'ಕ್ಯಾಪ್ಟನ್ ಮಿಲ್ಲರ್' ರಿಲೀಸ್‌ಗೆ ಮುಹೂರ್ತ ಫಿಕ್ಸ್: ಧನುಷ್-ಶಿವಣ್ಣ ಮೇಲೆ ಎಲ್ಲರ ಕಣ್ಣು!
'ಜೈಲರ್' ಸಿನಿಮಾ ಬಳಿಕ ಶಿವಣ್ಣನ ಖದರ್‌ಗೆ ತಮಿಳಿಗರು ಬೋಲ್ಡ್ ಆಗಿದ್ದು ಹೊಸ ವಿಷಯವೇನಲ್ಲ. ಶಿವಣ್ಣ ಲುಕ್‌ಗೆ, ಎಂಟ್ರಿಗೆ ತಲೆಕೆಡಿಸಿಕೊಂಡಷ್ಟು ಮತ್ಯಾವ ಪಾತ್ರಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಮತ್ತೊಂದು ತಮಿಳು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ಕ್ಯಾಪ್ಟನ್ ಮಿಲ್ಲರ್'.
ತಮಿಳಿನ ಸ್ಟಾರ್ ನಟ ಧನುಷ್ ನಟಿಸುತ್ತಿರುವ 49ನೇ ಸಿನಿಮಾವಿದು. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಧನುಷ್ ಜೊತೆ ಶಿವಣ್ಣ ಬೇರೆ ಸೇರಿಕೊಂಡಿದ್ದರಿಂದ ಕರ್ನಾಟಕದಲ್ಲೂ 'ಕ್ಯಾಪ್ಟನ್ ಮಿಲ್ಲರ್' ಹವಾ ಜೋರಾಗಿ ಇರುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಸದ್ಯ ಚಿತ್ರತಂಡ ಈಗ ಖುಷಿ ವಿಷಯವೊಂದನ್ನು ಹಂಚಿಕೊಂಡಿದೆ.

ಧನುಷ್ ಬಹುಬೇಗನೇ ಸಿನಿಮಾ ಮಾಡಿ ಮುಗಿಸುವ ನಟ. ಕಾಲ್‌ಶೀಟ್ ಅನ್ನು ಕೂಡ ಲೆಕ್ಕ ಹಾಕಿನೇ ಕೊಡುತ್ತಾರೆ ಅನ್ನೋದು ಕಾಲಿವುಡ್‌ನಲ್ಲಿ ಪ್ರಚಲಿತದಲ್ಲಿರೋ ಸುದ್ದಿ. ಒಂದು ಸಿನಿಮಾಗೆ ಮೂರು ತಿಂಗಳು ಅಂತ ಮೀಸಲಿಡುತ್ತಾರೆ. ಆದರೆ, 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಕಥೆ ಕೊಂಚ ಡಿಫ್ರೆಂಟ್. ಈ ಸಿನಿಮಾಗಾಗಿ ಸುಮಾರು 10 ತಿಂಗಳು ಕಾಲ್ ಶೀಟ್ ನೀಡಿದ್ದರು ಅನ್ನೋ ಮಾತಿದೆ.
'ಕ್ಯಾಪ್ಟನ್ ಮಿಲ್ಲರ್' ಸಿನಿಮಾವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಧನುಷ್ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಿಲೀಸ್ ಆಗಿರೋ ಫಸ್ಟ್ ಲುಕ್ ಹಾಗೂ ಟೀಸರ್ ನೋಡಿದರೆ ಈ ಗುಮಾನಿ ಬರೋದು ಸಹಜ.

ಅಂದ್ಹಾಗೆ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾವನ್ನು ಪೊಂಗಲ್‌ಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. 2024, ಜನವರಿ 12ರಂದು 'ಕ್ಯಾಪ್ಟನ್ ಮಿಲ್ಲರ್' ವಿಶ್ವದಾದ್ಯಂತ ತೆರೆ ಕಾಣಲಿದೆ. ಧನುಷ್ ಹಾಗೂ ಶಿವಣ್ಣ ಕ್ರೇಜಿ ಕಾಂಬಿನೇಷನ್ ನೋಡುವುದಕ್ಕೆ ಸಿನಿಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಧನುಷ್ ಉದ್ದ ಕೂದಲು, ಗಡ್ಡ ಮೀಸೆ ಬಿಟ್ಟು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.
ಹಾಗೇ ಶಿವರಾಜ್‌ಕುಮಾರ್ ಕೂಡ ಕುದುರೆ ಏರಿ ಬರುವ ಸನ್ನಿವೇಶ ಅವರ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಸದ್ಯ ಈ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಜಿವಿ ಪ್ರಕಾಶ್ ಈ ಸಿನಿಮಾಗೆ ಹಿನ್ನೆಲೆ ಸಂಗೀತ ಹಾಗೂ ಟ್ಯೂನ್‌ಗಳನ್ನು ಕಂಪೋಸ್ ಮಾಡಿದ್ದಾರೆ. ಸದ್ಯ ಈ ಸಿನಿಮಾವನ್ನು ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕನ್ನಡದಲ್ಲಿ ಬಿಡುಗಡೆ ಮಾಡುತ್ತಾ? ಅನ್ನೋ ಬಗ್ಗೆ ಸದ್ಯ ಮಾಹಿತಿ ಇಲ್ಲ.
ಈಗಾಗಲೇ 'ಕ್ಯಾಪ್ಟನ್ ಮಿಲ್ಲರ್' ಪ್ರೀ ರಿಲೀಸ್ ಬ್ಯುಸಿನೆಸ್ ಮುಗಿಸಿದೆ ಅನ್ನೋ ಟಾಕ್ ಇದೆ. ಮೂಲಗಳ ಪ್ರಕಾರ, ಈ ಸಿನಿಮಾ ಬಿಡುಗಡೆಗೂ ಮುನ್ನ 100 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ ಎನ್ನಲಾಗಿದೆ. ಇನ್ನೊಂದು ಕಡೆ ಜನವರಿ ಮೊದಲ ವಾರ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಅನ್ನು ಹಮ್ಮಿಕೊಳ್ಳುವ ಸಾಧ್ಯತೆಯಿದೆ. ಧನುಷ್ ವೃತ್ತಿ ಬದುಕಿನಲ್ಲೇ ಇದೊಂದು ವಿಭಿನ್ನ ಸಿನಿಮಾ ಆಗಿರುವುದರಿಂದ 'ಕ್ಯಾಪ್ಟನ್ ಮಿಲ್ಲರ್' ಮೇಲೆ ಎಲ್ಲರ ಕಣ್ಣು ಇದೆ.


Click it and Unblock the Notifications











