Fact Check: ಲೋಕೇಶ್ ಟ್ವಿಟರ್ ಬಯೋದಲ್ಲಿ 'ಲಿಯೋ' ಇಲ್ಲ.. ರಜನಿ ಕಾರಣ.. ವಿಜಯ್ ಫ್ಯಾನ್ಸ್ ಸಿಟ್ಟು.. ಅಸಲಿಯತ್ತೇನು?

ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್. ಇತ್ತೀಚೆಗಷ್ಟೇ ಕಮಲ್ ಹಾಸನ್ ನಟನೆಯ 'ವಿಕ್ರಂ' ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿದ್ದು ಇದೇ ನಿರ್ದೇಶಕ. ಅಲ್ಲದೆ ದಳಪತಿ ವಿಜಯ್ 'ಮಾಸ್ಟರ್' ಅಂತಹ ಸಿನಿಮಾ ಕೊಟ್ಟಿದ್ದು ಕೂಡ ಇದೇ ಡೈರಕ್ಟರ್. ಈಗ ವಿಜಯ್‌ಗೇನೆ 'ಲಿಯೋ' ಸಿನಿಮಾ ಮಾಡುತ್ತಿರೋದು ಕೂಡ ಇದೇ ನಿರ್ದೇಶಕ.

ರಜನಿಕಾಂತ್ 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೆಗಾ ಹಿಟ್ ಅಂತ ಸಾಬೀತಾಗುತ್ತಿದ್ದಂತೆ ಹೊಸ ಸಿನಿಮಾ ಅನೌನ್ಸ್ ಮಾಡಿದೆ. ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದ ಸುದ್ದಿ ನಿಜವಾಗಿದೆ. ರಜನಿಯ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡುವುದಕ್ಕೆ ಪಕ್ಕಾ ಆಗಿದೆ.

lokesh-kanagaraj-thalapathy-vijay-leo

ಈ ಸಿನಿಮಾ ಘೋಷಣೆಯಾಗುತ್ತಿದ್ದಂತೆ ಲೋಕೇಶ್ ಕನಗರಾಜ್ ತಮ್ಮ ಟ್ವಿಟರ್ ಬಯೋದಿಂದ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾವನ್ನು ತೆಗೆದು ಹಾಕಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಅದಕ್ಕೆ ರಜನಿ ಸಿನಿಮಾನೇ ಕಾರಣ ಅನ್ನೋದು ಸುದ್ದಿ. ಅಷ್ಟಕ್ಕೂ ಈ ಸುದ್ದಿ ನಿಜವೇ? ಏನಿದರ ಅಸಲಿಯತ್ತು? ತಿಳಿಯಲು ಮುಂದೆ ಓದಿ..

ಟ್ವಿಟರ್ ಬಯೋದಿಂದ 'ಲಿಯೋ' ತೆಗೆದು ಹಾಕಿದ್ರಾ?

ಲೋಕೇಶ್ ಕನಗರಾಜ್ ತಮ್ಮ ಟ್ವಿಟರ್ ಬಯೋದಿಂದ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾವನ್ನು ತೆಗೆದು ಹಾಕಿದ್ದಾರೆಂಬ ಸುದ್ದಿ ವಿಜಯ್ ಅಭಿಮಾನಿಗಳಲ್ಲಿ ಗೊಂದಲವನ್ನು ಸೃಷ್ಟಿಸಿದೆ. 'ಮಾಸ್ಟರ್' ಸಿನಿಮಾದ ಸೂಪರ್ ಸಕ್ಸಸ್ ಬಳಿಕ ವಿಜಯ್ ಹಾಗೂ ಲೋಕೇಶ್ 'ಲಿಯೋ'ದಿಂದ ಮತ್ತೆ ಜೊತೆಯಾಗಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಸಿದ್ಧತೆಗಳು ನಡೆಯುತ್ತಿವೆ.

