"ಖುಷ್ಭೂ ಹಳೆ ಹಂಡೆ", "ಅಣ್ಣಾಮಲೈ ಹೆಣ್ಣಿನಂತೆ ಕಾಣುತ್ತಾನೆ" ಎಂದಿದ್ದ ಉಚ್ಚಾಟಿತ ಶಾಸಕ ಅರೆಸ್ಟ್

ತಮಿಳುನಾಡಿನ ಬಿಜೆಪಿ ನಾಯಕಿ ಖುಷ್ಭೂ ಸುಂದರ್, ಬಿಜೆಪಿ ಮುಖಂಡ ಅಣ್ಣಾಮಲೈ ಹಾಗೂ ರಾಜ್ಯಪಾಲ ಆರ್‌ಎನ್ ರವಿ ವಿರುದ್ಧ ಡಿಎಂಕೆ ಶಾಸಕ ಕೀಳಾಗಿ ಮಾತಾಡಿದ್ದರು. ಅದೇ ಈಗ ಡಿಎಂಕೆ ಎಂಎಲ್‌ಎಗೆ ಕಂಟವಾಗಿ ಕಾಡುತ್ತಿದೆ.

ಡಿಎಂಕೆ ಪಕ್ಷದ ಹಿರಿಯ ಶಾಸಕ ಶಿವಾಜಿ ಕೃಷ್ಣಮೂರ್ತಿ ತಮಿಳುನಾಡಿನ ಬಿಜೆಪಿ ನಾಯಕಿ ಖುಷ್ಭೂ ಸುಂದರ್ ವಿರುದ್ಧ ತುಂಬಾನೇ ಕೀಳಾಗಿ ಮಾತಾಡಿದ್ದರು. ಈ ಸಂಬಂಧ ಖುಷ್ಭೂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಆ ಸಂಬಂಧ ಶಾಸಕ ಶಿವಾಜಿ ಕೃಷ್ಣಮೂರ್ತಿಯನ್ನು ಬಂಧಿಸಲಾಗಿದೆ.

DMK MLA Shivaji Krishnamurthy arrested who commented Khushboo, Annamalai and Governor

"ಖುಷ್ಭೂ ಹಳೆ ಹಂಡೆ"

ಡಿಎಂಕೆ ಪಕ್ಷದ ಹಿರಿಯ ಶಾಸಕರಾಗಿರುವ ಶಿವಾಜಿ ಕೃಷ್ಣಮೂರ್ತಿ ಹೀಗೆ ಒಂದಲ್ಲ ಒಂದು ಹೇಳಿಕೆ ನೀಡಿ ವಿವಾದಕ್ಕೆ ಸಿಕ್ಕಿಕೊಳ್ಳುತ್ತಾರೆ. ಇತ್ತೀಚೆಗೆ ಸಮಾರಂಭವೊಂದರಲ್ಲಿ ಖುಷ್ಭೂ ವಿರುದ್ಧ ಕೆಟ್ಟದಾಗಿ ಮಾತಾಡಿದ್ದಾರು. ಈ ವಿಡಿಯೋವನ್ನು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಪಕ್ಷದ ನಾಯಕ ಎಂಕೆ ಸ್ಟ್ಯಾಲಿನ್‌ಗೆ ಖುಷ್ಭೂ ಟ್ಯಾಗ್ ಮಾಡಿ ಪ್ರಶ್ನೆ ಮಾಡಿದ್ದರು.

ಸಾರ್ವಜನಿಕ ಸಭೆಯಲ್ಲಿ ಶಿವಾಜಿ ಕೃಷ್ಣಮೂರ್ತಿ " ಖುಷ್ಭೂ ಹಳೆ ಹಂಡೆ ಇದ್ದಂತೆ. ಆದರೆ ಏನ್ಮಾಡ್ತೀರಿ ಎಲ್ಲರಿಗೂ ಖುಷ್ಬುನೇ ಬೇಕು. ಖುಷ್ಭೂ ಬೇಕು ಖುಷ್ಬು ಬೇಕು ಅಂತಾರೆ. ಅವಳು ಹಳೆ ಹಂಡೆ ಆಕೆಯನ್ನು ಅಷ್ಟೊಂದು ಯಾಕೆ ಕೇಳುತ್ತೀರಿ" ಎಂದು ಮಾತಾಡಿದ್ದರು. ಅದೇ ವಿಡಿಯೋ ಈಗ ಶಿವಾಜಿ ಕೃಷ್ಣಮೂರ್ತಿಗೆ ಸಂಕಷ್ಟಕ್ಕೆ ಸಿಲುಕಿಸಿದೆ.

