ಪತಿ ನಿಧನದ ಬಳಿಕ ₹300 ಕೋಟಿ ಮೌಲ್ಯದ ಆಸ್ತಿ ಖರೀದಿಸಿದರೇ ಮೀನಾ? ಆಕೆಗೆ ಹಣ ಎಲ್ಲಿಂದ ಬಂತು?
ದಕ್ಷಿಣ ಭಾರತದ ಸುಪ್ರಸಿದ್ಧ ನಟಿ ಮೀನಾ ಇತ್ತೀಚೆಗೆ ಸದಾ ಚರ್ಚೆಯಲ್ಲಿ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಮೀನಾ ಬಗ್ಗೆ ಒಂದಲ್ಲ ಒಂದು ವಿಷಯವನ್ನು ಇಟ್ಟುಕೊಂಡು ಚರ್ಚೆ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಮೀನಾ ಪತಿ ನಿಧನದ ಬಳಿಕವಂತೂ ಸ್ವಲ್ಪ ಜಾಸ್ತಿನೇ ಆಗಿದೆ ಎಂದು ಹೇಳಬಹುದು.
ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮೀನಾ ನಂತರದ ದಿನಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ಮೀನಾ ನಾಯಕಿಯಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಕಿಚ್ಚ ಸುದೀಪ್ ಅಂತಹ ದಿಗ್ಗಜರೊಂದಿಗೆ ನಟಿಸಿರುವ ಮೀನಾ ಕನ್ನಡಿಗರಿಗೂ ತುಂಬಾನೇ ಚಿರಪರಿಚಿತ. ದಕ್ಷಿಣ ಭಾರತದಲ್ಲಿ ಇಷ್ಟೊಂದು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿರುವ ಮೀನಾ ಪತಿಯ ನಿಧನದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯ ವಿಷಯವಾಗಿದ್ದಾರೆ.

ಇನ್ನು ತಮಿಳಿನ ದಿಗ್ಗಜರಾದ ರಜನಿಕಾಂತ್, ಕಮಲ್ ಹಾಸನ್, ಪ್ರಭು, ವಿಜಯ್‌ಕಾಂತ್ ಸೇರಿದಂತೆ ಹಲವು ನಟರಿಗೆ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮೀನಾ 300 ಕೋಟಿ ರೂಪಾಯಿ ಆಸ್ತಿಯನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಾರೆ. ಕೆಲವು ಮೀನಾಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅದಕ್ಕೆ ತಮಿಳಿನ ಹಿರಿಯ ಪತ್ರಕರ್ತರೊಬ್ಬರು ಮೀನಾ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಾಪರ್ಟಿ ಖರೀದಿಸಿದ್ದು ನಿಜನಾ? ಅಲ್ವಾ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ತಮಿಳಿನ ಹಿರಿಯ ಪತ್ರಕರ್ತ ಹಾಗೂ ಯೂಟ್ಯೂಬರ್ ಬೈಲ್ವಾನ್ ರಂಗನಾಥ್ ಈ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಾಕ್ಷಿಗಳು ಇಲ್ಲದೆ ಇಂತಹ ಸುದ್ದಿಗಳನ್ನು ಹರಡಬೇಡಿ ಎಂದು ಕಿಡಿಕಾರಿದ್ದಾರೆ. ನಟಿ ಮೀನಾಗೆ ಇರೋದಿ ಒಬ್ಬಳೇ ಮಗಳು. ಹೀಗಿರುವಾಗ ಅವರು ಯಾಕೆ 300 ಕೋಟಿ ರೂಪಾಯಿ ಆಸ್ತಿಯನ್ನು ಖರೀದಿ ಮಾಡುತ್ತಾರೆ? ಪ್ರಶ್ನೆ ಮಾಡಿದ್ದಾರೆ. ಅಲ್ಲದೆ 300 ಕೋಟಿ ರೂಪಾಯಿ ಆಸ್ತಿ ಖರೀದಿಸಿದ್ದರೂ 150 ಕೋಟಿ ರೂಪಾಯಿಯನ್ನು ತೆರಿಗೆ ಅಂತಲೇ ಪಾವತಿಸಬೇಕು ಎಂದಿದ್ದಾರೆ. ಹೀಗಿರುವಾಗ ಮೀನಾ ಆಸ್ತಿಯನ್ನು ಯಾಕೆ ಖರೀದಿ ಮಾಡುತ್ತಾಳೆಂದು ಹೇಳಿದ್ದಾರೆ.

