ಕಮಲ್ ಹಾಸನ್ ಕೈ ಹಿಡಿದ ತಮಿಳಿನ ಹಿಟ್ ನಿರ್ದೇಶಕ

ನಟ ಕಮಲ್‌ಹಾಸನ್ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷಕ್ಕೂ ಮೇಲಾಯಿತು. ಅವರು ಅಭಿನಯಿಸಿದ ಕೊನೆಯ ಸಿನಿಮಾ 'ವಿಶ್ವರೂಪಂ 2'.

ರಾಜಕೀಯದಲ್ಲಿ ಬ್ಯುಸಿಯಾಗಿದ್ದರೂ ಸಹ ಅವರ ಮೊದಲ ಪ್ರೀತಿ ಸಿನಿಮಾವನ್ನು ಮರೆತಿಲ್ಲ ಕಮಲ್‌ ಹಾಸನ್, ಈಗಾಗಲೇ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಚಾಲ್ತಿಯಲ್ಲಿದೆ.

ಪ್ರಸ್ತುತ ಬಿಗ್‌ಬಾಸ್ ಶೋ ನಲ್ಲಿ ಬ್ಯುಸಿಯಾಗಿರುವ ನಟ, ಈ ನಡುವೆ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ತಮಿಳಿನ ಹಿಟ್ ನಿರ್ದೇಶಕರಲ್ಲಿ ಒಬ್ಬರ ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ.

ಮೂರೇ ಸಿನಿಮಾಗಳಿಂದ ಖ್ಯಾತವಾಗಿರುವ ನಿರ್ದೇಶಕ

ಮೂರೇ ಸಿನಿಮಾಗಳಿಂದ ಖ್ಯಾತವಾಗಿರುವ ನಿರ್ದೇಶಕ

ಮಾಡಿರುವ ಮೂರೇ ಸಿನಿಮಾಗಳಿಂದ ದೊಡ್ಡ ಹೆಸರು ಮಾಡಿರುವ ನಿರ್ದೇಶಕ ಲೋಕೇಶ್ ಕನಕರಾಜ್. ಅವರ ಹೊಸ ಸಿನಿಮಾ ಮಾಸ್ಟರ್ ಇನ್ನೂ ಬಿಡುಗಡೆ ಆಗಿಲ್ಲ. ಆ ವೇಳೆಗಾಗಲೇ ಮತ್ತೊಂದು ಸಿನಿಮಾಕ್ಕೆ ತಯಾರಿ ಆರಂಭಿಸಿಬಿಟ್ಟಿದ್ದಾರೆ.

ಎರಡು ಸಿನಿಮಾಗಳು ಸೂಪರ್ ಹಿಟ್

ಎರಡು ಸಿನಿಮಾಗಳು ಸೂಪರ್ ಹಿಟ್

'ಮಾನಗರಂ' ಮತ್ತು 'ಖೈದಿ' ಸಿನಿಮಾಗಳನ್ನು ನಿರ್ದೇಶಿಸಿರುವ ಲೋಕೇಶ್ ಕನಕರಾಜನ್ ತಮ್ಮದೇ ಆದ ಛಾಪನ್ನು ತಮಿಳು ಚಿತ್ರರಂಗದಲ್ಲಿ ಈಗಾಗಲೇ ಒತ್ತಿದ್ದಾರೆ. ಮಾನಗರಂ ಗೆ ಮುನ್ನಾ 'ಅವಿಯಲ್' ಎಂಬ ಸಿನಿಮಾವನ್ನು ಇತರೆ ನಿರ್ದೇಶಕರುಗಳೊಂದಿಗೆ ಸೇರಿ ನಿರ್ದೇಶಿಸಿದ್ದರು.

ಕಮಲ್‌ ಹಾಸನ್ 232 ಎಂದು ಕರೆಯಲಾಗುತ್ತಿದೆ

ಕಮಲ್‌ ಹಾಸನ್ 232 ಎಂದು ಕರೆಯಲಾಗುತ್ತಿದೆ

ಇದೀಗ ಕಮಲ್ ಹಾಸನ್ ಜೊತೆಗೆ ಮಾಡುತ್ತಿರುವ ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ರಸ್ತುತ 'ಕಮಲ್‌ಹಾಸನ್ 232' ಎಂದು ಕರೆಯಲಾಗುತ್ತಿದೆ. ಇದು ಕಮಲ್‌ ಹಾಸನ್ ಅವರ 232 ನೇ ಸಿನಿಮಾ.

Recommended Video

TRP ಗೋಸ್ಕರ ನನ್ನ ಕುಟುಂಬದ ನೆಮ್ಮದಿ ಹಾಳು ಮಾಡಿದ್ದು ಇಷ್ಟ ಆಗಿಲ್ಲ| Raksh | Filmibeat Kannada
'ಒಂದಾನೊಂದು ಕಾಲದಲ್ಲಿ ದೆವ್ವೊಂದು ಬದುಕಿತ್ತು'

'ಒಂದಾನೊಂದು ಕಾಲದಲ್ಲಿ ದೆವ್ವೊಂದು ಬದುಕಿತ್ತು'

ಪೋಸ್ಟರ್‌ ನಲ್ಲಿ 'ಒಂದಾನೊಂದು ಕಾಲದಲ್ಲಿ ದೆವ್ವವೊಂದು ಬದುಕಿತ್ತು' ಎಂಬ ಸಾಲುಗಳು ಕುತೂಹಲ ಮೂಡಿಸುತ್ತಿವೆ. ಕಮಲ್‌ ಹಾಸನ್ ಚಿತ್ರ ಮೂಡುವಂತೆ ಗನ್ನುಗಳನ್ನು ಗುಡ್ಡೆಯಾಕಿರುವ ಚಿತ್ರ ಇದೊಂದು ಅಂಡರ್‌ವರ್ಲ್ಡ್ ಕತೆಯಾ ಎಂಬ ಅನುಮಾನವನ್ನೂ ಮೂಡಿಸುತ್ತಿದೆ.

More from Filmibeat

English summary
Tamil hit director Lokesh Kanakaraj will direct Kamal Haasan's next movie. This will be Kamal's 232 movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X