80ರ ದಶಕದ ಹಾಟ್ ಬ್ಯೂಟಿ ಸಿಲ್ಕ್ ಸ್ಮಿತಾ ಅಮ್ಮನನ್ನು ನೋಡಿದ್ದೀರಾ? ಇಲ್ಲಿದೆ ಫೋಟೊ
ಸಿನಿಮಾ ಪ್ರೇಮಿಗಳಿಗೆ ಸಿಲ್ಕ್ ಸ್ಮಿತಾ ಯಾರು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ತನ್ನ ಅಂದವಾದ ಕಣ್ಣುಗಳಿಂದಲೇ ಮೋಡಿ ಮಾಡುತ್ತಿದ್ದ ಈ ಬ್ಯೂಟಿ 80 ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ನಟಿ ಕಮ್ ಐಟಂ ಡ್ಯಾನ್ಸರ್. ಈ ನಟಿ ಸತ್ತು 28 ವರ್ಷಗಳಾದರೂ, ಸಿಲ್ಕ್ ಸ್ಮಿತಾ ಬಗ್ಗೆ ಒಂದಲ್ಲ ಒಂದು ಇಂಟ್ರೆಸ್ಟಿಂಗ್ ಸುದ್ದಿಗಳು ಹೊರಬೀಳುತ್ತಲೇ ಇರುತ್ತೆ.
ಸಿಲ್ಕ್ ಸ್ಮಿತಾ ಬಗ್ಗೆ ನೂರು ಮಂದಿ ನೂರೆಂಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರೊಂದಿಗೆ ನಟಿಸಿದ ಕಲಾವಿದರು ಆಕೆಯ ಐಶಾರಾಮಿ ಬದುಕನ್ನು ವರ್ಣಿಸಿದ್ದಾರೆ. ಹಾಗೇ ಆಕೆಯ ಅವನತಿಯ ದಿನಗಳಲ್ಲಿ ನೋಡಿದ್ದಾರೆ. ಐಟಂ ಡ್ಯಾನ್ಸರ್ ಆಗಿದ್ದುಕೊಂಡು ಸಿನಿಮಾ ಜಗತ್ತನ್ನು, ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದ ನಟಿಯೀಕೆ.

ಈ ನಟಿಯ ಜನಪ್ರಿಯತೆ ಹೇಗಿತ್ತು? ಅನ್ನುವುದಕ್ಕೆ ಸಾಕಷ್ಟು ನಿದರ್ಶನಗಳನ್ನು ಹಲವು ಮಂದಿ ಈಗಾಗಲೇ ಕೊಟ್ಟಿದ್ದಾರೆ. ಸಿನಿಮಾ ಸೆಟ್ಟಲ್ಲಿ ಈಕೆ ಕಚ್ಚಿಟ್ಟ ಸೇಬು ಹಣ್ಣಿಗಾಗಿ ಕಿತ್ತಾಡಿದ ಉದಾಹರಣೆಗಳು ಇವೆ. ಇವೆಲ್ಲಾ ಕೇವಲ ಸಿಲ್ಕ್ ಸ್ಮಿತಾ ಬಗ್ಗೆ ಇರುವ ಮಾಹಿತಿ. ಆದರೆ, ಸಿಲ್ಕ್ ಸ್ಮಿತಾ ತಂದೆ - ತಾಯಿ ಯಾರು? ಅವರೊಂದಿಗೆ ಸಿಲ್ಕ್ ಸ್ಮಿತಾ ಸಂಬಂಧ ಹೇಗಿತ್ತು? ಅನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದ್ರೀಗ ಬಹಳ ವರ್ಷಗಳ ಬಳಿಕ ಸಿಲ್ಕ್ ಸ್ಮಿತಾ ಅಮ್ಮನೊಂದಿಗಿರುವ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿಲ್ಕ್ ಸ್ಮಿತಾ ಚಿತ್ರರಂಗದಲ್ಲಿ ಗೆದ್ದಿದ್ದೇ ಸಾಹಸ
ಸಿಲ್ಕ್ ಸ್ಮಿತಾಗೆ ಸಿನಿಮಾರಂಗದ ಹಿನ್ನೆಲೆ ಇರಲಿಲ್ಲ ಅನ್ನೋದು ಗೊತ್ತೇ ಇದೆ. ಸಿನಿಮಾದಲ್ಲಿ ಕೆಲಸ ಮಾಡಲೇ ಬೇಕು ಅಂತ ತನ್ನ ಗಂಡನ ಮನೆಯನ್ನು ಬಿಟ್ಟು ಬಂದಿದು, ಸಾಧನೆ ಮಾಡಿದ ನಟಿಯೀಕೆ. ಏನೂ ಇಲ್ಲದೆ ಬರೀಗೈನಲ್ಲಿ ಬಂದಿದ್ದ ಸಿಲ್ಕ್ ಸ್ಮಿತಾ ಒಂದು ದಿನ ಸಿನಿಮಾರಂಗದಲ್ಲಿ ಡ್ಯಾನ್ಸರ್ ಆಗುತ್ತೇನೆ ಅಂದುಕೊಂಡಿರಲಿಲ್ಲ. ಅಂದಿನ ಕಾಲದ ನಟಿಯರಿಗೂ ಇಲ್ಲದ ಬೇಡಿಕೆ ಸಿಲ್ಕ್ ಸ್ಮಿತಾಗೆ ಇತ್ತು.