ಪೊಲೀಸರಿಗೆ ದೂರು ನೀಡಿದ್ದ ಖುಷ್ಭೂ

ಡಿಎಂಕೆ ಶಾಸಕ ಶಿವಾಜಿ ಕೃಷ್ಣಮೂರ್ತಿಯನ್ನು ಬಾಯಿ ಸರಿಯಿಲ್ಲ. ಬಾಯಿಗೆ ಬಂದಂತೆ ಮಾತಾಡುತ್ತಾರೆ. ಇದರಿಂದ ಸ್ವತ: ಡಿಎಂಕೆ ಪಕ್ಷದ ಮುಖಂಡರು ಮುಜುಗರಕ್ಕೆ ಒಳಗಾಗಿದ್ದರು. ಖುಷ್ಭೂ ವಿರುದ್ಧ ಶಿವಾಜಿ ಕೃಷ್ಣಮೂರ್ತಿ ಆಡಿದ ಮಾತು ವೈರಲ್ ಆಗುತ್ತಿದ್ದಂತೆ ಡಿಎಂಕೆ ಪಕ್ಷದಿಂದ ಉಚ್ಚಾಟನೆ ಮಾಡಿತ್ತು.

ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರಿಂದ ಖುಷ್ಭೂ ಕೂಡ ಪೊಲೀಸರಿಗೆ ದೂರ ನೀಡಿದ್ದರು. ಇತ್ತ ಶಿವಾಜಿ ಕೃಷ್ಣಮೂರ್ತಿಯನ್ನು ಡಿಎಂಕೆ ಪಕ್ಷ ಉಚ್ಚಾಟನೆ ಮಾಡುತ್ತಿದ್ದಂತೆ ಅತ್ತ ಪೊಲೀಸರು ಶಾಸಕನನ್ನು ಅರೆಸ್ಟ್ ಮಾಡಿದ್ದಾರೆ.

DMK MLA Shivaji Krishnamurthy arrested who commented Khushboo, Annamalai and Governor

ಅಣ್ಣಾಮಲೈ, ರಾಜ್ಯಪಾಲ ವಿರುದ್ಧ ಕೀಳು ಪದ

ಶಿವಾಜಿ ಕೃಷ್ಣಮೂರ್ತಿ ಕೆಲವು ದಿನಗಳ ಹಿಂದಷ್ಟೇ ತಮಿಳುನಾಡಿನ ರಾಜ್ಯಪಾಲರ ವಿರುದ್ಧ ಕೆಟ್ಟದಾಗಿ ಮಾತಾಡಿದ್ದರು. ಈ ಸಂಬಂಧ ಡಿಎಂಕೆ ಪಕ್ಷ ತನ್ನ ಶಾಸಕ ಶಿವಾಜಿ ಕೃಷ್ಣಮೂರ್ತಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡಿತ್ತು. ಬಳಿಕ ಶಿವಾಜಿ ಕ್ಷಮೆ ಯಾಚಿಸಿದ್ದರು. ಹೀಗಾಗಿ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು.

ಅಣ್ಣಾಮಲೈ ವಿರುದ್ಧ ಕೀಳಾಗಿ ಮಾತಾಡಿದ್ದರು. "ಅಣ್ಣಾಮಲೈ ಒಂದು ಸೈಡ್‌ನಿಂದ ಹೆಣ್ಣಿನಂತೆ ಕಾಣುತ್ತಾನೆ. ಇನ್ನೊಂದ್ಕಡೆ ಗಂಡಿನಂತೆ ಕಾಣುತ್ತಾನೆ" ಎಂದು ಕಮೆಂಟ್ ಮಾಡಿದ್ದರು. ಈ ಮಾತುಗಳಿಗೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಖುಷ್ಭೂ ವಿರುದ್ಧವೂ ಮಾತಾಡಿ ಬಂಧನಕ್ಕೆ ಒಳಗಾಗಿದ್ದಾರೆ.

More from Filmibeat

English summary
DMK MLA Shivaji Krishnamurthy arrested who commented Khushboo, Annamalai and Governor, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X