ಧನುಷ್ ಸಿನಿಮಾದಲ್ಲಿ ಹೀರೊ ಆಗಿದ್ದ ನಟನೀಗ ಟ್ಯಾಕ್ಸಿ ಡ್ರೈವರ್: ಫೋಟೊ ವೈರಲ್.. ಏನಿದು ಸುದ್ದಿ?

ತಮಿಳು ನಟ ಧನುಷ್ ಯಾರಿಗೆ ಗೊತ್ತಿಲ್ಲ ಹೇಳಿ. ಕೇವಲ ತಮಿಳಿಗರಿಗಷ್ಟೇ ಅಲ್ಲ. ಇಡೀ ಭಾರತಕ್ಕೆ ಧನುಷ್ ಸಿನಿಮಾಗಳ ಪರಿಚಯವಿದೆ. ಆದರೆ, ಧನುಷ್ ಸಿನಿಮಾ ಜರ್ನಿ ಆರಂಭ ಮಾಡುವಾಗಲೇ ಮತ್ತೊಬ್ಬ ನಟನೂ ಕರಿಯರ್ ಶುರು ಮಾಡಿದ್ದರು. ಆದ್ರೀಗ ಆ ನಟ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಧನುಷ್‌ಗೆ ಕರಿಯರ್‌ ಬೂಸ್ಟ್ ಕೊಟ್ಟ ಸಿನಿಮಾ 'ಕಾದಲ್ ಕೊಂಡೈನ್'. ಅಣ್ಣನೇ ನಿರ್ದೇಶಿಸಿದ ಈ ಸಿನಿಮಾದಿಂದ ಧನುಷ್ ಅದೃಷ್ಟವೇ ಬದಲಾಗಿತ್ತು. ವಿಚಿತ್ರ ಅಂದರೆ, ಈ ಸಿನಿಮಾ ಧನುಷ್ ವಿಲನ್. ಇದೇ ಸಿನಿಮಾದಲ್ಲಿ ಹೀರೊ ಆಗಿ ನಟಿಸಿದ್ದು ಸುದೀಪ್ ಸಾರಂಗಿ. ಆದರೆ, ಅದೃಷ್ಟ ಮಾತ್ರ ಧನುಷ್ ಪಾಲಾಗಿತ್ತು.

Dhanush Movie Kaadhal Kondein co-star Sudeep Sarangi is now taxi driver, here is truth

'ಕಾದಲ್ ಕೊಂಡೈನ್' ಸಿನಿಮಾದಲ್ಲಿ ಆದಿ ಕೇಸವನ್ ಪಾತ್ರದಲ್ಲಿ ನಟಿಸಿದ್ದ ಸುದೀಪ್ ಸಾರಂಗಿ ಎಲ್ಲಿಗೆ ಹೋದ್ರು? ಈಗೇನು ಮಾಡುತ್ತಿದ್ದಾರೆ? ಈ ಪ್ರಶ್ನೆ ಹುಟ್ಟೋದು ಸಹಜ. ಸದ್ಯ ಇದೇ ನಟನ ಫೋಟೊವೊಂದು ವೈರಲ್ ಆಗುತ್ತಿದೆ. ಒಂದು ಕಾಲದಲ್ಲಿ ಧನುಷ್‌ ಸಿನಿಮಾ ಹೀರೊ ಆಗಿದ್ದ ನಟನೀಗ ಟ್ಯಾಕ್‌ ಡ್ರೈವರ್ ಆಗಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಂದು ವಿಲನ್.. ಇಂದು ಹೀರೊ

'ಕಾದಲ್ ಕೊಂಡೈನ್' ಸಿನಿಮಾ ಹಲವರ ಬದುಕು ಬದಲಿಸಿತ್ತು. ಖಳನಾಯಕನಾಗಿ ನಟಿಸಿದ್ದ ಧನುಷ್, ನಾಯಕಿ ಸೋನಿಯಾ ಅಗರ್ವಾಲ್ ಹಾಗೂ ನಿರ್ದೇಶಕ ಸೆಲ್ವರಾಘವನ್. ಈ ಮೂವರು ಇಂದಿಗೂ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದಾರೆ. ಕೆಲವು ದಿನ ಸೋನಿಯಾ ಅಗರ್ವಾಲ್ ಸೈಲೆಂಟ್ ಆಗಿದ್ದರೂ, ಈ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ.

