Kuberaa Business: ಥಿಯೇಟರ್‌ನಿಂದ ₹45 ಕೋಟಿ ಬಂದ್ರೆ 'ಕುಬೇರಾ' ಸೇಫ್; ರಿಲೀಸ್‌ಗೂ ಮುನ್ನ ಬ್ಯುಸಿನೆಸ್ ಎಷ್ಟು?

ಈ ವಾರ ರಿಲೀಸ್ ಆಗುತ್ತಿರುವ 'ಕುಬೇರಾ' ದಕ್ಷಿಣ ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ತಮಿಳು ನಟ ಧನುಷ್, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ಮನ್ಮಥ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವಿದು. ಇದೇ ತಿಂಗಳು ಅಂದರೆ, ಜೂನ್ 20ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿರುವ 'ಕುಬೇರಾ' ಈಗಾಗಲೇ ಟ್ರೈಲರ್‌ನಿಂದ ಸದ್ದು ಮಾಡುತ್ತಿದೆ. ಹೀಗಾಗಿ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

'ಕುಬೇರಾ' ಸಿನಿಮಾದ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಶೀಘ್ರದಲ್ಲಿಯೇ ಅಡ್ವಾನ್ಸ್ ಬುಕಿಂಗ್ ಕೂಡ ಓಪನ್ ಆಗಲಿದೆ. ಹೀಗಾಗಿ ಅಡ್ವಾನ್ಸ್ ಬುಕಿಂಗ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಇತ್ತೀಚೆಗೆ ಧನುಷ್ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಿಲ್ಲ. ಈ ಕಾರಣಕ್ಕೆ 'ಕುಬೇರಾ' ಮೇಲೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Dhanush Rashmika Mandanna Nagarjuna starrer Kuberaa movie pre release business details

ಇನ್ನು ತೆಲುಗಿನ ಸ್ಟಾರ್ ಡೈರೆಕ್ಟರ್ ಶೇಖರ್ ಕಮ್ಮುಲ ನಿರ್ದೇಶಿಸಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಉತ್ತಮ ವ್ಯವಹಾರ ಮಾಡಿದೆ. ಬಿಡುಗಡೆಗೂ ಮುನ್ನವೇ 'ಕುಬೇರಾ' ಸಿನಿಮಾ ಶೇ.60ಕ್ಕೂ ಅಧಿಕ ಹಣವನ್ನು ಬಾಚಿಕೊಂಡಿದೆ ಎನ್ನಲಾಗಿದೆ. ಇನ್ನು ಉಳಿದ ಹಣವನ್ನು ಸುಲಭವಾಗಿ ಥಿಯೇಟರ್‌ಗಳಿಂದ ಗಳಿಸಲಿದೆ ಎಂದು ಸಿನಿಮಾ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಹಾಗಿದ್ದರೆ, 'ಕುಬೇರಾ' ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆಗೂ ಮುನ್ನ ಈ ಸಿನಿಮಾ ಮಾಡಿದ ಬ್ಯುಸಿನೆಸ್ ಎಷ್ಟು? ತಿಳಿಯಲು ಮುಂದೆ ಓದಿ.

'ಕುಬೇರಾ' ಬಜೆಟ್ ಎಷ್ಟು?

ಧನುಷ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕುಬೇರಾ' ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ಎಂದುಕೊಳ್ಳಲಾಗಿತ್ತು. ಆದರೆ, 20 ಕೋಟಿ ರೂಪಾಯಿ ಹೆಚ್ಚು ಖರ್ಚಾಗಿದೆ. ಹೀಗಾಗಿ ಒಟ್ಟು ಬಜೆಟ್ 120 ಕೋಟಿ ರೂ. ಇದಕ್ಕೆ 10 ಕೋಟಿ ರೂ. ಜಾಹೀರಾತು ವೆಚ್ಚ ಸೇರಿದ 130 ಕೋಟಿ ರೂಪಾಯಿ ಎಂದು ಪಿಂಕ್ ವಿಲ್ಲ ವರದಿ ಮಾಡಿದೆ. ಈ ಬಜೆಟ್‌ ಅನ್ನು 'ಕುಬೇರಾ' ರಿಕವರಿ ಮಾಡಬೇಕಿದೆ.

ಪ್ರೀ ರಿಲೀಸ್ ಬ್ಯುಸಿನೆಸ್ ಎಷ್ಟು?

'ಕುಬೇರಾ' ಪ್ರೀ ರಿಲೀಸ್ ಬ್ಯುಸಿನೆಸ್‌ನಲ್ಲಿ ಸುಮಾರು 85 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ. ಇದರಲ್ಲಿ ಡಿಜಿಟಲ್ ರೈಟ್ಸ್ ಅಮೆಜಾನ್ ಪ್ರೈಂಗೆ ಸೇಲ್ ಆಗಿದೆ. ಎಲ್ಲಾ ಭಾಷೆಗಳಿಂದ ಈ ಸಿನಿಮಾವನ್ನು ಅಮೆಜಾನ್ ಪ್ರೈಂ ವಿಡಿಯೋ 50 ಕೋಟಿ ರೂಪಾಯಿ ನೀಡಿದೆ. ಇನ್ನು ಮ್ಯೂಸಿಕ್ ರೈಟ್ಸ್ 15 ಕೋಟಿ ರೂಪಾಯಿಗೆ ಸೇಲ್ ಆಗಿದೆ. ಸ್ಯಾಟಲೈಟ್ ಹಕ್ಕುಗಳನ್ನು ಸ್ಟಾರ್ ಮಾ ಖರೀದಿ ಮಾಡಿದ್ದು, 20 ಕೋಟಿ ರೂಪಾಯಿ ನೀಡಿದೆ. ಇವೆಲ್ಲವನ್ನೂ ಸೇರಿದರೆ, 85 ಕೋಟಿ ರೂಪಾಯಿ ಆಗುತ್ತೆ. ಇನ್ನು ಉಳಿದ ₹45 ಕೋಟಿ ರೂಪಾಯಿ ಥಿಯೇಟರ್‌ಗಳಿಂದ ಬರಬೇಕಿದೆ.

Dhanush Rashmika Mandanna Nagarjuna starrer Kuberaa movie pre release business details

ಮೊದಲ 3 ದಿನದಲ್ಲೇ ಗಳಿಸಬಹುದೇ?

ಇತ್ತೀಚೆಗೆ ಧನುಷ್ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಿಲ್ಲ. ಹೀಗಾಗಿ 'ಕುಬೇರಾ' ದೊಡ್ಡ ಮಟ್ಟಕ್ಕೆ ಸದ್ದು ಮಾಡಬಹುದೇ? ಎಂಬ ಪ್ರಶ್ನೆ ಎದ್ದಿದೆ. ಆದರೆ, ಧನುಷ್, ರಶ್ಮಿಕಾ ಮಂದಣ್ಣ ಹಾಗೂ ನಾಗಾರ್ಜುನ ಅಂತ ದಿಗ್ಗಜರು ಇರುವುದರಿಂದ ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲಿಯೂ ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಳ್ಳಬಹುದು ಎಂದು ನಿರೀಕ್ಷೆಯನ್ನು ಮಾಡಲಾಗಿದೆ.

More from Filmibeat

English summary
Dhanush Rashmika Mandanna Nagarjuna starrer Kuberaa movie pre release business details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X