ಸಿಲ್ಕ್ ಸ್ಮಿತಾ ಪ್ರೇಮ ವೈಫಲ್ಯ
ಬಣ್ಣ ಹಚ್ಚಿದ ಘಳಿಗೆಯಿಂದ ಸಿಲ್ಕ್ ಸ್ಮಿತಾಗೆ ಚಿತ್ರರಂಗ ಒಳ್ಳೆಯ ಪಾಠವನ್ನೇ ಕಲಿಸಿತ್ತು. ಸೆಟ್‌ನಲ್ಲಿ ಗ್ಲಾಮರಸ್ ರೋಲ್‌ಗಳಲ್ಲಿ ನಟಿಸಿದ್ದರೂ, ಸಿಲ್ಕ್ ಸ್ಮಿತಾ ರಫ್ ಅಂಡ್ ಟಫ್ ಆಗಿರುತ್ತಿದ್ದರು. ಚಿತ್ರರಂಗದಲ್ಲಿ ಹಣ, ಹೆಸರು ಸಂಪಾದನೆ ಮಾಡಿದ್ದರೂ, ಜೀವನದಲ್ಲಿ ಪ್ರೀತಿಯೊಂದು ಮಾತ್ರ ಸಿಗಲಿಲ್ಲ. ಪ್ರೀತಿಯ ಹೆಸರಲ್ಲಿ ಸಿಲ್ಕ್ ಸ್ಮಿತಾಗೆ ಮೋಸ ಮಾಡಿದವರೇ ಹೆಚ್ಚು. ಹೀಗಾಗಿ ಕುಡಿತದ ಚಟ ಹೆಚ್ಚಾಗಿ ಖಿನ್ನತೆಗೆ ಜಾರಿದ್ದರು. ಆಕೆ ಸಾವಿಗೆ ಶರಣಾದಾಗ, ಆಕೆಯ ಬಳಿ ಯಾರೂ ಇರಲಿಲ್ಲ ಅನ್ನೋ ಸುದ್ದಿ ಹರಿದಾಡಿತ್ತು. ಆದ್ರೀಗ ಆಕೆಯ ಅಮ್ಮ ಅಳುತ್ತಿರುವ ಫೋಟೊ ಎಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಸಿಲ್ಕ್ ಸ್ಮಿತಾ ಅಮ್ಮನ ಫೋಟೊ
ಸಿಲ್ಕ್ ಸ್ಮಿತಾ ಅಪಾರ ಅಭಿಮಾನಿಗಳನ್ನು ಅಗಲಿದ ದಿನ ಚಿತ್ರರಂಗ ಆಗಲಿ, ಆಕೆಯ ಕುಟುಂಬಸ್ಥರಾಗಲಿ ಬಂದಿರಲಿಲ್ಲ ಅನ್ನೋ ಸುದ್ದಿ ಸದ್ದು ಮಾಡಿತ್ತು. ಆದರೆ, ಸಿಲ್ಕ್ ಸ್ಮಿತಾ ಅವರ ಅಮ್ಮನೊಂದಿಗೆ ಇರುವ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಒಂದು ಫೋಟೊದಲ್ಲಿ ಸಿಲ್ಕ್ ಸ್ಮಿತಾ ಅಮ್ಮ ನರಸಮ್ಮನ ಹೆಗಲ ಮೇಲೆ ಕೈ ಹಾಕಿ ನಿಂತಿದ್ದಾರೆ. ಇನ್ನೊಂದರಲ್ಲಿ ಸಿಲ್ಕ್ ಸ್ಮಿತಾ ಸತ್ತಾ ಅಳುತ್ತಿರುವ ಫೋಟೊ ಎಂದು ತಮಿಳು ಮಾಧ್ಯಮಗಳಲ್ಲಿ ವರದಿಯಾಗಿವೆ.
ಸಿಲ್ಕ್ ಸ್ಮಿತಾ ಆತ್ಮಹತ್ಯೆ
ಸಿಲ್ಕ್ ಸ್ಮಿತಾ ಕೊನೆಯ ದಿನಗಳು ಕಠಿಣವಾಗಿದ್ದರು. ಕೈಯಲ್ಲಿ ಹಣವಿರಲಿಲ್ಲ. ಪ್ರೀತಿಯ ನಾಟಕವಾಗಿ ಮೋಸ ಮಾಡಿದ್ದರು. ನಿರಂತರ ಸೋಲಿನಿಂದ ಆಫರ್‌ಗಳು ಸಿಕ್ಕಿರಲಿಲ್ಲ. ಇದೆಲ್ಲದರಿಂದ ನೊಂದಿದ್ದ ಸಿಲ್ಕ್ ಸ್ಮಿತಾ 23 ಸೆಪ್ಟೆಂಬರ್ 1996ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಕೆಲವರು ಸಿಲ್ಕ್ ಸ್ಮಿತಾ ಸಾವಿನ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿದ್ದರು. ಅದೇನೆ ಇದ್ದರೂ, ಸಿಲ್ಕ್ ಸ್ಮಿತಾ ತಾಯಿ ಎನ್ನಲಾದ ಅಪರೂಪದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.


Click it and Unblock the Notifications











