ಅಪ್ಪ ಆಸ್ಪತ್ರೆಯಲ್ಲಿ, ಮಕ್ಕಳು ಎಂಜಾಯ್ ಮೂಡ್‌ನಲ್ಲಿ
ಭಾರತೀಯ ಸಿನಿಮಾರಂಗ ಕಂಡ ಅತ್ಯಂತ ಪ್ರತಿಭಾವಂತ ನಟರಲ್ಲಿ ಕಮಲ್ ಹಾಸನ್ ಅಗ್ರಗಣ್ಯರು. ಪಾತ್ರ ಯಾವುದೇ ಆಗಲಿ ಅದರೊಳಗೆ ಪರಕಾಯ ಪ್ರವೇಶ ಮಾಡಿ ನಟಿಸುವ ನಟ ಕಮಲ್ ಹಾಸನ್. ತಮಿಳು, ತೆಲುಗು, ಹಿಂದಿ, ಕನ್ನಡ ಮಲಯಾಳಂ, ಇಂಗ್ಲಿಷ್ ಭಾಷೆಗಳಲ್ಲಿ ಅಭಿನಯಿಸಿರುವ ಕಮಲ್ ಹಾಸನ್ ಸದಾ ಪ್ರಯೋಗಾತ್ಮಕ ಚಿತ್ರಗಳಲ್ಲಿ ಚಿತ್ರಗಳನ್ನು ನಟಿಸುವುದು ಅಲ್ಲದೆ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಕೂಡ ಎತ್ತಿದ ಕೈ. ಹೀಗಾಗಿಯೇ ಕಮಲ್ ಹಾಸನ್ ಭಾರತ ಸಿನಿಮಾರಂಗದ ಅತ್ಯಂತ ಪ್ರತಿಭಾವಂತ ನಟನಾಗಿ ಸದಾ ಅವಿಸ್ಮರಣೀಯ ಪಾತ್ರಗಳನ್ನೇ ಮಾಡಿದ್ದಾರೆ.
ನವೆಂಬರ್ 7, 1954 ರಲ್ಲಿ ಜನಸಿದ ಭಾರತೀಯ ಸಿನಿಮಾರಂಗ ಕಂಡ ಅತ್ಯುತ್ತಮ ನಟರಲ್ಲಿ ಒಬ್ಬರಾದ ಕಮಲ್ ಹಾಸನ್ ಸ್ಕ್ರೀನ್ ಪ್ಲೇ ರೈಟರ್, ನಿರ್ದೇಶಕ, ನಿರ್ಮಾಪಕ, ರಾಜಕಾರಣಿ ಮತ್ತು ನೃತ್ಯ ಸಂಯೋಜಕರು ಕೂಡ. ಎ. ಭೀಮಸಿಂಗ್ ನಿರ್ದೇಶಿಸಿದ 1960 ರ ತಮಿಳು ಚಲನಚಿತ್ರ 'ಕಲತ್ತೂರ್ ಕಣ್ಣಮ್ಮ'ನಲ್ಲಿ ಅವರು ಬಾಲನಟನಾಗಿ ಪಾದಾರ್ಪಣೆ ಮಾಡಿದರು, ಇದು ಅವರಿಗೆ ರಾಷ್ಟ್ರಪತಿಗಳ ಚಿನ್ನದ ಪದಕವನ್ನು ತಂದುಕೊಟ್ಟಿತ್ತು. ಅಂದಿನಿಂದ ಅವರು ತಮಿಳು,ತೆಲುಗು, ಮಲಯಾಳಂ, ಕನ್ನಡ, ಹಿಂದಿ ಒಳಗೊಂಡಂತೆ ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 230 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾಲಕಲಾವಿದನಾಗಿ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ಕಮಲ್ ನಂತರ ಓದಿನ ಸಲುವಾಗಿ ಒಂದಷ್ಟು ಸಮಯ ಸಿನಿಮಾರಂಗದಿಂದ ದೂರವಿದ್ದರು.
ಕೆಲ ಸಮಯ ಸಿನಿಮಾರಂಗದಿಂದ ದೂರವಿದ್ದ ಕಮಲ್ ಹಾಸನ್ ಇದೇ ಸಂದರ್ಭದಲ್ಲಿ ಭರತನಾಟ್ಯಂ ನೃತ್ಯದಲ್ಲಿ ಸಾಕಷ್ಟು ಪರಿಣತಿಯನ್ನು ಕೂಡ ಪಡೆದುಕೊಂಡರು. ಅಲ್ಲದೆ ನಂತರ ಸಿನಿಮಾರಂಗಕ್ಕೆ ವಾಪಸ್ ಬಂದು ನೃತ್ಯ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ನೃತ್ಯ ಸಂಯೋಜನೆಯ ಮೇಲೆ ಕೇಂದ್ರೀಕರಿಸಿದರು ಮತ್ತು ಸಹಾಯಕ ನೃತ್ಯ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದರು. 1973 ರಲ್ಲಿ ಕಮಲ್ ಹಾಸನ್ ಅವರು ತಮ್ಮ ಮಾರ್ಗದರ್ಶಕ ಎಂದು ಪರಿಗಣಿಸುವ ಕೆ. ಬಾಲಚಂದರ್ ಅವರ 'ಅರಂಗ್ರೇಟಂ' ಚಿತ್ರದ ಮೂಲಕ ನಟನಾಗಿ ಕಂಬ್ಯಾಕ್ ಮಾಡಿದರು.
ಆನಂತರ ಹಲವಾರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವುದನ್ನು ಮುಂದುವರೆಸಿದರು. ಉದಾಹರಣೆಗೆ 'ಸೊಲ್ಲತಾನ್ ನೀನೈಕ್ಕಿರೆನ್' (1973) ಮತ್ತು 'ನಾನ್ ಅವನಿಲ್ಲೈ' (1974), ಇವುಗಳಲ್ಲಿ ಹೆಚ್ಚಿನವು ಬಾಲಚಂದರ್ ನಿರ್ದೇಶಿಸಿದವು. 1974 ರ ಮಲಯಾಳಂ ಚಲನಚಿತ್ರ 'ಕನ್ಯಾಕುಮಾರಿ' ಯೊಂದಿಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬೆಳಕಿಗೆ ಬಂದರು.ಅದರಲ್ಲಿನ ಅವರ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟ (ಮಲಯಾಳಂ) ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದುಕೊಂಡರು. ಅದರ ನಂತರ, ಅವರು ತಮಿಳು ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ಸರಣಿ ಚಿತ್ರಗಳಲ್ಲಿ ನಟಿಸಿದರು.

