ಒಟ್ಟಿಗೆ ಎರಡೆರಡು ಬಯೋಪಿಕ್‌ಗೆ ಗ್ರೀನ್ ಸಿಗ್ನಲ್; ಇಳಯರಾಜ-ಅಬ್ದುಲ್ ಕಲಾಂ ಅವತಾರವೆತ್ತಲಿರೋ ಧನುಷ್

ಭಾರತೀಯ ಚಿತ್ರರಂಗದಲ್ಲಿ ಕಂಟೆಂಟ್ ಇಟ್ಕೊಂಡು ಕಮರ್ಷಿಯಲ್ ಸಿನಿಮಾ ಮಾಡುವ ಕೆಲವೇ ಕೆಲವು ನಟರಲ್ಲಿ ಧನುಷ್ ಕೂಡ ಒಬ್ಬರು. ಇಲ್ಲಿವರೆಗೂ ಧನುಷ್ ನಟಿಸಿದ ಬಹುತೇಕ ಸಿನಿಮಾ ಪ್ರೇಕ್ಷಕರನ್ನು ಭಾವನೆಗಳಲ್ಲಿ ಕಟ್ಟಿ ಹಾಕಿದೆ. ಅದಕ್ಕೆ ಧನುಷ್ ಬೇರೆ ಎಲ್ಲಾ ನಟರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ. ಈಗ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದು ಕೂಡ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ.

ಧನುಷ್ ವಿಭಿನ್ನ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ರಂಜಿಸುತ್ತಲೇ ಇದ್ದಾರೆ. ಕೆಲವು ಅವರಿಗೆ ಯಶಸ್ಸು ಸಿಕ್ಕರೆ, ಮತ್ತೆ ಕೆಲವೊಮ್ಮೆ ಸೋಲಿ ರುಚಿ ಕಂಡಿದ್ದು ಕೂಡ ಇದೆ. ಹೀಗಿದ್ದರೂ, ಕಂಟೆಂಟ್‌ ಇರುವ ಸಿನಿಮಾಗಳನ್ನು ಬಿಟ್ಟು ಹೊರ ಬಂದಿಲ್ಲ. ಸಿನಿಮಾದಲ್ಲಿ ಕಂಟೆಂಟ್ ಹಾಗೂ ಕಮರ್ಷಿಯಲ್ ಎಲಿಮೆಂಟ್ಸ್ ಎರಡೂ ಹುಡುಕುತ್ತಾ ಇಲ್ಲಿವರೆಗೂ ಬಂದಿದ್ದಾರೆ.

Dhanush signs music maestro Ilaiyaraaja and former President APJ Abdul Kalam big-budget biopics

ಇತ್ತೀಚೆಗೆ ಧನುಷ್ ಯಶಸ್ಸು ಸಿಕ್ಕಿದೆ. ಜೊತೆಗೆ ಸೋಲು ಕೂಡ ಸಿಕ್ಕಿದೆ. ಎರಡನ್ನೂ ಸಮಾನವಾಗಿ ಸ್ವೀಕರಿಸಿರುವ ಧನುಷ್ ಮತ್ತೆ ಪ್ರಯೋಗಕ್ಕೆ ಮುಂದಾಗಿದ್ದಾರೆ. ತಮಿಳಿನ ಇಬ್ಬರು ಗಣ್ಯರ ಜೀವನ ಚರಿತ್ರೆಯನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ. ಆ ಎರಡು ಸಿನಿಮಾಗಳೇ ಮ್ಯೂಸಿಕ್ ಮಾಂತ್ರಿಕ ಇಳಯರಾಜ ಕುರಿತ ಬಯೋಪಿಕ್. ಇದರೊಂದಿಗೆ ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ.

ಭಾರತೀಯ ಚಿತ್ರರಂಗದ ಸಂಗೀತ ಲೋಕದಲ್ಲಿ ಇಳಯರಾಜ ಕೊಡುಗೆ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ಭಾರತದ ಎಲ್ಲಾ ಪ್ರಮುಖ ಭಾಷೆಗಳಿಗೂ ಇಳಯರಾಜ ಸಂಗೀತ ನೀಡಿದ್ದಾರೆ. ಇವರ ಹಾಡುಗಳು ಇಂದಿನ ಪೀಳಿಗೆಗೂ ಬಲು ಇಷ್ಟ. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳಲ್ಲೂ ಇವರ ಹಾಡುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಇಳಯರಾಜ ಈ ಮಟ್ಟಿಗೆ ಸಾಧನೆ ಮಾಡಿದ್ದರ ಹಿಂದಿನ ಕತೆಯನ್ನು ತೆರೆಮೇಲೆ ತರುವುದಕ್ಕೆ ಧನುಷ್ ಹೊರಟಿದ್ದಾರೆ.

