ಮತ್ತೊಂದು 'ಓಂ'.. ಆದ್ರೆ ಇದು ಅದಲ್ಲ; ಧನುಷ್ 55ನೇ ಸಿನಿಮಾ.. ಗ್ಲಿಂಪ್ಸ್ ನೋಡಿ ಡಿಸೈಡ್ ಮಾಡಿ

'ಓಂ' ಇದೊಂದು ಪವರ್‌ಫುಲ್ ಟೈಟಲ್. ಕನ್ನಡ ಚಿತ್ರರಂಗಕ್ಕಂತೂ ಅದೃಷ್ಟದ ಶೀರ್ಷಿಕೆ ಅಂತಲೇ ಹೇಳ್ಬಹುದು. ಶಿವಣ್ಣ-ಉಪೇಂದ್ರ ಕಾಂಬಿನೇಷನ್‌ ಸ್ಯಾಂಡಲ್‌ವುಡ್‌ಗೊಂದು ಎವರ್‌ಗ್ರೀನ್ ಸಿನಿಮಾ ಕೊಟ್ಟಿದೆ. ಇದೇ ಟೈಟಲ್ ಇಟ್ಕೊಂಡು ಹಲವು ಸಿನಿಮಾಗಳು ಬೇರೆ ಬೇರೆ ಭಾಷೆಯಲ್ಲಿ ಬಂದಿವೆ. ಕೆಲವು ಗೆದ್ದಿವೆ. ಸಾಕಷ್ಟು ಸಿನಿಮಾಗಳು ಸೋತಿವೆ. ಈಗ ಅದೇ ಟೈಟಲ್‌ನಲ್ಲಿ ಮತ್ತೊಂದು ಸಿನಿಮಾ ಬರುತ್ತಿವೆ.

ಹೌದು, ತಮಿಳಿನಲ್ಲಿ ಧನುಷ್ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಬಹು ತಾರಾಗಣದ ಈ ಸಿನಿಮಾಗೆ 'ಓಂ' ಅಂತ ಟೈಟಲ್ ಇಡಲಾಗಿದೆ. ಧನುಷ್ ಫುಲ್ ಮಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಈಗ್ಯಾಪ್‌ನಲ್ಲಿ ಕನ್ನಡದ ಸಿನಿಪ್ರಿಯರು ಶೀರ್ಷಿಕೆ ಕೇಳಿದ ಕೂಡಲೇ 'ಓಂ' ಕಡೆಗೆ ಒಮ್ಮೆ ಹೋಗಿ ಬಂದಿದ್ದಾರೆ. ಆದರೆ, ಇದು ಕನ್ನಡದ 'ಓಂ'ಗೆ ಸಂಬಂಧವಿಲ್ಲ. ಇದು ತಮಿಳಿನ 'ಓಂ'.

Dhanush new movie OM mass glimpse released will this title give success

ಶಿವಕಾರ್ತಿಕೇಯನ್‌ ವೃತ್ತಿ ಬದುಕಿಗೆ 'ಅಮರನ್' ಅಂತಹ ಮೆಗಾ ಹಿಟ್ ಕೊಟ್ಟ ರಾಜ್‌ಕುಮಾರ್ ಪೆರಿಯಸಾಮಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಬಾರಿ ತಮಿಳಿನ ಸ್ಟಾರ್ ಹೀರೊ ಧನುಷ್ ಜೊತೆ ಕೈ ಜೋಡಿಸಿದ್ದಾರೆ. ಅಂದ್ಹಾಗೆ ಇದು ಧನುಷ್ ನಟನೆಯ 55ನೇ ಸಿನಿಮಾ ಅನ್ನೋದು ವಿಶೇಷ. ಒಂದ್ಕಡೆ 'ಓಂ' ಟೈಟಲ್, ಇನ್ನೊಂದು ಕಡೆ ಮಾಸ್ ಗ್ಲಿಂಪ್ಸ್ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

'ಅಮರನ್' To 'ಓಂ'

