ವಿಜಯ್ ಸೇತುಪತಿ ಅಲ್ಲ.. ಮಧುರ್ ಮಿತ್ತಲ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ '800' ಪೋಸ್ಟರ್ ರಿಲೀಸ್!
ಕ್ರಿಕೆಟ್ ಜಗತ್ತು ಕಂಡ ಲೆಜೆಂಡ್ ಆಟಗಾರರಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಕೂಡ ಒಬ್ಬರು. ಅವರ ವೃತ್ತಿ ಬದುಕಿನಲ್ಲಿ ಸುಮಾರು 800 ವಿಕೆಟ್‌ಗಳನ್ನು ಪಡೆದು ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಹೀಗಾಗಿ ಮುರಳೀಧರ್ ಅವರ ಬಯೋಪಿಕ್ ಮಾಡುವುದಕ್ಕೆ ಕಾಲಿವುಡ್ ತುದಿಗಾಲಲ್ಲಿ ನಿಂತಿದೆ.
ಮುತ್ತಯ್ಯ ಮುರಳೀಧರನ್ ಬಯೋಪಿಕ್‌ಗೆ '800' ಅಂತ ಟೈಟಲ್ ಫಿಕ್ಸ್ ಮಾಡಲಾಗಿದೆ. ಆದರೆ, ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ಈ ಸಿನಿಮಾಗೆ ತಮಿಳುನಾಡಿನಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಮುತ್ತಯ್ಯ ಮುರಳೀಧರನ್ ಬಯೋಪಿಕ್‌ನಲ್ಲಿ ನಟಿಸಬೇಕಿದ್ದ ವಿಜಯ್ ಸೇತುಪತಿ ಸಿನಿಮಾದಿಂದ ಹಿಂದೆ ಸರಿದಿದ್ದರು.

ಅಲ್ಲಿಂದ ಮತ್ತೆ ಮುತ್ತಯ್ಯ ಮುರಳೀಧರನ್ ಬಯೋಪಿಕ್ ಬಗ್ಗೆ ಸುಳಿವೇ ಇರಲಿಲ್ಲ. ಇಂದು (ಏಪ್ರಿಲ್ 17) ಶ್ರೀಲಂಕಾದ ಈ ಲೆಜೆಂಡ್ ಕ್ರಿಕೆಟರ್ ಹುಟ್ಟುಹಬ್ಬ. ಈ ಕಾರಣಕ್ಕೆ ಚಿತ್ರತಂಡ ಸಿನಿಮಾದ ಹೊಚ್ಚ ಹೊಸ ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಈ ಪೋಸ್ಟರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್
ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆನೇ ಕ್ರಿಕೆಟರ್‌ಗಳ ಬಯೋಪಿಕ್ ರಿಲೀಸ್ ಆಗಿದೆ. ಮೊಹಮ್ಮದ್ ಅಜರುದ್ದೀನ್, ಸಚಿನ್ ಹಾಗೂ ಧೋನಿ ಜೀವನಾಧಾರಿತ ಸಿನಿಮಾಗಳು ರಿಲೀಸ್ ಆಗಿವೆ. ಈಗ ಕ್ರಿಕೆಟ್ ಜಗತ್ತಿನ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಬಯೋಪಿಕ್‌ಗೆ ಚಿತ್ರತಂಡ ಮುಂದಾಗಿದೆ. 800 ವಿಕೆಟ್ ಪಡೆದಿದ್ದರಿಂದ ಶ್ರೀಲಂಕಾ ಸ್ಪಿನ್ನರ್ ಬಯೋಪಿಕ್‌ಗೆ '800' ಎಂದು ಟೈಟಲ್ ಇಡಲಾಗಿದೆ.
'800' ಸಿನಿಮಾವನ್ನು ಎಂ ಎಸ್ ಶ್ರೀಪತಿ ನಿರ್ದೇಶನ ಮಾಡುತ್ತಿದ್ದಾರೆ. ವಿವೇಕ್ ರಂಗಾಚಾರಿ ಈ ಬಯೋಪಿಕ್ ನಿರ್ಮಾಣಕ್ಕೆ ಮುಂದಾಗಿದ್ದು,ಕ್ರಿಕೆಟರ್ ಪಾತ್ರದಲ್ಲಿ ಸ್ಲಾಮ್‌ಡಾಗ್ ಮಿಲಿಯನೇರ್ ಖ್ಯಾತಿಯ ಮಧುರ್ ಮಿತ್ತಲ್ ನಟಿಸುತ್ತಿದ್ದಾರೆ.