ಮೂಲಗಳ ಪ್ರಕಾರ, ಇಳಯರಾಜ ಬಯೋಪಿಕ್ ಅನ್ನು ಆರಂಭದಲ್ಲಿ ಅರುಣ್ ಮಹೇಶ್ವರನ್ ನಿರ್ದೇಶನ ಮಾಡಬೇಕಿತ್ತು. ಆದರೆ, ಈಗ ಅವರ ಬದಲಿಗೆ ಹಿರಿಯ ನಿರ್ದೇಶಕರು ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿ ಹಬ್ಬಿದೆ. ಇನ್ನು ಈ ಸಿನಿಮಾ 2027ರ ಮಾರ್ಚ್ ವೇಳೆಗೆ ಶೂಟಿಂಗ್ ಆರಂಭ ಆಗುವ ಸಾಧ್ಯತೆಯಿದೆ. ವಿಶೇಷ ಅಂದರೆ, ಈ ಸಿನಿಮಾಗೆ ಸ್ವತ: ಇಳಯರಾಜ ಅವರೇ ಸಂಗೀತ ನೀಡುತ್ತಿದ್ದಾರೆ.

Dhanush signs music maestro Ilaiyaraaja and former President APJ Abdul Kalam big-budget biopics

ಧನುಷ್ ಒಪ್ಪಿಕೊಂಡಿರುವ ಇನ್ನೊಂದು ಸಿನಿಮಾ 'ಕಲಾಂ'. ಇದು ವಿಜ್ಞಾನಿ, ಟೀಚರ್, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕುರಿತಾದ ಸಿನಿಮಾ. ಅವರು ಹುಟ್ಟಿದ ಊರು ರಾಮೇಶ್ವರಂನಿಂದ ಹಿಡಿದು ಅವರ ಶಿಕ್ಷಣ, ಸಾಧನೆಗಳು, ಅವರ ವ್ಯಕ್ತಿತ್ವವನ್ನು ಈ ಸಿನಿಮಾದಲ್ಲಿ ಬಿಂಬಿಸಲಾಗುತ್ತದೆ. ಈ ಸಿನಿಮಾಗೆ 'ಆದಿಪುರುಷ್' ಸಿನಿಮಾದ ನಿರ್ದೇಶಕ ಓಂ ರಾವತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ 2027 ಇಲ್ಲವೇ 2028ಕ್ಕೆ ರಿಲೀಸ್ ಆಗುವ ಸಾಧ್ಯತೆಯಿದೆ.

ಸಂಗೀತ ಮಾಂತ್ರಿಕ 'ಇಳಯರಾಜ' ಹಾಗೂ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಇಬ್ಬರ ವ್ಯಕ್ತಿತ್ವಗಳು ವಿಭಿನ್ನ. ಈ ಇಬ್ಬರು ಲೆಜೆಂಡ್‌ಗಳನ್ನು ಧನುಷ್ ಹೇಗೆ ತೆರೆಮೇಲೆ ತರುತ್ತಾರೆ ಅನ್ನೋದು ಕುತೂಹಲ. ಈಗಾಗಲೇ ಈ ಎರಡೂ ಸಿನಿಮಾಗಳ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿವೆ. ಇಬ್ಬರು ದಿಗ್ಗಜರ ಪಾತ್ರಗಳಿಗೆ ಧನುಷ್ ಸೂಟ್ ಆಗಿದ್ದಾರೆ. ಇನ್ನು ಸಿನಿಮಾ ತೆರೆಗೆ ಬಂದ್ಮೇಲೆ ಅದರ ಇಂಪ್ಯಾಕ್ಟ್ ಹೇಗಿರುತ್ತೆ ಅನ್ನೋದು ನೋಡಬೇಕಿದೆ.

More from Filmibeat

English summary
Dhanush signs music maestro Ilaiyaraaja and former President APJ Abdul Kalam big-budget biopics.
Read more about: dhanush ilaiyaraaja biopic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X