ಆದರೆ, ಇದೇ ಸಿನಿಮಾದಲ್ಲಿ ಹೀರೊ ಆಗಿ ಮಿಂಚಿದ್ದ ಸುದೀಪ್ ಸಾರಂಗಿಗೆ ಮಾತ್ರ ಸಿನಿಮಾರಂಗ ಕೈ ಹಿಡಿಯಲಿಲ್ಲ. ಹೀರೊ ಆಗಿ ನಟಿಸಿದ್ದ ಸುದೀಪ್ ದಿಢೀರನೇ ಕಣ್ಮರೆಯಾಗಿಬಿಟ್ಟರು. ಈಗ ಅವರ ಟ್ಯಾಕ್ಸಿ ಡ್ರೈವರ್ ಗೆಟಪ್‌ನಲ್ಲಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

Dhanush Movie Kaadhal Kondein co-star Sudeep Sarangi is now taxi driver, here is truth

ಸುದೀಪ್ ಈಗ ಟ್ರ್ಯಾಕ್ ಡ್ರೈವರ್ ಆಗಿದ್ದಾರಾ?

ತಮಿಳು ಚಿತ್ರರಂಗದಲ್ಲಿ ಸುದೀಪ್ ಸಾರಂಗಿಗೆ ಅದ್ಭುತ ಸಕ್ಸಸ್ ಸಿಕ್ಕಿಲ್ಲ. 'ಕಾದಲ್ ಕೊಂಡೈನ್' ಬಳಿಕ ಹಲವು ತಮಿಳು, ಬೆಂಗಾಲಿ ಹಾಗೂ ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರು. ಆದರೂ. ಸಕ್ಸಸ್ ಸಿಕ್ಕಿಲ್ಲ. ಈಗ ಸುದೀಪ್ ಟ್ಯಾಕ್ಸಿ ಡ್ರೈವರ್ ಸಮವಸ್ತ್ರದಲ್ಲಿ ಮತ್ತೆ ಪ್ರತ್ಯಕ್ಷ ಆಗಿದ್ದಾರೆ.

ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಸಿನಿಪ್ರಿಯರು 'ಕಾದಲ್ ಕೊಂಡೈನ್' ಹೀರೊ ಟ್ಯಾಕ್ಸಿ ಡ್ರೈವರ್ ಆಗಿದ್ದಾರೆ ಅಂತಲೇ ನಂಬಿದ್ದಾರೆ. ಸಿನಿಮಾದಲ್ಲಿ ಅವಕಾಶ ಇಲ್ಲದೆ ಟ್ಯಾಕ್ಸಿ ಓಡಿಸುತ್ತಿದ್ದಾರೆ ಅಂತೆಲ್ಲ ಸುದ್ದಿ ಹಬ್ಬಿದೆ. ಆದರೆ, ಮ್ಯಾಟರ್ ಬೇರೆನೇ ಇದೆ.

ನಿಜಕ್ಕೂ ಟ್ಯಾಕ್ಸ್ ಡ್ರೈವರ್ ಆಗಿದ್ದಾರಾ?

ಸುದೀಪ್ ಸಾರಂಗಿ ನಿಜಕ್ಕೂ ಟ್ಯಾಕ್ಸಿ ಡ್ರೈವರ್ ಆಗಿ ಬದುಕು ಸಾಗಿಸುತ್ತಿದ್ದಾರಾ? ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ಅಸಲಿ ಸತ್ಯ ಹೊರಬಿದ್ದಿದೆ. ಸುದೀಪ್ ಸಾರಂಗಿ ಖಾಕಿ ಯೂನಿಫಾರಂ ತೊಟ್ಟಿರೋದು ಬ್ಯಾಂಕ್‌ ಜಾಹೀರಾತಿಗಾಗಿ ಎಂದು ಅವರೇ ಹೇಳಿದ್ದಾರೆ.

Dhanush Movie Kaadhal Kondein co-star Sudeep Sarangi is now taxi driver, here is truth

ಅಲ್ಲದೆ ಅವರು ತಮ್ಮ ಜೀವನದಲ್ಲಿ ಖುಷಿಯಾಗಿದ್ದು, ಕೆಲವು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ತಮ್ಮ ಬದುಕಿನಲ್ಲಿ ಯಾವುದೇ ಸಂಕಷ್ಟವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೂ, ನಟ ಧನುಷ್ ಸಿಕ್ಕ ಯಶಸ್ಸು ಸುದೀಪ್ ಸಾರಂಗಿಗೆ ಮಾತ್ರ ಸಿಕ್ಕಿಲ್ಲ.

More from Filmibeat

English summary
Dhanush Movie Kaadhal Kondein co-star Sudeep Sarangi is now taxi driver, here is truth, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X