"ಗುರುತು ಹಿಡಿಯೋಕೆ ಆಗ್ತಿಲ್ಲ.. ಬಾಬಾ ರಾಮ್‌ದೇವ್ ಇದು ನೀವೇನಾ?": ನೆಟ್ಟಿಗರ ಗೊಂದಲವೇನು?

ಸೋಶಿಯಲ್ ಮೀಡಿಯಾದಲ್ಲಿ ಬೆಳಗ್ಗೆಯಿಂದ ಒಂದೆರಡು ಫೋಟೊಗಳು ಹರಿದಾಡುತ್ತಿದ್ದವು. ಆ ಫೋಟೊಗಳನ್ನು ನೋಡಿದವರು ಒಮ್ಮೆ ಶಾಕ್ ಹಾಗಿದ್ದು ನಿಜ. ಯೋಗಗುರು ಬಾಬಾ ರಾಮ್ ದೇವ್ ಅವರ ಸ್ವಲ್ಪ ಪರಿಚಯವಿದ್ದರೂ ಒಮ್ಮೆ ಶಾಕ್ ಆಗಿದ್ದು ನಿಜ.

ಸದಾ ಕೇಸರಿ ಬಣ್ಣದ ವಸ್ತ್ರದಲ್ಲಿಯೇ ಕಾಣಿಸಿಕೊಳ್ಳುವ ಬಾಬಾ ರಾಮ್ ದೇವ್ ಅದ್ಯಾಕೆ ವೆಸ್ಟರ್ನ್ ಲುಕ್ ಕೊಟ್ಟು ಬಿಟ್ರಾ? ಅಂತ ಒಮ್ಮೆ ತಮ್ಮ ಕಣ್ಣುಗಳನ್ನು ತಾವೇ ನಂಬದಾದರು. ಸೂಕ್ಷ್ಮವಾಗಿ ಗಮನಿಸಿದ್ದಾಗ, ಇದು ಬಾಬಾ ರಾಮ್‌ ದೇವ್ ಅಲ್ಲ ಕಾಲಿವುಡ್‌ ನಟ ಧನುಷ್ ಅನ್ನೋದು ಅರಿಗೆ ಬಂತು.

Dhanush new look for Captain Miller Fans Says Looks Like Baba Ramdev

ಏನಿದು, ಧನುಷ್ ಅಂತ ಗುರುತು ಹಿಡಿಯೋಕೆ ಆಗಲ್ವಾ? ಅಂತ ಪ್ರಶ್ನೆ ಮಾಡುವುದೇನೋ ಸಹಜ. ಆದರೆ, ಈ ಗೊಂದಲಕ್ಕೆ ಬಿದ್ದಿದ್ದು ಉತ್ತರ ಭಾರತದ ಮಂದಿ. ಧನುಷ್ ಮುಂಬೈ ಏರ್‌ಪೋರ್ಟ್‌ಗೆ ಇಳಿದಾಗ, ಅವರ ಗೆಟಪ್ ನೋಡಿ ಒಂದು ಕ್ಷಣ ಯಾಮಾರಿಬಿಟ್ಟಿದ್ದಾರೆ.

ಬಾಬಾ ರಾಮ್ ದೇವ್ ಲುಕ್ ಕೊಟ್ರಾ ಧನುಷ್?

ಇತ್ತೀಚೆಗೆ ಧನುಷ್ ಗೆಟಪ್ ಬದಲಾಗಿದೆ. ಉದ್ದ ಗಡ್ಡ ಬಿಟ್ಟು ಸನ್ಯಾಸಿಯ ಹಾಗೇ ಕಾಣಿಸುತ್ತಿದ್ದಾರೆ. ಇದು ಅವರ ಮುಂದಿನ ಸಿನಿಮಾಗೆ ಅನ್ನೋದು ಗೊತ್ತಿದೆ. ದಿಢೀರನೇ ಹೀಗೆ ಗಡ್ಡ ಬಿಟ್ಟು ಪಕ್ಕಾ ವೆಸ್ಟರ್ನ್ ಸ್ಟೈಲ್‌ನಲ್ಲಿ ಬಾಬಾ ರಾಮ್‌ದೇವ್ ಲುಕ್ ಕೊಟ್ಟು ಬಿಟ್ಟಿದ್ದಾರೆ. ಈ ಗೆಟಪ್ ನೋಡಿ ನೆಟ್ಟಿಗರು ಒಮ್ಮೆ ಶಾಕ್ ಆಗಿದ್ದಾರೆ.