ಎರಡು ವರ್ಷಗಳ ಹಿಂದಷ್ಟೇ ತಮಿಳಿನಲ್ಲಿ 'ಅಮರನ್' ಅನ್ನೋ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆದಿತ್ತು. ಶಿವಕಾರ್ತಿಕೇಯನ್ ಕರಿಯರ್‌ಗೆ ದೊಡ್ಡ ಹಿಟ್ ಕೊಟ್ಟಿತ್ತು. ಸುಮಾರು 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಸಿನಿಮಾದ ಯಶಸ್ಸಿನ ಬಳಿಕ 'ಓಂ'ಗೆ ಕೈ ಹಾಕಿದ್ದರು. ಧನುಷ್ ಜೊತೆ ಸಿನಿಮಾ ಮಾಡುವುದಕ್ಕೆ ರೆಡಿಯಾಗಿದ್ದರು. ಆ ಸಿನಿಮಾ ಗ್ಲಿಂಪ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಬಿಗ್ ಸ್ಟಾರ್ ಕಾಸ್ಟ್ 'ಓಂ'

'ಓಂ' ಸ್ಮಾಲ್ ಬಜೆಟ್ ಸಿನಿಮಾ ಅಲ್ಲ. ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಕೂಡ ವಿಶೇಷ ಪಾತ್ರದಲ್ಲಿ ಮತ್ತೆ ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜೊತೆ ಸಾಯಿ ಪಲ್ಲವಿ, ಶ್ರೀಲೀಲಾ ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಧನುಷ್ ಅವರ 'ವಂಡರ್‌ಬಾರ್ ಫಿಲ್ಮ್ಸ್' ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ. ಮಾಸ್ ಟೀಸರ್ ರಿಲೀಸ್ ಆದ್ಮೇಲೆ ಸಿನಿಮಾ ಮೇಲೆ ನಿರೀಕ್ಷೆ ಇನ್ನೂ ಹೆಚ್ಚಾಗಿದೆ.

ಮತ್ತೊಂದು ನೈಜ ಘಟನೆ ಸಿನಿಮಾ?

ಧನುಷ್ 'ಓಂ' ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆಗುತ್ತಿದ್ದಂತೆ ಸಿನಿಪ್ರಿಯರಿಗೆ ಕುತೂಹಲ ಮೂಡಿದೆ. ಯಾಕಂದ್ರೆ, ರಾಜ್‌ಕುಮಾರ್ ಪೆರಿಯಸಾಮಿ ಈ ಹಿಂದೆ ನಿರ್ದೇಶಿಸಿದ 'ಅಮರನ್' ಕೂಡ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಆಗಿತ್ತು. ಹೀಗಾಗಿ 'ಓಂ' ಸಿನಿಮಾ ಕೂಡ ರಿಯಲ್ ಲೈಫ್ ಸ್ಟೋರಿ ಅಂತ ಅಂದಾಜಿಸಲಾಗುತ್ತಿದೆ. ಇದು ಆಂಧ್ರಪ್ರದೇಶದಲ್ಲಿ ರಕ್ತಚಂದನ ಸಾಗಣೆ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ ಅನ್ಸಿತ್ತು. ಹೀಗಾಗಿ ಈ ಸಿನಿಮಾ ಕೂಡ 'ಅಮರನ್' ನಂತೆ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸುತ್ತಾ ಅಂತ ಎದುರು ನೋಡಲಾಗುತ್ತಿದೆ.

ಬ್ಯಾಕ್ ಟು ಬ್ಯಾಕ್ ಸೋಲು

ಧನುಷ್ ಆಯ್ಕೆ ಮಾಡಿಕೊಳ್ಳುವ ಕಥೆಗಳು ಯಾವಾಗಲೂ ಸ್ಪೆಷಲ್ ಆಗಿ ಇರುತ್ತವೆ. ರಿಯಲಿಸ್ಟಿಕ್ ಸ್ಟೋರಿಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಇವರ ಸಿನಿಮಾಗಳಿಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಆದ್ರೆ ಈಗೀಗ ಅವರ ಸಿನಿಮಾಗಳು ಯಾಕೋ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಾಕಿದರೂ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಮಾಡುವಲ್ಲಿ ಸೋಲುತ್ತಿದೆ. ಹೀಗಾಗಿ 'ಓಂ' ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ.

English summary
Dhanush new movie OM mass glimpse released will this title give success.
Read more about: dhanush om tamil movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X