ಯೂಟ್ಯೂಬರ್‌ಗಳು ಯಾವುದೇ ಪುರಾವೆಗಳೇ ಇಲ್ಲದೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಮೀನಾ 300 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ್ದು ಸುಳ್ಳು. ಹಿಂದೆ ಮುಂದೆ ನೋಡದೇ ಸುಮ್ಮನೆ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಹಾಗೇ ಮೀನಾ 2ನೇ ಮದುವೆ ಆಗುತ್ತಾರೆ ಅಂತಾನೂ ಸುದ್ದಿ ಹಬ್ಬಿಸುತ್ತಿದ್ದಾರೆ. ಅದೆಲ್ಲವೂ ಸುಳ್ಳು ಎಂದು ಬೈಲ್ವಾನ್ ರಂಗನಾಥ್ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಪತಿ ನಿಧನದ ಬಳಿಕ ಮೀನಾ ಹೆಚ್ಚಾಗಿ ಸಿನಿಮಾಗಳಲ್ಲಿಯೂ ನಟಿಸಿಲ್ಲ. ಮೋಹನ್‌ಲಾಲ್ ಜೊತೆ ಒಂದೇ ಒಂದು ಚಿತ್ರದಲ್ಲಿ ನಟಿಸಿದ್ದಾರಷ್ಟೇ. ಅವರಿಗೆ ಪೋಷಕ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲ. ಹೀಗಾಗಿ ಅವರು ದೊಡ್ಡ ಮಟ್ಟದಲ್ಲೇನು ಸಂಪಾದನೆ ಮಾಡುತ್ತಿಲ್ಲ. ಇನ್ನು ಟೈಮ್ ಪಾಸ್‌ಗೆ ಸಿನಿಮಾ ಮಾಡಬೇಕು ಅಂತೇನು ಇಲ್ಲ. ಅವರ ಬಳಿ ಈಗಾಗಲೇ ಕೋಟಿಗಟ್ಟಲೇ ಆಸ್ತಿ ಇದೆ. ಅವರಿಗೆ ದುಡಿಯ ಬೇಕು ಅಂತಲೇ ಏನೂ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಮೀನಾಗೆ ಒಬ್ಬರು ಮಗಳು ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎರಡನೇ ಮದುವೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿದಾಗ ಮಗಳು ಕೂಡ ಅಮ್ಮನನ್ನು ನೋಯಿಸಬೇಡಿ ಎಂದು ಹೇಳಿದ್ದರು. ದಕ್ಷಿಣ ಭಾರತದ ಎಲ್ಲಾ ನಟರೊಂದಿಗೆ ಮೀನಾ ಸಂಬಂಧ ಉತ್ತಮವಾಗಿದೆ. ಮನಸ್ಸು ಮಾಡಿದರೆ ಅವರ ಸಿನಿಮಾಗಳಲ್ಲಿ ನಟಿಸಬಹುದು. ಆದರೆ, ಅದ್ಯಾಕೋ ಮೀನಾ ಮನಸ್ಸು ಮಾಡುತ್ತಿಲ್ಲ. ಎರಡನೇ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಹರಿದಾಡಿದ ಬೆನ್ನಲ್ಲೇ 300 ಕೋಟಿ ರೂಪಾಯಿ ಖರೀದಿ ಬಗ್ಗೆ ಸುದ್ದಿಯಾಗುತ್ತಿದೆ.


Click it and Unblock the Notifications