ತಿಳಿ ನೇರಳೆ ಬಣ್ಣದ ಟಿ ಶರ್ಟ್, ನೀಲಿ ಪ್ಯಾಂಟ್, ಕೂಲಿಂಗ್ ಗ್ಲಾಸ್ ತೊಟ್ಟು ನೇರವಾಗಿ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇವನ್ನು ನೋಡುತ್ತಿದ್ದಂತೆ ತಲೆಕೆಡಿಸಿಕೊಂಡ ಪಾಪರಾಜಿಗಳು ಕ್ಯಾಮರಾ ಹಿಡಿದು ಕ್ಲಿಕ್ಕಿಸಿದ್ದಾರೆ. ಅವೇ ಫೋಟೊಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಧನುಷ್ ಗೆಟಪ್‌ ನೋಡಿ ಕಮೆಂಟ್

ಉದ್ದುದ್ದ ಮೀಸೆ, ಉದ್ದುದ್ದ ಗಡ್ಡ ಬಿಟ್ಟಿರೋ ಧನುಷ್ ಟ್ರೆಂಡ್ ಆಗಿದ್ದಾರೆ. ಧನುಷ್ ಹೊಸ ಗೆಟಪ್ ನೋಡಿ ನೆಟ್ಟಿಗರಿಗೆ ಪಕ್ಕಾ ಬಾಬಾ ರಾಮ್‌ದೇವ್ ಕಂಡಂತೆ ಕಂಡಿದ್ದಾರೆ. ಅದಕ್ಕೆ ಹಲವರು ನೀವು ನಿಜಕ್ಕೂ ಬಾಬಾ ರಾಮ್‌ದೇವ್ ಅವರೇನಾ? ಅಂತೆಲ್ಲಾ ಕಮೆಂಟ್ ಮಾಡಿತ್ತಿದ್ದಾರೆ.

ಒಬ್ಬರು "ನಾನು ಇವರನ್ನು ಬಾಬಾ ರಾಮ್‌ದೇವ್ ಅಂತ ಭಾವಿಸಿದ್ದೆ. ವೆಸ್ಟರ್ನ್ ಡ್ರೆಸ್ ಹಾಕೊಂಡು ಬಂದಿದ್ದಾರೆ ಅಂದುಕೊಂಡೆ" ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಈ ಅವತಾರದಲ್ಲಿ ಜನರು ಇವರನ್ನು ಹೇಗೆ ಗುರುತಿಸುತ್ತಾರೆ.. ಸಂಪೂರ್ಣವಾಗಿ ಇವರನ್ನು ಗುರುತಿಸಲು ಸಾಧ್ಯವೇ ಇಲ್ಲ" ಎಂದು ಹೇಳಿದ್ದಾರೆ. ಮತ್ತೊಬ್ಬರು " ಬಾಬಾ ರಾಮ್‌ದೇವ್ ಇದು ನೀವೇನಾ" ಎಂದು ಕಮೆಂಟ್ ಮಾಡಿದ್ದಾರೆ.

'ಕ್ಯಾಪ್ಟನ್ ಮಿಲ್ಲರ್' ಧನುಷ್

'ವಾತಿ' ಸಿನಿಮಾದ ಬಳಿಕ ಧನುಷ್ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದುವೇ 'ಕ್ಯಾಪ್ಟನ್ ಮಿಲ್ಲರ್'. ಇದೇ ಸಿನಿಮಾಗಿ ಈ ರಗಡ್ ಗೆಟಪ್. ಮೂಲಗಳ ಪ್ರಕಾರ, ಧನುಷ್ ಈ ಸಿನಿಮಾ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಂದೆ ಹಾಗೂ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

'ಕ್ಯಾಪ್ಟನ್ ಮಿಲ್ಲರ್' ಸಿನಿಮಾವನ್ನು ಅರುಣ್ ಮಾತೇಶ್ವರ್ ನಿರ್ದೇಶನ ಮಾಡುತ್ತಿದ್ದಾರೆ. 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಅವರ ಅಭಿಮಾನಿಗಳನ್ನು ಈಗಾಗಲೇ ಕಾಡುವುದಕ್ಕೆ ಶುರು ಮಾಡಿದೆ. ವಿಶೇಷ ಅಂದ್ರೆ, ಇದೇ ಸಿನಿಮಾ ಸೆಂಚುರಿ ಸ್ಟಾರ್ ಶಿವಣ್ಣ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಧನುಷ್ ಹಾಗೂ ಶಿವಣ್ಣ ಇಬ್ಬರನ್ನೂ ಒಟ್ಟಿಗೆ ತೆರೆಮೇಲೆ ನೋಡುವುದಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ.

More from Filmibeat

English summary
Dhanush new look for Captain Miller Fans Says Looks Like Baba Ramdev, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X