ಕೆ ಬಾಲಚಂದರ್ ಜೊತೆ ಸಿನಿಮಾ
ತಮಿಳು ಚಿತ್ರರಂಗದಲ್ಲಿ K. ಬಾಲಚಂದರ್ ಅವರ 'ಅಪೂರ್ವ ರಾಗಂಗಲ್'(1975) ಈ ಚಿತ್ರವು ಅವರಿಗೆ ಎರಡನೇ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. 1974 ಮತ್ತು 1978 ರ ನಡುವೆ, ಅವರು ಅತ್ಯುತ್ತಮ ನಟ ಒಳಗೊಂಡಂತೆ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದರು. ಕಮಲ್ ಅವರು 'ರಾಜ ಪಾರ್ವೈ '(1981) ಗಾಗಿ ನಿರ್ಮಾಪಕರಾದರು, ಇದರಲ್ಲಿ ಅವರು ಅಂಧ ಸಂಗೀತಗಾರನ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಚಲನಚಿತ್ರವನ್ನು "ಹಾಸನ್ ಬ್ರದರ್ಸ್" ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಯಿತು, ನಂತರ ಅದನ್ನು ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಎಂದು ಮರುನಾಮಕರಣ ಮಾಡಲಾಯಿತು.

ಹಿಂದಿ ಸಿನಿಮಾದಲ್ಲೂ ಸಿಕ್ಕಿತು ಭಾರಿ ಯಶಸ್ಸು
ಒಂದಡೆ ತಮಿಳು ಚಿತ್ರರಂಗದಲ್ಲಿ ವೇಗವಾಗಿ ಬೆಳೆಯುತ್ತಿದ್ದ ಕಮಲ್ ಹಾಸನ್ ಇದೇ ಸಮಯದಲ್ಲಿ ತೆಲುಗು ಮತ್ತು ಹಿಂದಿ ಸಿನಿಮಾರಂಗಗಳನ್ನು ಪ್ರವೇಶಿಸಿ ಅಲ್ಲಿ ಕೂಡ ಭಾರಿ ಯಶಸ್ಸನ್ನು ಕಂಡರು. K. ಬಾಲಚಂದರ್ ಅವರ 'ಏಕ್ ದುಜೆ ಕೆ ಲಿಯೇ' (1981) ನೊಂದಿಗೆ ಬಾಲಿವುಡ್ ಗೆ ಹಾಸನ್ ಪಾದಾರ್ಪಣೆ ಮಾಡಿದರು, ಇದು ಅವರ 1978 ರ ತೆಲುಗು ಚಿತ್ರ 'ಮಾರೊ ಚಾರಿತ್ರ'ದ ರಿಮೇಕ್ ಆಗಿತ್ತು. 'ಮೂಂದ್ರಂ ಪಿರೈ' (1982) ಚಿತ್ರದಲ್ಲಿನ ವಿಸ್ಮೃತಿಯ ಹುಡುಗಿಯನ್ನು ನೋಡಿಕೊಳ್ಳುವ ಶಾಲಾ ಶಿಕ್ಷಕನ ಪಾತ್ರವು ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ತಂದುಕೊಟ್ಟಿತು. ನಂತರ ಅವರು ಪಂಚು ಅರುಣಾಚಲಂ ಬರೆದ 'ಸಕಲಕಲಾ ವಲ್ಲವನ್'ನಲ್ಲಿ ನಟಿಸಿದರು, ಇದು ಕಮಲ್‌ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ತ್ರಿಕೋನ ಪ್ರೇಮಕಥೆಯಾದ ರಮೇಶ್ ಸಿಪ್ಪಿಯ ಹಿಂದಿ ಚಲನಚಿತ್ರ 'ಸಾಗರ್ '(1985) ಕೂಡ ಅಪಾರವಾದ ಯಶಸ್ಸನ್ನು ತಂದುಕೊಟ್ಟಿತು.

ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ನಟ
ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಶನಲ್ ಅಡಿಯಲ್ಲಿ, ಅವರು ಅನೇಕ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. 'ವಿಕ್ರಮ್' (1986), 'ಅಪೂರ್ವ ಸಾಗೋಧರರ್ಗಳ್' (1989), 'ಥೇವರ್ ಮಗನ್ '(1992) ಮತ್ತು 'ಹೇ ರಾಮ್ '(2000) ಇವುಗಳಲ್ಲಿ ಪ್ರಮುಖವಾದದ್ದು. ನಿರ್ಮಾಪಕರಾಗಿ ಅವರು 'ಅಪೂರ್ವ ಸಗೋಧರರ್ಗಳ್' ಮತ್ತು 'ಥೇವರ್ ಮಗನ್' ಫಿಲಂ ಫೇರ್ ಪ್ರಶಸ್ತಿ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಕಮಲ್ ಅಭಿನಯದ ಏಳು ಚಲನಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನಟನೊಬ್ಬನ ಅಭಿನಯದ ಚಿತ್ರಗಳು ಪಡೆದ ಅತ್ಯಧಿಕ ಪ್ರಶಸ್ತಿಗಳು ಇದಾಗಿದೆ. 'ವಿಶ್ವರೂಪಂ' (2013), ಅವರು ನಿರ್ಮಿಸಿ, ನಿರ್ದೇಶಿಸಿದರು, ಈ ಚಿತ್ರಕ್ಕಾಗಿ
60 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದರು.

ಚುನಾವಣೆಯಲ್ಲಿ ಸೋಲು, ಸಿನಿಮಾರಂಗದಲ್ಲಿ ಸಕ್ರಿಯ
ಕಮಲ್ ಹಾಸನ್ ಕಳೆದ 6 ತಿಂಗಳ ಹಿಂದೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ
ಕೊಯಂಬತ್ತೂರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಅವರ ಸಮೀಪದ ಎದುರಾಳಿ ಬಿಜೆಪಿಯ ವಾಸಂತಿ ಶ್ರೀನಿವಾಸನ್ ಎದುರು ಸೋಲನ್ನು ಕಂಡರು. ಸದ್ಯಕ್ಕೆ ಸಕ್ರಿಯ ರಾಜಕೀಯದಿಂದ ದೂರ ಸರಿದಿರುವ ಕಮಲ್ ತಮಿಳು 'ಬಿಗ್ ಬಾಸ್ 5', ನಿರೂಪಿಸುತ್ತಿರುವುದರ ಜೊತೆಗೆ 'ಇಂಡಿಯನ್ 2' ಚಿತ್ರದಲ್ಲೂ ಕೂಡ ಅಭಿನಯಿಸುತ್ತಿದ್ದಾರೆ.

