ್ಛೇದನ ಪಡೆದು ಬೇರೆ ವಾಸ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಇಬ್ಬರ ಸಂಸಾರದಲ್ಲಿ ಕಲಹಗಳು ನಡೆಯುತ್ತಲೇ ಇದ್ದವು ಅನ್ನೋ ಸುದ್ದಿ ಓಡಾಡಿತ್ತು. ನಿರೀಕ್ಷೆಯಂತೆ ಇಬ್ಬರೂ ಒಟ್ಟಿಗೆ ಮುಂದೆ ಬಂದು ಬೇರೆಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಹೀಗೆ ವೈಯಕ್ತಿಕ ಕಾರಣಕ್ಕೋ, ಇಲ್ಲ ಸಿನಿಮಾ ವಿಚಾರಕ್ಕೋ ಧನುಷ್ ಹೆಸರು ಸದ್ದು ಮಾಡುತ್ತಲೇ ಇರುತ್ತೆ.

Dhanush father Kasthuri Raja controversial statement about his daughter-in-law

ಈಗ ಧನುಷ್ ತಂದೆ ಕಸ್ತೂರಿ ರಾಜ ಸರದಿ. ಕಸ್ತೂರಿ ರಾಜ ಈ ಹಿಂದೆ ನೀಡಿದ ಸಂದರ್ಶವೊಂದು ಟ್ರೆಂಡಿಂಗ್‌ನಲ್ಲಿದೆ. ಆ ಸಂದರ್ಶನದಲ್ಲಿ ತನ್ನ ಮಾಜಿ ಸೊಸೆಯ ಬಗ್ಗೆ ಕಸ್ತೂರಿ ರಾಜ ಓಪನ್ ಆಗಿ ಮಾತಾಡಿದ್ದಾರೆ. ಮಾಜಿ ಸೊಸೆಯ ಬಗ್ಗೆ ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಸ್ತೂರಿ ರಾಜ ತಮ್ಮ ಮಾಜಿ ಸೊಸೆ ಬಗ್ಗೆ ಆಡಿದ ಮಾತಿಗೆ ಪರ ವಿರೋಧ ಚರ್ಚೆ ಮಾಡುತ್ತಿದ್ದಾರೆ.

ಹಳೆಯ ಸಂದರ್ಶನದಲ್ಲಿ ಕಸ್ತೂರಿ ರಾಜ ತನ್ನ ಮಕ್ಕಳ ಬಗ್ಗೆ ಮಾತಾಡುತ್ತಿದ್ದರು. ತನ್ನ ನಾಲ್ಕು ಮಕ್ಕಳು ಸ್ವಭಾವತ: ಹೇಗೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಹಿರಿಯ ಮಗಳು ಆರಾಮಾಗಿ ಎಲ್ಲರೊಂದಿಗೂ ಅಡ್ಜೆಸ್ಟ್ ಆಗಿಬಿಡುತ್ತಾರೆ. ಇನ್ನು ಎರಡನೇ ಮಗಳು, ಮೊದಲ ಪುತ್ರ ಸೆಲ್ವ ರಾಘವನ್ ಹಾಗೂ ಧನುಷ್ ಬಗ್ಗೆನೂ ಮಾತಾಡುತ್ತಿದ್ದರು. ಈ ಸಂದರ್ಭದಲ್ಲಿ ನನ್ನ ಸೊಸೆಗೆ ಫ್ಯಾಮಿಲಿಯಲ್ಲಿ ಮಾತನಾಡುವ ಭಾಷೆ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಸೊಸೆಗೆ ನಮ್ಮ ಕುಟುಂಬ ಸೆಟ್ ಆಗಲಿಲ್ಲ ಎಂದು ಹೇಳಿಕೊಟ್ಟಿದ್ದಾರೆ.

Dhanush father Kasthuri Raja controversial statement about his daughter-in-law

ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸೊಸೆ ಅಂದರೆ ಯಾರು? ಎಂದು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಕಸ್ತೂರಿ ರಾಜ ಅವರ ಮೊದಲನೇ ಪುತ್ರ ಸೆಲ್ವ ರಾಘವನ್ ಕೂಡ ಚಿತ್ರರಂಗದಲ್ಲಿ ಜನಪ್ರಿಯ ನಿರ್ದೇಶಕ. ಇವರು ಕೂಡ ನಟಿ ಸೋನಿಯಾ ಅಗರ್ವಾಲ್ ಅವರನ್ನು ವಿವಾಹವಾಗಿದ್ದರು. ಬಳಿಕ ಇಬ್ಬರೂ ವಿಚ್ಛೇದನ ನೀಡುವ ಮೂಲಕ ಬೇರೆಯಾದರು. ಹೀಗಾಗಿ ಇದು ಸೌಂದರ್ಯಾ ರಜನಿಕಾಂತ್ ಬಗ್ಗೆ ಅಲ್ಲ ಸೋನಿಯಾ ಅಗರ್ವಾಲ್‌ ಬಗ್ಗೆನೇ ಅನ್ನೋ ಚರ್ಚೆಯಾಗುತ್ತಿದೆ.

ಸೋನಿಯಾ ಅಗರ್ವಾಲ್‌ಗೆ ತಮಿಳು ಭಾಷೆ ಸರಿಯಾಗಿ ಮಾತಾಡುವುದಕ್ಕೆ ಬರುತ್ತಿರಲಿಲ್ಲ. ಆದರೆ, ಧನುಷ್ ಮದುವೆ ಆಗಿದ್ದ ಐಶ್ವರ್ಯಾ ರಜನಿಕಾಂತ್ ಹುಟ್ಟಿ ಬೆಳೆದಿದ್ದೆಲ್ಲ ತಮಿಳುನಾಡಿನಲ್ಲೇ. ಅವರಿಗೆ ತಮಿಳು ಮಾತಾಡುವುದಕ್ಕೆ ಚೆನ್ನಾಗಿಯೇ ಬರುತ್ತೆ. ಈ ಕಾರಣಕ್ಕೆ ಕಸ್ತೂರಿ ರಾಜ ಹೇಳಿದ್ದು ಸೆಲ್ವರಾಘವನ್ ಮಾಜಿ ಪತ್ನಿ ಸೋನಿಯಾ ಬಗ್ಗೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಸದ್ಯ ಧನುಷ್ ನಟಿಸಿದ 'ರಾಯನ್' ಸಿನಿಮಾ ರಿಲೀಸ್ ಆಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ ಎನ್ನಲಾಗಿದೆ. ಒಂದ್ಕಡೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದರೂ, ಧನುಷ್ ಮೇಲೆ ನಿರ್ಮಾಪಕರು ಕೋಪಗೊಂಡಿದ್ದಾರೆ. ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಸರಿಯಾಗಿ ಡೇಟ್‌ಗಳನ್ನು ಕೊಡುವುದಿಲ್ಲ ಅಂತ ಗಂಭೀರ ಆರೋಪ ಮಾಡುತ್ತಿದ್ದಾರೆ.

More from Filmibeat

English summary
Dhanush father Kasthuri Raja controversial statement about his daughter-in-law
Read more about: dhanush kollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X