Aishwarya Arjun: ಮಗಳ ಲವ್ ಸ್ಟೋರಿ ಅರ್ಜುನ್ ಸರ್ಜಾಗೆ ಗೊತ್ತಾಗಿದ್ದು ಹೇಗೆ? ಆಂಜನೇಯನ ಸನ್ನಿಧಿಯಲ್ಲೇ ಗ್ರೀನ್ ಸಿಗ್ನಲ್

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಿಶ್ವಿತಾರ್ಥ ತಮಿಳಿನ ಹಾಸ್ಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಜೊತೆ ನೆರವೇರಿದೆ. ಎರಡೂ ಕುಟುಂಬಗಳೂ ಖುಷಿ ಖುಷಿಯಿಂದ ಈ ಎಂಗೇಜ್ಮೆಂಟ್ ಅನ್ನು ನೆರವೇರಿಸಿದ್ದಾರೆ. ಈ ಶುಭ ಸಮಾರಂಭದ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ರಾಮಯ್ಯ ಲವ್ ಸ್ಟೋರಿಯಲ್ಲೊಂದು ವಿಶೇಷತೆಯಿದೆ. ಇಬ್ಬರೂ ಒಂದೇ ಒಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೂ, ಇಬ್ಬರ ನಡುವೆ ಪ್ರೀತಿ ಹುಟ್ಟಿ ಅದು ಮದುವೆವರೆಗೂ ಬಂದು ನಿಂತಿದೆ. ಅಷ್ಟಕ್ಕೂ ಇಬ್ಬರೂ ಮೊದಲ ಬಾರಿಗೆ ಒಂದು ರಿಯಾಲಿಟಿ ಶೋನಲ್ಲಿ ಮುಖಾ-ಮುಖಿಯಾಗಿದ್ದರು.

arjun-sarja-daughter-aishwarya-engagement

ಉಮಾಪತಿ ರಾಮಯ್ಯ 'ಸರ್ವೈವರ್' ಅನ್ನೋ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ರಿಯಾಲಿಟಿ ಶೋ ನಿರೂಪಣೆ ಮಾಡಿದ್ದು ಅರ್ಜುನ್ ಸರ್ಜಾ. ಈ ರಿಯಾಲಿಟಿ ಶೋ ಶೂಟಿಂಗ್ ವೇಳೆ ಐಶ್ವರ್ಯಾ ಅರ್ಜುನ್ ಸೆಟ್ಟಿಗೆ ಭೇಟಿ ನೀಡಿದ್ದರು. ಆಗ ಉಮಾಪತಿ ರಾಮಯ್ಯರನ್ನು ಪರಿಚಯ ಮಾಡಿಕೊಡಲಾಗಿತ್ತು. ಅಲ್ಲಿಂದ ಇಬ್ಬರಲ್ಲೂ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿತ್ತು.

ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ ಅರ್ಜುನ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಚಿತ್ರರಂಗದಲ್ಲಿ ನೆಲೆಯನ್ನು ಕಂಡುಕೊಳ್ಳಲು ಸಾಹಸ ಮಾಡುತ್ತಿದ್ದರು. ಇದೇ ವೇಳೆ ಇನ್ನೊಂದು ಟ್ರ್ಯಾಕ್‌ನಲ್ಲಿ ರಿಯಲ್ ಲೈಫ್ ಲವ್‌ಸ್ಟೋರಿನೂ ನಡೆಯುತ್ತಿತ್ತು. ಐಶ್ವರ್ಯಾ ಹಾಗೂ ಉಮಾಪತಿ ಇಬ್ಬರೂ ಪ್ರೀತಿಸುತ್ತಿರುವ ವಿಷಯ ಒಂದು ವಿಶೇಷ ಸಂದರ್ಭದಲ್ಲಿ ರಿವೀಲ್ ಆಗಿತ್ತು.

arjun-sarja-daughter-aishwarya-engagement

2021ರಲ್ಲಿ ಅರ್ಜುನ್ ಸರ್ಜಾ ಕಟ್ಟಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಉದ್ಘಾಟನೆ ಸಮಾರಂಭವಿತ್ತು. ಈ ವೇಳೆ ಅರ್ಜುನ್ ಸರ್ಜಾ ಹಾಗೂ ತಂಬಿ ರಾಮಯ್ಯ ಇಬ್ಬರ ಕುಟುಂಬವೂ ಒಟ್ಟಿಗೆ ಸೇರಿತ್ತು. ಈ ವೇಳೆ ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ಗಾಢವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಅನ್ನೋ ವಿಷಯ ಗೊತ್ತಾಗಿತ್ತು. ಆ ಬಳಿಕ ಎರಡೂ ಕುಟುಂಬ ಕೂತು ಇಬ್ಬರ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟರು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಐಶ್ವರ್ಯಾ ಅರ್ಜುನ್ ಫೆಬ್ರವರಿ 10, 1990ರಂದು ಜನಿಸಿದ್ದರೆ, ಉಮಾಪತಿ ಸೆಪ್ಟೆಂಬರ್ 19, 1989 ಹುಟ್ಟಿದ ದಿನ. ಇಬ್ಬರ ನಡುವೆ ಹೆಚ್ಚು ಕಡಿಮೆ 5 ತಿಂಗಳ ಅಂತರವಿದೆ. 2023ರಲ್ಲಿ 'ಪಟ್ಟತು ಯಾನೈ' ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದೇ ಉಮಾಪತಿ 2017ರಲ್ಲಿ 'ಅದಾಗಪ್ಪತ್ತು ಮಗಜನಂಗಳೈ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದಾರೆ.

ಐಶ್ವರ್ಯಾ ಅರ್ಜುನ್ ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಸ್ವತ: ಅರ್ಜುನ್ ಸರ್ಜಾ ನಿರ್ದೇಶನ, ನಿರ್ಮಾಣ ಮಾಡುತ್ತಿದ್ದಾರೆ. ಇತ್ತ ಉಮಾಪತಿ ರಾಮಯ್ಯ ಕೂಡ ಹೊಸ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದು, ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ, ಮದುವೆ ಯಾವಾಗ ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಮುಂದಿನ ವರ್ಷ ಜನವರಿ, ಫೆಬ್ರವರಿ ವೇಳೆಗೆ ಮದುವೆ ನಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Aishwarya Umapathy Engagement: During the Anjaneya temple opening ceremony, Arjun Sarja learned about their relationship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X