ಕೊರೊನಾ ಪಾಸಿಟಿವ್, ಆಸ್ಪತ್ರೆ ಸೇರಿದ ಕಮಲ್
ಇತ್ತೀಚೆಗೆ ನಟ ಕಮಲ್ ಹಾಸನ್ ಅವರಿಗೆ ಕೊರೊನಾ ದೃಢಪಟ್ಟಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಮಲ್ ಆರೋಗ್ಯದ ವಿಚಾರವಾಗಿ ಅಭಿಮಾನಿಗಳು ಚಿಂತಾಕ್ರಾಂತರಾಗಿದ್ದರು, ಅಭಿಮಾನಿಗಳಿಗೆ ಇದೇ ವಿಚಾರವಾಗಿ ಕಮಲ್ ಮಗಳು ನಟಿ ಶ್ರುತಿ ಹಾಸನ್ ಟ್ವೀಟ್ ಮೂಲಕ 'ತಂದೆ ಅವರು ಆರೋಗ್ಯವಾಗಿದ್ದಾರೆ. ಅಭಿಮಾನಿಗಳು ಚಿಂತಿಸುವ ಅಗತ್ಯವಿಲ್ಲ, ಶೀಘ್ರದಲ್ಲೇ ಗುಣಮುಖರಾಗಿ ಹೊರ ಬರಲಿದ್ದಾರೆ' ಅಂತ ಹೇಳಿದ್ದಾರೆ.

ಅಪ್ಪ ಆಸ್ಪತ್ರೆಯಲ್ಲಿ, ಮಕ್ಕಳು ಎಂಜಾಯ್ ಮೂಡ್‌ನಲ್ಲಿ
ಇನ್ನು ಇತ್ತ ಚೆನ್ನೈನಲ್ಲಿ ಕಮಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಅತ್ತ ಮುಂಬೈನಲ್ಲಿ ಶ್ರುತಿ ಮತ್ತು ಆಕೆಯ ತಂಗಿ ಅಕ್ಷರಾ ಹಾಸನ್ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಶ್ರುತಿ ಹಾಸನ್ ಮುಂಬೈನ ಫ್ಲಾಟ್‌ನಲ್ಲಿ ತನ್ನ ಗೆಳೆಯ ಶಂತನು ಹಜಾರಿಕಾ ಜೊತೆ ಇರುತ್ತಾರೆ. ಅಕ್ಷರಾ ಹಾಸನ್ ಅಕ್ಕನನ್ನು ಜೊತೆಗೂಡಿದ್ದಾಳೆ. ಹಾಗಾಗಿ ಅಕ್ಷರಾ ಹಾಸನ್ ಆಗಮನದಿಂದ ಶ್ರುತಿ ಹಾಸನ್ ಫುಲ್ ಪಾರ್ಟಿ ಮೂಡ್ ಗೆ ಹೋಗಿದ್ದಾರಂತೆ. ಶ್ರುತಿ ಹಾಸನ್, ಅಕ್ಷರ ಹಾಸನ್, ಶಾಂತನು ಸೇರಿ ನಾನಾ ಹಂಗಾಮ ಮಾಡುತ್ತಿದ್ದಾರೆ. ಇನ್ನು ಮೂವರು ಸೇರಿ ಫುಲ್ ಪಾರ್ಟಿ ಮಾಡುತ್ತಿರುವ ಅನೇಕ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶ್ರುತಿ ಹಾಸನ್ ಸದ್ಯ 'ಸಲಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಯ್ಯ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎನ್‌ಬಿಕೆ 107 ಚಿತ್ರದಲ್ಲಿ ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತ ಕಮಲ್ ಹಾಸನ್ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಕ್ಕಳು ಮುಂಬೈನಲ್ಲಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನ ಬರುವಿಕೆಗಾಗಿ ಕಾಯುತ್ತಿದ್ದಾರೆ.


Click it and Unblock the Notifications