ವಿಜಯ್ ಸೇತುಪತಿ ಅಲ್ಲ.. ಮಧುರ್ ಮಿತ್ತಲ್
ಮುತ್ತಯ್ಯ ಮುರಳೀಧರನ್ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಅದ್ಭುತವಾದ ಗಿಫ್ಟ್ ಕೊಟ್ಟಿದೆ. ಈ ಹಿಂದೆ ವಿಜಯ್ ಸೇತುಪತಿಯನ್ನು ಈ ಸಿನಿಮಾಗೆ ಆಯ್ಕೆ ಮಾಡಲಾಗಿತ್ತು. ಆದರೆ, ತಮಿಳರು ಈ ಬಯೋಪಿಕ್ ವಿರುದ್ಧ ಕಿಡಿಕಾರಿದ್ದರು. ಹೀಗಾಗಿ ವಿಜಯ್ ಸೇತುಪತಿ '800' ಸಿನಿಮಾದಿಂದ ಹಿಂದೆ ಸರಿದಿದ್ದರು.
ಈಗ ವಿಜಯ್ ಸೇತುಪತಿ ಮಾಡಬೇಕಿದ್ದ ಪಾತ್ರವನ್ನು 'ಸ್ಲಾಮ್‌ಡಾಗ್ ಮಿಲಿಯನೇರ್' ಖ್ಯಾತಿಯ ಮಧುರ್ ಮಿತ್ತಲ್ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ಈ ಸಿನಿಮಾವನ್ನು ಶ್ರೀಲಂಕಾ, ಭಾರತ ಹಾಗೂ ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ಮಾಡುವ ಸಾಧ್ಯತೆಗಳಿವೆ. ಅಲ್ಲದೆ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.
'800' ಬಯೋಪಿಕ್ ಯಾಕೆ? ತಮಿಳರ ವಿರೋಧವೇಕೆ?
ಶ್ರೀಲಂಕಾದ ಮಾಜಿ ಕ್ರಿಕೆಟರ್ ಮುತ್ತಯ್ಯ ಮುರಳೀಧರ್ ಬಯೋಪಿಕ್ ಭಾರತದಲ್ಲಿ ಮಾಡುತ್ತಿರೋದೇಕೆ? ಈ ಪ್ರಶ್ನೆ ಉತ್ತರ ಸಿಂಪಲ್. ಮುತ್ತಯ್ಯ ಮುರಳೀಧರನ್ ಪೂರ್ವಜರು ತಮಿಳುನಾಡು ಮೂಲದವರು. ಹಲವು ವರ್ಷಗಳ ಹಿಂದೆ ಭಾರತ ಬಿಟ್ಟು ಶ್ರೀಲಂಕಾಗೆ ತೆರಳಿದ್ದರು. ಹಾಗೇ ತಮಿಳುನಾಡಿನ ಹುಡುಗಿಯನ್ನೇ ವಿವಾಹವಾಗಿದ್ದರು. ಈ ಕಾರಣಕ್ಕೆ ತಮಿಳಿನ ನಂಟು ಇರುವುದರಿಂದ ಬಯೋಪಿಕ್ ಮಾಡಲಾಗುತ್ತಿದೆ.
ಇನ್ನು ಮುತ್ತಯ್ಯ ಮುರಳೀಧರನ್ ಬಯೋಪಿಕ್‌ಗೆ ವಿರೋಧ ಯಾಕೆ? ಅನ್ನೋ ಪ್ರಶ್ನೆ ಎದುರಾಗೋದು ಸಹಜ. ಈ ಹಿಂದೆ ಶ್ರೀಲಂಕಾದಲ್ಲಿರೋ ತಮಿಳರ ವಿರುದ್ಧ ಅಲ್ಲಿನ ಸರ್ಕಾರ ದೌರ್ಜನ್ಯ ಎಸಗಿತ್ತು. ಹಲವಾರು ತಮಿಳರನ್ನು ಹತ್ಯೆ ಮಾಡಿತ್ತು. ಆ ವೇಳೆ ತಮಿಳರ ಪರವಾಗಿ ಮುತ್ತಯ್ಯ ಮುರಳೀಧರನ್ ಒಂದೇ ಒಂದು ಮಾತು ಆಡಿರಲಿಲ್ಲ. ಈಗಾಗಿ ಆ ವ್ಯಕ್ತಿಯ ಬಯೋಪಿಕ್ ಬೇಡ ಅನ್ನೋ ಅಂತ ತಮಿಳರು ಆಕ್ರೋಶ ಹೊರಹಾಕಿದ್ದರು.


Click it and Unblock the Notifications