lokesh-kanagaraj-thalapathy-vijay-leo

ಗಣೇಶ ಚತುರ್ಥಿಗೆ 'ಲಿಯೋ' ಸಾಂಗ್

'ಲಿಯೋ' ಸಿನಿಮಾದ ಎರಡನೇ ಹಾಡು ಗಣೇಶ ಚತುರ್ಥಿಗೆ ರಿಲೀಸ್ ಆಗುತ್ತಿದೆ ಅನ್ನೋದು ಸುದ್ದಿನೂ ಇದೆ. ದಳಪತಿ ವಿಜಯ್ ವೃತ್ತಿ ಬದುಕಿನ ಮತ್ತೊಂದು ಬಿಗ್ ಸಿನಿಮಾ ಇದಾಗಿದ್ದು, 'ಬೀಸ್ಟ್', 'ವಾರಿಸು' ಸೋಲಿನ ಬಳಿಕ 'ಲಿಯೋ' ಮೆಗಾ ಹಿಟ್ ಆಗುತ್ತೆ ಅನ್ನೋ ಮಾತು ಕೇಳಿ ಬರುತ್ತಿದೆ. ವಿಜಯ್ ಜೊತೆ ದೊಡ್ಡ ತಾರಾಬಳಗವೇ ನಟಿಸಿದೆ. ಸಂಜಯ್ ದತ್, ತ್ರಿಶಾ, ಅರ್ಜುನ್, ಗೌತಮ್ ಮೆನನ್, ಮನ್ಸೂರ್ ಅಲಿ ಖಾನ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದ್ದು, ಅಕ್ಟೋಬರ್ 19ಕ್ಕೆ ರಿಲೀಸ್ ಆಗುತ್ತಿದೆ. ಈ ಮಧ್ಯೆ ಲೋಕೇಶ್ ಟ್ವಿಟರ್ ಬಯೋ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

'ಲಿಯೋ' ಡಿಲೀಟ್ ಮಾಡಿದ್ದಾರೆಂಬ ಆರೋಪ

ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಫ್ಯಾನ್ಸ್ 'ಲಿಯೋ' ಸಿನಿಮಾ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತಿದ್ದಾರೆ. ಈ ಹಿಂದೆ ತಮ್ಮ ಟ್ವಿಟರ್ ಬಯೋದಲ್ಲಿ 'ಮಾನಗಾರಂ', 'ಕೈಥಿ','ಮಾಸ್ಟರ್','ವಿಕ್ರಂ','ಲಿಯೋ' ಸಿನಿಮಾವಿತ್ತು. ಆದರೆ, ಇತ್ತೀಚೆಗೆ ಟ್ವಿಟರ್ ಬಯೋದಿಂದ 'ಲಿಯೋ' ಸಿನಿಮಾವನ್ನು ತೆಗೆದು ಹಾಕಿದ್ದಾರೆಂದು ವಿಜಯ್ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ರಜನಿಕಾಂತ್ 171ನೇ ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ ಲೋಕೇಶ್ ಕನಗರಾಜ್ 'ಲಿಯೋ' ಸಿನಿಮಾ ಡಿಲೀಟ್ ಮಾಡಿದ್ದಾರೆಂಬ ಆರೋಪ ಮಾಡಲಾಗುತ್ತಿದೆ.

ಅಸಲಿಯತ್ತು ಏನು?

ಚಿತ್ರರಂಗದ ಮೂಲಗಳ ಪ್ರಕಾರ, ಲೋಕೇಶ್ ಕನಗರಾಜ್ ಟ್ವಿಟರ್ ಬಯೋವನ್ನು ಯಾರೋ ಫೋಟೊಶಾಪ್ ಮಾಡಿದ್ದಾರೆ. ಲೋಕೇಶ್ ಕನಗರಾಜ್ ತಮ್ಮ ಟ್ವಿಟರ್ ಬಯೋದಲ್ಲಿ 'ಲಿಯೋ' ಸಿನಿಮಾವನ್ನು ಹಾಕಿರಲೇ ಇಲ್ಲ. ಅದನ್ನು ಯಾರೋ ಕಿಡಿಗೇಡಿಗಳು ಫೋಟೊಶಾಪ್ ಮಾಡಿ ಹಲ್‌ಚಲ್ ಎಬ್ಬಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ 'ಲಿಯೋ' ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿದ್ದು, ವಿಜಯ್ ಹಾಗೂ ಲೋಕೇಶ್ ನಡುವೆ ಎಲ್ಲವೂ ಸರಿಯಿದೆ ಎನ್ನಲಾಗಿದೆ.

More from Filmibeat

English summary
Fact Check: Lokesh Kanagaraj Removed Leo From Twitter Bio? What is the fact?:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X